ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15 ವರ್ಷದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್, ರಾಜಕೀಯ ಕೋಲಾಹಲ

|
Google Oneindia Kannada News

ಕೊಲ್ಕತ್ತಾ, ಜುಲೈ 20: ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿರುವ ಪಶ್ಚಿಮ ಬಂಗಾಳದಲ್ಲಿ 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಈ ಘಟನೆ ರಾಜಕೀಯವಾಗಿ ಭಾರಿ ಕೋಲಾಹಲ ಸೃಷ್ಟಿಸಿದೆ.

ಐದು ಜನ ಮುಸ್ಲಿಂ ಯುವಕರು ಈ ಅತ್ಯಾಚಾರ ಮಾಡಿರಬಹುದು ಎಂದು ಸಂತ್ರಸ್ಥೆಯ ಕುಟುಂಬ ಆರೋಪಿಸಿದೆ. ಮತ್ತೊಂದೆಡೆ ಬಾಲಕಿಯ ಅತ್ಯಾಚಾರವನ್ನು ಖಂಡಿಸಿರುವ ಬಿಜೆಪಿ ಮುಖಂಡರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯದಲ್ಲಿ 'ಭಯೋತ್ಪಾದನೆಯ ವಾತಾವರಣ'ವನ್ನು ಸೃಷ್ಟಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ನೆರವು ಕೇಳಿಕೊಂಡು ಬಂದ ಸ್ನೇಹಿತನಿಂದ ನಟಿ ಮೇಲೆ ಅತ್ಯಾಚಾರ!ನೆರವು ಕೇಳಿಕೊಂಡು ಬಂದ ಸ್ನೇಹಿತನಿಂದ ನಟಿ ಮೇಲೆ ಅತ್ಯಾಚಾರ!

ಚೋಪ್ರಾ ವಿಧಾನಸಭಾ ಕ್ಷೇತ್ರದ ಸೋನಾರ್‌ಪುರದಲ್ಲಿ ಈ ಘಟನೆ ನಡೆದಿದೆ. ಮೊದಲು ಬಾಲಕಿಯನ್ನು ಅಪಹರಿಸಲಾಗಿದೆ. ನಂತರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಆಕೆಯ ಕೊಲ್ಲುವ ಉದ್ದೇಶದಿಂದ ಆಕೆಗೆ ವಿಷ ನೀಡಲಾಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ. ಮುಂದೆ ಓದಿ...

ಆ ಐದು ಜನ ಅತ್ಯಾಚಾರವೆಸಗಿದ್ದಾರೆ

ಆ ಐದು ಜನ ಅತ್ಯಾಚಾರವೆಸಗಿದ್ದಾರೆ

ಸಂತ್ರಸ್ಥೆ ಬಾಲಕಿಯ ಸಹೋದರಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು ''ನನ್ನ ತಂಗಿ ರಾತ್ರಿಯಿಂದ ನಾಪತ್ತೆಯಾಗಿದ್ದಳು. ಇಡೀ ರಾತ್ರಿ ಅವಳನ್ನು ಹುಡುಕಿದೆವು. ಆದರೆ ಮರುದಿನ ಬೆಳಿಗ್ಗೆ ಒಂದು ಆಲದ ಮರದ ಬಳಿ ಅವಳ ಶವ ಸಿಕ್ಕಿದೆ. ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು. ಅವಳ ಬಾಯಿಯಲ್ಲಿ ವಿಷವಿತ್ತು. ನನ್ನ ಸಹೋರಿಯನ್ನು ಆ ಐದು ಜನ ಮುಸ್ಲಿಂ ಯುವಕರು ಅತ್ಯಾಚಾರ ಮಾಡಿರಬಹುದು' ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಆಧಾರ್ ಕಾರ್ಡ್, ಫೋನ್ ಪತ್ತೆ

ಆಧಾರ್ ಕಾರ್ಡ್, ಫೋನ್ ಪತ್ತೆ

'ಹುಡುಗಿಯ ಶವ ಪತ್ತೆಯಾದ ