• search
 • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿರೋಧಿ ಪಾಳಯಕ್ಕೆ ನುಗ್ಗಿ ಹೋರಾಡಿ ಗೆದ್ದ ಮಮತಾ ಬ್ಯಾನರ್ಜಿ

|

ಪಶ್ಚಿಮ ಬಂಗಾಳ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಮತ್ತೆ ಅಧಿಕಾರಕ್ಕೆ ಬರುವುದು ಖಾತ್ರಿಯಾಗಿ ಕೆಲವು ಗಂಟೆಗಳೇ ಕಳೆದಿವೆ. ಆದರೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದ ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾಗೆ ಹಿನ್ನಡೆ ಆಗಿತ್ತು, ಆದರೆ ಅಂತಿಮ ಸುತ್ತಿನಲ್ಲಿ ಮಮತಾ ಬ್ಯಾನರ್ಜಿಗೆ ಗೆಲುವಾಗಿದೆ.

ನಂದಿಗ್ರಾಮ ಕ್ಷೇತ್ರದಲ್ಲಿ ಮಾಜಿ ಬಲಗೈ ಭಂಟ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಸ್ಪರ್ಧೆ ಮಾಡಿದ್ದರು. ಆರಂಭದಿಂದಲೂ ಸುವೇಂದು ಅಧಿಕಾರಿಯೇ ಮುನ್ನಡೆ ಕಾಯ್ದುಕೊಂಡಿದ್ದರು, ಆದರೆ ಕೊನೆಯ ಎರಡು ಸುತ್ತುಗಳಲ್ಲಿ ಮುನ್ನಡೆಗೆ ಬಂದ ಮಮತಾ ಬ್ಯಾನರ್ಜಿ ಮುನ್ನಡೆಯನ್ನು ಗೆಲುವಾಗಿ ಪರಿವರ್ತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುವೇಂದು ಅಧಿಕಾರಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇಡೀ ರಾಷ್ಟ್ರದ ಕಣ್ಣೇ ನಂದಿಗ್ರಾಮ ಕ್ಷೇತ್ರದ ಮೇಲಿತ್ತು. ಆದರೆ ಈಗ ಎಲ್ಲವೂ ಸ್ಪಷ್ಟವಾಗಿದ್ದು ಮಮತಾ ಬ್ಯಾನರ್ಜಿ 1900 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.

ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಸಚಿವರಾಗಿದ್ದ ಸುವೇಂದು ಅಧಿಕಾರಿ ಹಠಾತ್ತನೆ ಪಕ್ಷಕ್ಕೆ ಕೈಕೊಟ್ಟು ಬಿಜೆಪಿ ಸೇರಿದರು. ನನಗೆ ಬೆನ್ನಿಗೆ ಚೂರಿ ಹಾಕಿದವನನ್ನು ಅವನ ಕ್ಷೇತ್ರದಲ್ಲಿಯೇ ಸೋಲಿಸುತ್ತೇನೆ ಎಂಬ ಪಣತೊಟ್ಟು ತಾವು ನಂದಿಗ್ರಾಮದಿಂದಲೇ ಚುನಾವಣೆ ಸ್ಪರ್ಧಿಸುವುದಾಗಿ ಮಮತಾ ಘೋಷಿಸಿದರು.

ಮಮತಾ ಅವರನ್ನು 50,000 ಮತಗಳ ಅಂತರದಿಂದ ಸೋಲಿಸುತ್ತೇನೆ ಎಂದು ಸುವೇಂದು ಅಧಿಕಾರಿ ಬಹಿರಂಗ ಸವಾಲು ಹಾಕಿದ್ದರು. ಅಮಿತ್ ಶಾ, ಜೆಪಿ ನಡ್ಡಾ, ಮೋದಿ ಇನ್ನೂ ಹಲವು ಬಿಜೆಪಿ ಅಗ್ರಪಂಥೀಐ ನಾಯಕರು ಮಮತಾ ವಿರುದ್ಧ ಶೋಗಳು ನಡೆಸಿದರೂ ಮಮತಾ ಸುವೇಂದು ವಿರುದ್ಧ ಗೆದ್ದೇ ಬಿಟ್ಟಿದ್ದಾರೆ.

   ಸದ್ಯದಲ್ಲೇ ರಾಷ್ಟ್ರೀಯ ಪಕ್ಷಗಳ ವಿರುದ್ಧ JDS ಸೆಟೆದು ನಿಲ್ಲುತ್ತೆ ಅಂದ್ರು ಎಚ್ ಡಿ ಕುಮಾರಸ್ವಾಮಿ

   ತಾವೊಬ್ಬ ಹಠವಾದಿ, ಛಲವಾದಿ ಎಂಬುದನ್ನು ಮಮತಾ ಈ ಚುನಾವಣೆ ಮೂಲಕ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

   English summary
   West Bengal assembly election 2021: Mamata Banarjee won against Suvendu Adhikari in Nadigram constituency in a very close fight.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X