• search
 • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಶ್ಚಿಮ ಬಂಗಾಳ: ಕಣಕ್ಕಿಳಿದ ಸಿನಿ ತಾರೆಯರಲ್ಲಿ ಗೆದ್ದವರೆಷ್ಟು?

|
Google Oneindia Kannada News

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶ ನಿನ್ನೆಯಷ್ಟೆ ಬಂದಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷವು ದೊಡ್ಡ ಗೆಲುವು ಸಾಧಿಸಿದೆ.

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಹಲವಾರು ಮಂದಿ ಸಿನಿಮಾ ನಟ-ನಟಿಯರು, ಕ್ರಿಕೆಟ್ ಆಟಗಾರರು ಸಹ ಕಣಕ್ಕೆ ಇಳಿದಿದ್ದರು. ಟಿಎಂಸಿ ಹಾಗೂ ಬಿಜೆಪಿ ಎರಡೂ ಸಹ ನಟ, ನಟಿಯರು, ಹಾಡುಗಾರರಿಗೆ ಪಕ್ಷದಿಂದ ಟಿಕೆಟ್ ನೀಡಿತ್ತು ಅವರಲ್ಲಿ ಹಲವರು ಗೆದ್ದಿದ್ದಾರೆ, ಹಲವರು ಸೋತಿದ್ದಾರೆ. ಇಲ್ಲಿದೆ ನೋಡಿ ಪೂರ್ಣ ಪಟ್ಟಿ.

ಭಾರತವನ್ನು 'ಚುಚ್ಚು'ತ್ತಿರುವ ಕೊರೊನಾವೈರಸ್ 'ಮದ್ದಿ'ನ ಸುತ್ತಲು ಒಂದು ವರದಿ! ಭಾರತವನ್ನು 'ಚುಚ್ಚು'ತ್ತಿರುವ ಕೊರೊನಾವೈರಸ್ 'ಮದ್ದಿ'ನ ಸುತ್ತಲು ಒಂದು ವರದಿ!

ಪಶ್ಚಿಮ ಬಂಗಾಳದ ನಟ, ನಾಟಕಕಾರ, ಚಿತ್ರಕತೆ ಬರಹಗಾರ, ನಾಟಕ ನಿರ್ದೇಶಕ ಬರ್ತ್ಯ ಬಸು ಅವರು ಡಮ್‌ ಡಮ್ ಕ್ಷೇತ್ರದಿಂದ ಟಿಎಂಸಿ ಪರವಾಗಿ ಚುನಾವಣೆ ಸ್ಪರ್ಧಿಸಿ ದೊಡ್ಡ ಅಂತರದ ಜಯ ಸಾಧಿಸಿದ್ದಾರೆ. 2011 ರಲ್ಲಿಯೂ ಇದೇ ಕ್ಷೇತ್ರದಿಂದ ಬರ್ತ್ಯ ಗೆದ್ದಿದ್ದರು.

ಪಶ್ಚಿಮ ಬಂಗಾಳದ ಯಶಸ್ವಿ ಯುವ ಸಿನಿಮಾ ನಿರ್ದೇಶಕ ರಾಜ್ ಚಕ್ರಬೊರ್ತಿ, ಟಿಎಂಸಿ ಟಿಕೆಟ್‌ ಮೂಲಕ ಬರ್ರಾಕ್‌ಪುರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇತ್ತೀಚೆಗಷ್ಟೆ ಇವರು ಟಿಎಂಸಿ ಪಕ್ಷ ಸೇರಿದ್ದರು. ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿಯೇ ಗೆಲುವು ಸಾಧಿಸಿದ್ದಾರೆ.

ಸುಂದರಿ ಕೌಶಿಲಿ ಮುಖರ್ಜಿಗೆ ಸೋಲು

ಸುಂದರಿ ಕೌಶಿಲಿ ಮುಖರ್ಜಿಗೆ ಸೋಲು

ಹಲವು ಬೆಂಗಾಳಿ ಸಿನಿಮಾಗಳಲ್ಲಿ ನಟಿಸಿರುವ ಕೌಶಿಲಿ ಮುಖರ್ಜಿ ಕೃಷ್ಣಾನಗರ ಉತ್ತರ ಕ್ಷೇತ್ರದಲ್ಲಿ ಪ್ರಬಲ ಎದುರಾಳಿ ಬಿಜೆಪಿಯ ಮುಕುಲ್ ರಾಯ್ ವಿರುದ್ಧ ಸೋಲನುಭವಿಸಿದ್ದಾರೆ. ಮಾಡೆಲ್ ಸಹ ಆಗಿರುವ ಕೌಶಿಲಿ ಮುಖರ್ಜಿ ಟಿಎಂಸಿ ಪರವಾಗಿ ಸ್ಪರ್ಧಿಸಿದ್ದರು.

