ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾಳ ಚುನಾವಣೆ: ಬಿಜೆಪಿ ವಿರುದ್ಧ ಟಿಎಂಸಿ ಸಾಲು ಸಾಲು ಆರೋಪ

|
Google Oneindia Kannada News

ಕೋಲ್ಕತಾ, ಮಾರ್ಚ್ 27: ಬಿಜೆಪಿಯು ಕೇಂದ್ರ ಭದ್ರತಾ ಪಡೆಗಳನ್ನು ಬಳಸಿಕೊಂಡು ಮತದಾನದಲ್ಲಿ ಅಕ್ರಮ ಎಸಗುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಭಗ್ವಾನಪುರ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿಗೆ ಯಾರು ಮತ ಚಲಾಯಿಸಿದ್ದಾರೆ ಎಂದು ತಿಳಿಯಲು ಇವಿಎಂ ಯಂತ್ರದಲ್ಲಿ ಯಾವುದೋ ಬಗೆಯ ಬಣ್ಣವನ್ನು ಬಿಜೆಪಿ ಹಚ್ಚಿದೆ ಎಂದು ಟಿಎಂಸಿ ಆರೋಪಿಸಿದೆ.

ವಿವಿಧ ಕ್ಷೇತ್ರಗಳಲ್ಲಿ ಕೇಂದ್ರ ಪಡೆಗಳು ಚುನಾವಣಾ ಪ್ರಕ್ರಿಯೆಗಳಿಗೆ ತೊಂದರೆ ನೀಡುತ್ತಿವೆ ಎಂದು ತೃಣಮೂಲ ಕಾಂಗ್ರೆಸ್ ಆಯೋಗಕ್ಕೆ ದೂರು ನೀಡಿದೆ. ಮತ ಯಂತ್ರದ ಟಿಎಂಸಿ ಗುಂಡಿಯ ಮೇಲೆ ಬಿಜೆಪಿ ಬಣ್ಣ ಹಚ್ಚುತ್ತಿದೆ. ಇದರಿಂದ ಟಿಎಂಸಿ ಕಾರ್ಯಕರ್ತರು ಹೊರಗೆ ಬಂದಾಗ ಅದು ಬಿಜೆಪಿ ಕಾರ್ಯಕರ್ತರಿಗೆ ತಿಳಿಯುತ್ತಿದೆ. ಬಳಿಕ ಅವರು ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ.

ಚುನಾವಣೆ ಹಿಂದಿನ ದಿನವೇ ಪಶ್ಚಿಮ ಬಂಗಾಳದಲ್ಲಿ ಗಲಭೆಚುನಾವಣೆ ಹಿಂದಿನ ದಿನವೇ ಪಶ್ಚಿಮ ಬಂಗಾಳದಲ್ಲಿ ಗಲಭೆ

ಕಾಂತಿ ದಕ್ಷಿಣ ಮತ್ತು ಕಾಂತಿ ಉತ್ತರದ ಮತಗಟ್ಟೆಗಳಲ್ಲಿ ಬೆಳಿಗ್ಗೆ 9.13ರ ವೇಳೆಗೆ ಮತದಾನವು 18.47% ಮತ್ತು 18.95%ರಷ್ಟು ಮತದಾನ ನಡೆದಿದೆ ಎನ್ನಲಾಗಿತ್ತು. ನಾಲ್ಕು ನಿಮಿಷದ ಬಳಿಕ 9.17ರ ವೇಳೆಗೆ 10.60% ಮತ್ತು 9.40%ರಷ್ಟು ಮತದಾನ ನಡೆದಿದೆ ಎಂದು ವರದಿ ನೀಡಲಾಗಿದೆ. ಈ ವ್ಯತ್ಯಾಸವು ಚುನಾವಣಾ ಆಯೋಗವು ನೀಡುವ ಮಾಹಿತಿಗಳ ಪ್ರಾಮಾಣಿಕತೆಯ ಬಗ್ಗೆ ಪ್ರಶ್ನೆ ಮೂಡಿಸುತ್ತದೆ ಎಂದು ಟಿಎಂಸಿಯ ಡೆರೆಕ್ ಒಬ್ರಿಯಾನ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

West Bengal 1st Phase Election: TMC Accuses BJP Threatening Voters, Tampering EVMs

ಬಂಕುರಾದಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಿರುವ ಪೊಲೀಸರಿಗೆ ವಿರೋಧ ವ್ಯಕ್ತಪಡಿಸುವ ಮತದಾರರನ್ನು ಪೊಲೀಸ್ ಪಡೆಗಳು ಥಳಿಸುತ್ತಿವೆ ಎಂದು ಟಿಎಂಸಿ ದೂರಿದೆ.

ಇನ್ನು ಕಾಶಿಪುರ ವಿಧಾನಸಭೆ ಕ್ಷೇತ್ರದಲ್ಲಿ ಇವಿಎಂ ಬಟನ್‌ನಲ್ಲಿ ಟಿಎಂಸಿಗೆ ಮತ ಒತ್ತಿದರೆ ಅದು ಬಿಜೆಪಿಗೆ ಬೀಳುತ್ತಿದೆ ಎಂದು ಟಿಎಂಸಿ ಆರೋಪಿಸಿದೆ. ಬಿಜೆಪಿಯು ಮತಗಟ್ಟೆಗಳನ್ನು ವಶಪಡಿಸಿಕೊಂಡಿದೆ. ಜನರಿಗೆ ಮತ ಹಾಕಲು ಬಿಡುತ್ತಿಲ್ಲ. ಮತಯಂತ್ರಗಳನ್ನು ತಿರುಚಲಾಗಿದೆ ಎಂದು ಆರೋಪಿಸಲಾಗಿದೆ.

Recommended Video

DK ಶಿವಕುಮಾರ್ ಹೆಸರು ಹೇಳಿದ ಸಿಡಿ ಲೇಡಿ | Oneindia Kannada

English summary
West Bengal 1st phase election: TMC accuses BJP threatening voters, tampering EVMs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X