ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆಲುವಿನತ್ತ ಟಿಎಂಸಿ, ಸೋಲಿನತ್ತ ಮಮತಾ ಬ್ಯಾನರ್ಜಿ!

|
Google Oneindia Kannada News

ಪಂಚ ರಾಜ್ಯಗಳ ಚುನಾವಣೆಯಲ್ಲಿ ಹೆಚ್ಚು ಗಮನ ಸೆಳೆದಿದ್ದಿದ್ದು ಪಶ್ಚಿಮ ಬಂಗಾಳ. ಮಮತಾ ಬ್ಯಾನರ್ಜಿಯನ್ನು ಅಧಿಕಾರದಿಂದ ಇಳಿಸಿಯೇ ಸಿದ್ಧವೆಂದು ಅಮಿತ್ ಶಾ, ಮೋದಿ, ಜೆಪಿ ನಡ್ಡಾ ಅವರುಗಳು ಅಖಾಡಕ್ಕೆ ಇಳಿದಿದ್ದರು. ಆದರೆ ಈ ವರೆಗಿನ ಚುನಾವಣಾ ಫಲಿತಾಂಶ ಗಮನಿಸಿದರೆ ಬಿಜೆಪಿ ಉದ್ದೇಶದ ಮೇಲೆ ತಣ್ಣೀರು ಎರಚಿದ್ದಾರೆ ಮತದಾರರು.

ಪಶ್ಚಿಮ ಬಂಗಾಳದಲ್ಲಿ ಮಮತಾ ನೇತೃತ್ವದ ಟಿಎಂಸಿ ಪಕ್ಷವು ಸ್ಪಷ್ಟ ಬಹುಮತದತ್ತ ಸಾಗಿದೆ. ಈಗಾಗಲೇ ಮ್ಯಾಜಿಕ್ ಸಂಖ್ಯೆ ದಾಟಿರುವ ಟಿಎಂಸಿ 180 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆದರೆ ಬಿಜೆಪಿ ಇನ್ನೂ 100 ಕ್ಷೇತ್ರಗಳಲ್ಲಿಯೂ ಮುನ್ನಡೆಗಳಿಸಿಲ್ಲ.

Assembly Election Results 2021 Live Updates: 5 ರಾಜ್ಯಗಳ ಚುನಾವಣೆ ಫಲಿತಾಂಶAssembly Election Results 2021 Live Updates: 5 ರಾಜ್ಯಗಳ ಚುನಾವಣೆ ಫಲಿತಾಂಶ

ಟಿಎಂಸಿ ದೊಡ್ಡ ಮುನ್ನಡೆ ಸಾಧಿಸಿದೆಯಾದರೂ ಪಕ್ಷದವರು ಸಂಭ್ರಮ ಪಡುವಂತಿಲ್ಲ ಏಕೆಂದರೆ ಸಿಂ ಅಭ್ಯರ್ಥಿ ಹಾಲಿ ಸಿಎಂ ಮಮತಾ ಬ್ಯಾನರ್ಜಿ ಅವರು ಸೋಲಿನತ್ತ ಸಾಗಿದ್ದಾರೆ.

 West Bengal Assembly Election Results 2021: TMC Is Winning But Mamta Banarjee Is Trailing

ನಂದಿ ಗ್ರಾಮ ಕ್ಷೇತ್ರದಲ್ಲಿ ತಮ್ಮ ಮಾಜಿ ಬಲಗೈ ಭಂಟ ಸುವೇಂದು ಅಧಿಕಾರಿ ವಿರುದ್ಧ ಚುನಾವಣೆಗೆ ಸ್ಪರ್ಧಿಸಿರುವ ಮಮತಾ 8000 ಕ್ಕೂ ಹೆಚ್ಚು ಮತಗಳ ಹಿನ್ನಡೆ ಅನುಭವಿಸುತ್ತಿದ್ದಾರೆ.

ತಮಗೆ, ತಮ್ಮ ಪಕ್ಷಕ್ಕೆ ಕೈಕೊಟ್ಟು ಬಿಜೆಪಿ ಜೊತೆ ಕೈಸೇರಿಸಿದ ಸುವೇಂದು ಅಧಿಕಾರಿಯನ್ನು ಸೋಲಿಸಲೇ ಬೇಕು ಎಂಬ ಹಠದೊಂದಿಗೆ ತಮ್ಮ ಸ್ವಕ್ಷೇತ್ರವನ್ನು ತ್ಯಜಿಸಿ ನಂದಿ ಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದರು. ಆದರೆ ಮಮತಾ ಅವರಿಗೆ ನಂದಿ ಗ್ರಾಮದಲ್ಲಿ ಸೋಲು ಎದುರುಗೊಳ್ಳುವ ಸಾಧ್ಯತೆ ಇದೆ.

Karnataka By Elections Results 2021 Live Updates: ಉಪ ಚುನಾವಣೆ ಫಲಿತಾಂಶKarnataka By Elections Results 2021 Live Updates: ಉಪ ಚುನಾವಣೆ ಫಲಿತಾಂಶ

ಮೂರು ಸುತ್ತಿನ ಮತ ಎಣಿಕೆ ಆಗಿದ್ದು ಇನ್ನೂ ಕೆಲವು ಸುತ್ತಿನ ಮತ ಎಣಿಕ ಬಾಕಿ ಇದೆಯಾದರೂ ಮಮತಾಗೆ ಇಲ್ಲಿ ಗೆಲುವು ಸಾಧಿಸುವುದು ಕಷ್ಟವಾಗಲಿದೆ. ಒಂದೊಮ್ಮೆ ಮಮತಾ ಅವರು ಇಲ್ಲಿ ಸೋತರೆ ಪಕ್ಷದಲ್ಲಿನ ಮಮತಾ ಅವರ ನಿರಂಕುಶ ನಾಯಕತ್ವಕ್ಕೆ ಕೊಂಕಾಗುವ ಸಾಧ್ಯತೆ ಇದೆ. ಮಮತಾ ಬ್ಯಾನರ್ಜಿ ಸೋತರೂ ಸಹ ಅವರೇ ಸಿಎಂ ಆಗುವ ಸಾಧ್ಯತೆಯೇ ದಟ್ಟವಾಗಿದೆ.

English summary
West Bengal Assembly Election Results 2021: TMC is leading in more than 180 seats. But Mamta Banarjee is trailing in Nandigram constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X