ಹಾಡುಗಾರ್ತಿ ಅದಿತಿ ಮುನ್ಶಿ, ನಟ ಚಿರಂಜೀತ್ ಚಕ್ರಬರ್ತಿ

ಹಾಡುಗಾರ್ತಿ ಅದಿತಿ ಮುನ್ಶಿ, ನಟ ಚಿರಂಜೀತ್ ಚಕ್ರಬರ್ತಿ

ಖ್ಯಾತ ಹಾಡುಗಾರ್ತಿ, ನಟಿ ಅದಿತಿ ಮುನ್ಶಿ ಅವರು ಬಿಜೆಪಿಯ ಸಮಿಕ್ ಭಟ್ಟಾಚಾರ್ಯ ಅನ್ನು ಸೋಲಿಸಿ ಗೆಲುವು ಕಂಡಿದ್ದಾರೆ. ಟಿಎಂಸಿ ಪಕ್ಷದಿಂದ ರಜಾರತ್‌-ಗೋಲ್ಹಾಪುರ್ ಕ್ಷೇತ್ರದಿಂದ ಅವರು ಸ್ಪರ್ಧಿಸಿದ್ದರು. ಬಂಗಾಳದ ಹಿರಿಯ ನಟ, ನಿರ್ದೇಶಕ ಚಿರಂಜೀತ್ ಚಕ್ರಬರ್ತಿ ಬರಾಸತ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. 2011 ರಿಂದಲೂ ಚಿರಂಜೀತ್ ಟಿಎಂಸಿ ಶಾಸಕರಾಗಿದ್ದಾರೆ, ಕಳೆದ ಬಾರಿ ಸಚಿವರೂ ಆಗಿದ್ದರು.

ನಟಿ ಜೂನ್‌ಗೆ ಸುಲಭ ಗೆಲುವು

ನಟಿ ಜೂನ್‌ಗೆ ಸುಲಭ ಗೆಲುವು

ಹಲವು ಬೆಂಗಾಳಿ ಸಿನಿಮಾ, ಧಾರಾವಾಹಿ, ಟಿವಿ ಶೋ, ಡಾಕ್ಯುಮೆಂಟರಿ, ವೆಬ್ ಸರಣಿಗಳಲ್ಲಿ ನಟಿಸಿರುವ, ನಿರ್ದೇಶನ ಸಹ ಮಾಡಿರುವ ಜೂನ್ ಮಲಿಯಾ ಮೇಧಿನಿಪುರ ವಿಧಾನಸಭೆ ಕ್ಷೇತ್ರದಿಂದ ಸುಲಭವಾಗಿ ಗೆಲುವು ಸಾಧಿಸಿದ್ದಾರೆ. ಟಿಎಂಸಿ ಪಕ್ಷದಿಂದ ಅವರು ಸ್ಪರ್ಧಿಸಿದ್ದರು. ಟಿಎಂಸಿ ಮಹಿಳಾ ವಿಂಗ್‌ನ ಅಧ್ಯಕ್ಷೆಯೂ ಆಗಿದ್ದಾರೆ ಜೂನ್. ಬಂಗಾಳಿ ಸಿನಿಮಾ ಹಾಗೂ ಧಾರಾವಾಹಿ ನಟ ಕಂಚಾನ್ ಮುಲಿಕ್ ಅವರು ಹೂಗ್ಲಿಯ ಉತ್ತರಪರ ಕ್ಷೇತ್ರದಿಂದ ಸ್ಪರ್ಧಿಸಿ ಸುಲಭ ಗೆಲುವು ಸಾಧಿಸಿದ್ದಾರೆ. ಟಿಎಂಸಿಯಿಂದ ಸ್ಪರ್ಧಿಸಿದ್ದ ಕಂಚಾನ್ ಬಿಜೆಪಿಯನ್ನು ಸೋಲಿಸಿದ್ದಾರೆ.

