ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳ: ಕಳೆದ ಚುನಾವಣಾಪೂರ್ವ ಸಮೀಕ್ಷೆಗಳು ಹೇಳಿದ್ದೇನು, ಆಗಿದ್ದೇನು?

|
Google Oneindia Kannada News

ಕೋಲ್ಕತ್ತಾ, ಮಾರ್ಚ್ 17: ಎಂಟು ಹಂತದಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ತಿಂಗಳ 27ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ.

ಈಗಾಗಲೇ ಹಲವು ಖಾಸಗಿ ಸುದ್ದಿ ಸಂಸ್ಥೆಗಳು ಜಂಟಿ ಸಹಯೋಗದೊಂದಿಗೆ ಚುನಾವಣಾಪೂರ್ವ ಸಮೀಕ್ಷೆಯನ್ನು ನಡೆಸಿವೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸತತವಾಗಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ಈ ಸಮೀಕ್ಷೆಯಲ್ಲಿ ಹೇಳಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗಿಲ್ಲ ಅದೃಷ್ಟ; ಎಬಿಪಿ-ಸಿ ವೋಟರ್ ಸಮೀಕ್ಷೆಪಶ್ಚಿಮ ಬಂಗಾಳದಲ್ಲಿ ಬಿಜೆಪಿಗಿಲ್ಲ ಅದೃಷ್ಟ; ಎಬಿಪಿ-ಸಿ ವೋಟರ್ ಸಮೀಕ್ಷೆ

ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಮತ್ತು ಟಿಎಂಸಿ ಮುಖಂಡರ ವಾಗ್ದಾಳಿ ತಾರಕಕ್ಕೇರುತ್ತಿದೆ. ಬಿಜೆಪಿಯನ್ನು ಪಶ್ಚಿಮ ಬಂಗಾಳದಿಂದ ಓಡಿಸಲು ನನ್ನ ಒಂದು ಕಾಲು ಸಾಕು ಎನ್ನುವ ವಿಶ್ವಾಸದ ಮಾತನ್ನು ಸಿಎಂ ಮಮತಾ ಬ್ಯಾನರ್ಜಿ ಆಡಿದ್ದಾರೆ.

ಎಬಿಪಿ, ಟೈಮ್ಸ್ ನೌ ಜೊತೆ ಸಿ-ವೋಟರ್ ನಡೆಸಿದ ಪ್ರಸಕ್ತ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಬಿಜೆಪಿ ಬಲವೃದ್ಧನೆಗೊಂಡರೂ, ಟಿಎಂಸಿಯೇ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಕಳೆದ ಅಂದರೆ 2016ರ ಅಸೆಂಬ್ಲಿ ಚುನಾವಣೆಯ ವೇಳೆ ಸಮೀಕ್ಷೆಗಳು ಹೇಳಿದ್ದು ಸರಿಯಾಗಿತ್ತೇ, ಮುಂದೆ ಓದಿ..

ಟೈಮ್ಸ್ ಸಿ-ವೋಟರ್ ಚುನಾವಣಾ ಪೂರ್ವ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಅಧಿಕಾರಟೈಮ್ಸ್ ಸಿ-ವೋಟರ್ ಚುನಾವಣಾ ಪೂರ್ವ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಅಧಿಕಾರ

 ಮಮತಾ ಬ್ಯಾನರ್ಜಿಯವರ ಸರಕಾರ ಅಧಿಕಾರಕ್ಕೇರಿತ್ತು

ಮಮತಾ ಬ್ಯಾನರ್ಜಿಯವರ ಸರಕಾರ ಅಧಿಕಾರಕ್ಕೇರಿತ್ತು

ಕಳೆದ ಚುನಾವಣೆಯ ವೇಳೆ ಫೆಬ್ರವರಿ - ಏಪ್ರಿಲ್ 2016ರ ಅವಧಿಯಲ್ಲಿ ನಡೆಸಲಾದ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ತೃಣಮೂಲ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನುವ ಫಲಿತಾಂಶ ಹೊರಬಿದ್ದಿತ್ತು. ಅದರಂತೇ, ಮಮತಾ ಬ್ಯಾನರ್ಜಿಯವರ ಸರಕಾರ ಅಧಿಕಾರಕ್ಕೇರಿತ್ತು. ಆದರೆ, ಗೆಲ್ಲಬಹುದಾದ ಸೀಟಿನ ವಿಚಾರದಲ್ಲಿ ಹೆಚ್ಚಿನ ಮಾಹಿತಿಗಳು ಕರಾರುವಕ್ಕಾಗಿರಲಿಲ್ಲ ಎನ್ನುವುದು ಸತ್ಯ.

