ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಕ್ರಿಕೆಟಿಗ ಅಶೋಕ್ ದಿಂಡಾಗೆ ಮೋಯ್ನಾದಿಂದ ಟಿಕೆಟ್ ನೀಡಿದ ಬಿಜೆಪಿ

|
Google Oneindia Kannada News

ಕೋಲ್ಕತಾ, ಮಾರ್ಚ್ 7: ಕಳೆದ ತಿಂಗಳು ಬಿಜೆಪಿ ಸೇರ್ಪಡೆಯಾಗಿದ್ದ ಮಾಜಿ ಕ್ರಿಕೆಟಿಗ ಅಶೋಕ್ ದಿಂಡಾ, ಪಶ್ಚಿಮ ಬಂಗಾಳದ ಪುರ್ಬ ಮೇದಿನಿಪುರ ಜಿಲ್ಲೆಯ ಮೋಯ್ನಾ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಬಲಗೈ ವೇಗಿ ದಿಂಡಾ ಅವರು ತಮ್ಮ ಅಭ್ಯರ್ಥಿಯಾಗಿರಲಿದ್ದಾರೆ ಎಂದು ಬಿಜೆಪಿ ಶನಿವಾರ ಪ್ರಕಟಿಸಿದೆ.

ಕೋಲ್ಕತಾದಲ್ಲಿ ಕಳೆದ ತಿಂಗಳು ನಡೆದ ಸಾರ್ವಜನಿಕ ಸಭೆಯೊಂದರ ವೇಳೆ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರ್ಜುನ್ ಸಿಂಗ್ ಅವರ ಸಮ್ಮುಖದಲ್ಲಿ ಅಶೋಕ್ ದಿಂಡಾ ಬಿಜೆಪಿಗೆ ಸೇರಿಕೊಂಡಿದ್ದರು.

ನಿವೃತ್ತಿ ಘೋಷಿಸಿದ ಮೂರು ವಾರದಲ್ಲೇ ಮಾಜಿ ಕ್ರಿಕೆಟಿಗ ಅಶೋಕ್ ದಿಂಡಾ ಬಿಜೆಪಿ ಸೇರ್ಪಡೆನಿವೃತ್ತಿ ಘೋಷಿಸಿದ ಮೂರು ವಾರದಲ್ಲೇ ಮಾಜಿ ಕ್ರಿಕೆಟಿಗ ಅಶೋಕ್ ದಿಂಡಾ ಬಿಜೆಪಿ ಸೇರ್ಪಡೆ

ಪಶ್ಚಿಮ ಬಂಗಾಳ ರಣಜಿ ತಂಡದಲ್ಲಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದ ಅಶೋಕ್ ದಿಂಡಾ, ಭಾರತ ತಂಡದ ಪರ 13 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿ 12 ಹಾಗೂ 17 ವಿಕೆಟ್‌ಗಳನ್ನು ಪಡೆದಿದ್ದರು.

West Bengal Assembly Election 2021: Former Cricketer Ashoke Dinda Is BJPs Candidate From Moyna

ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಹೊಸ ಇನ್ನಿಂಗ್ಸ್‌ಗೆ ಪಿಚ್ ಸಜ್ಜು!ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಹೊಸ ಇನ್ನಿಂಗ್ಸ್‌ಗೆ ಪಿಚ್ ಸಜ್ಜು!

ತಮ್ಮ ಕ್ರಿಕೆಟ್ ಸಹೋದ್ಯೋಗಿಯಾಗಿದ್ದ ಮನೋಜ್ ತಿವಾರಿ ತೃಣಮೂಲ ಕಾಂಗ್ರೆಸ್ ಸೇರಿಕೊಂಡ ದಿನವೇ ಅಶೋಕ್ ದಿಂಡಾ ಬಿಜೆಪಿ ಸೇರ್ಪಡೆಯಾಗಿದ್ದರು.

 ಬಿಜೆಪಿ ಸೇರುವರೇ ಸೌರವ್ ಗಂಗೂಲಿ? ಪಶ್ಚಿಮ ಬಂಗಾಳ ಬಿಜೆಪಿ ಮುಖಂಡನ ಸ್ಪಷ್ಟನೆ ಬಿಜೆಪಿ ಸೇರುವರೇ ಸೌರವ್ ಗಂಗೂಲಿ? ಪಶ್ಚಿಮ ಬಂಗಾಳ ಬಿಜೆಪಿ ಮುಖಂಡನ ಸ್ಪಷ್ಟನೆ

ಮೊಯ್ನಾ ಕ್ಷೇತ್ರದಲ್ಲಿ 2016ರ ಚುನಾವಣೆಯಲ್ಲಿ ಟಿಎಂಸಿಯ ಸಂಗ್ರಾಮ್ ಕುಮಾರ್ ದೋಲಾ ಅವರು ಕಾಂಗ್ರೆಸ್‌ನ ಮಾಣಿಕ್ ಭೌಮಿಕ್ ಅವರನ್ನು ಸುಮಾರು 12,000 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿಯೂ ಅವರೇ ಟಿಎಂಸಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

English summary
West Bengal Assembly Election 2021: Former cricketer Ashoke Dinda will be contest from Moyna constituency. He joined BJP last month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X