ಬಾಬುಲ್ ಸುಪ್ರಿಯೊಗೆ ಸೋಲು

ಬಾಬುಲ್ ಸುಪ್ರಿಯೊಗೆ ಸೋಲು

ಹಾಡುಗಾರ ಮತ್ತು ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ತೋಲಿಗಂಜ್‌ನಿಂದ ಸ್ಪರ್ಧೆ ಮಾಡಿದ್ದರು. ಆದರೆ ಇಲ್ಲಿ ಸೋಲನುಭವಿಸಿದ್ದಾರೆ ಬಾಬುಲ್. ಮಮತಾ ಬ್ಯಾನರ್ಜಿ ಮೇಲೆ ತೀವ್ರ ವಾಗ್ದಾಳಿ ನಡೆಸುತ್ತ ಬಾಬುಲ್ ಇದೇ ಕಾರಣಕ್ಕೆ ಹೆಚ್ಚು ಜನಪ್ರಿಯರಾಗಿದ್ದರು.

ಲಾಕೆಟ್ ಚಟರ್ಜಿಗೆ ಸೋಲು

ಲಾಕೆಟ್ ಚಟರ್ಜಿಗೆ ಸೋಲು

ಹಲವಾರು ಬೆಂಗಾಳಿ ಸಿನಿಮಾಗಳಲ್ಲಿ ನಟಿಸಿರುವ ನಟಿ ಲಾಕೆಟ್ ಚಟರ್ಜಿ ಚುಚಾರಾ ಕ್ಷೇತ್ರದಲ್ಲಿ ಗೆಲ್ಲಲು ವಿಫಲರಾಗಿದ್ದಾರೆ. ಲಾಕೆಟ್ ಚಟರ್ಜಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದರು. ಟಿಎಂಸಿ ಅಭ್ಯರ್ಥಿ ಅಸಿತ್ ಮಜುಮ್‌ದಾರ್ ವಿರುದ್ಧ ಅವರು ಸೋತಿದ್ದಾರೆ.

ನಟಿ ಪಪಿಯಾ ಅಧಿಕಾರಿಗೆ ಸೋಲು

ನಟಿ ಪಪಿಯಾ ಅಧಿಕಾರಿಗೆ ಸೋಲು

ದಕ್ಷಿಣ ಉಲ್‌ಬೇರಿ ಕ್ಷೇತ್ರದಲ್ಲಿ ನಟಿ ಪಾಪಿಯಾ ಅಧಿಕಾರಿ ಬಿಜೆಪಿ ಪರವಾಗಿ ಸ್ಪರ್ಧಿಸಿ ಟಿಎಂಸಿ ಅಭ್ಯರ್ಥಿ ವಿರುದ್ಧ ಸೋಲನುಭವಿಸಿದ್ದಾರೆ. ಹಿರಿಯ ನಟ ಯಶ್ ದಾಸ್‌ಗುಪ್ತ ಬಿಜೆಪಿ ಪರವಾಗಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ.

ಪಾಯಲ್ ಸರ್ಕಾರ್‌ಗೆ ಸೋಲು

ಪಾಯಲ್ ಸರ್ಕಾರ್‌ಗೆ ಸೋಲು

ನಟಿ ಪಾಯಲ್ ಸರ್ಕಾರ್ ಟಿಎಂಸಿ ಅಭ್ಯರ್ಥಿ ಎದುರು ಸೋಲು ಕಂಡಿದ್ದಾರೆ. ಇತ್ತೀಚೆಗಷ್ಟೆ ಬಿಜೆಪಿ ಸೇರಿದ್ದ ನಟ ರುದ್ರನಿಲ್ ಘೋಷ್ ಸಹ ಟಿಎಂಸಿ ಎದುರು ಸೋಲು ಕಂಡಿದ್ದಾರೆ. ಇವರು ದಕ್ಷಿಣ ಕಲ್ಕತ್ತ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.

   ಮಹಿಳೆಯರನ್ನ CM ಮನೆಯಿಂದ ಹೊರಹಾಕಿದ ಸಿಬ್ಬಂದಿ | Oneindia Kannada
   English summary
   Westn Bengal Assembly election 2021: many film stars contested West Bengal assembly election here is the list of them.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X