 ಕಳೆದ ಚುನಾವಣೆಯಲ್ಲಿ ಪಕ್ಷಗಳು ಗೆದ್ದ ಸೀಟುಗಳೆಷ್ಟು?

ಕಳೆದ ಚುನಾವಣೆಯಲ್ಲಿ ಪಕ್ಷಗಳು ಗೆದ್ದ ಸೀಟುಗಳೆಷ್ಟು?

ಪಶ್ಚಿಮ ಬಂಗಾಳದ ಹಾಲಿ ಪಕ್ಷಗಳ ಸಂಖ್ಯಾಬಲ ಹೀಗಿದೆ:
ಒಟ್ಟು ಸ್ಥಾನಗಳು - 294
ಟಿಎಂಸಿ - 211
ಸಿಪಿಐ (ಎಂ) - 26
ಕಾಂಗ್ರೆಸ್ - 44
ಬಿಜೆಪಿ - 3
ಫಾರ್ವರ್ಡ್ ಬ್ಲಾಕ್ - 2
ಇತರರು - 8

 ಎಬಿಪಿ/ಎಸಿ ನೀಲ್ಸನ್ ಚುನಾವಣಾಪೂರ್ವ ಸಮೀಕ್ಷೆ

ಎಬಿಪಿ/ಎಸಿ ನೀಲ್ಸನ್ ಚುನಾವಣಾಪೂರ್ವ ಸಮೀಕ್ಷೆ

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ (2016) ವಿವಿಧ ಸಂಸ್ಥೆಗಳ ಸಮೀಕ್ಷೆ ಪ್ರಕಾರ, ಯಾವ ಪಕ್ಷ ಎಷ್ಟು ಸ್ಥಾನವನ್ನು ಗೆಲ್ಲಬಹುದು?
ಎಬಿಪಿ/ಎಸಿ ನೀಲ್ಸನ್ : 182 (ಟಿಎಂಸಿ), 107 (ಎಡಪಕ್ಷ ಮತ್ತು ಕಾಂಗ್ರೆಸ್), 0 (ಬಿಜೆಪಿ), 5 (ಇತರರು)
ಇಂಡಿಯಾ ಟಿವಿ/ಸಿವೋಟರ್ : 156 (ಟಿಎಂಸಿ), 127 (ಎಡಪಕ್ಷ ಮತ್ತು ಕಾಂಗ್ರೆಸ್), 4 (ಬಿಜೆಪಿ), 7 (ಇತರರು)
ಈಟಿವಿ ಬಂಗ್ಲಾ: 201 (ಟಿಎಂಸಿ), 61 (ಎಡಪಕ್ಷ ಮತ್ತು ಕಾಂಗ್ರೆಸ್), 1 (ಬಿಜೆಪಿ), 3 (ಇತರರು)

Recommended Video

Modi's best 3 advise to avoid covid 19 | Oneindia Kannada
 ಟೈಮ್ಸ್ ನೌ, ಇಂಡಿಯಾ ಟಿವಿ, ಸಿವೋಟರ್

ಟೈಮ್ಸ್ ನೌ, ಇಂಡಿಯಾ ಟಿವಿ, ಸಿವೋಟರ್

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ (2016) ವಿವಿಧ ಸಂಸ್ಥೆಗಳ ಸಮೀಕ್ಷೆ ಪ್ರಕಾರ, ಯಾವ ಪಕ್ಷ ಎಷ್ಟು ಸ್ಥಾನವನ್ನು ಗೆಲ್ಲಬಹುದು?
ಎಬಿಪಿ/ಎಸಿ ನೀಲ್ಸನ್ (ಮಾರ್ಚ್ 2016ರಲ್ಲಿ ನಡೆಸಿದ ಸಮೀಕ್ಷೆ) : 178 (ಟಿಎಂಸಿ), 110 (ಎಡಪಕ್ಷ ಮತ್ತು ಕಾಂಗ್ರೆಸ್), 1 (ಬಿಜೆಪಿ), 5 (ಇತರರು)
24 ಗಂಟಾ : 200 (ಟಿಎಂಸಿ), 90 (ಎಡಪಕ್ಷ ಮತ್ತು ಕಾಂಗ್ರೆಸ್), 1 (ಬಿಜೆಪಿ), 3 (ಇತರರು)
ಟೈಮ್ಸ್ ನೌ, ಇಂಡಿಯಾ ಟಿವಿ, ಸಿವೋಟರ್ : 160 (ಟಿಎಂಸಿ), 127 (ಎಡಪಕ್ಷ ಮತ್ತು ಕಾಂಗ್ರೆಸ್), 4 (ಬಿಜೆಪಿ), 3 (ಇತರರು)

English summary
West Bengal Assembly Election, Pre-Poll Survey Versus Actual Result In 2016
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X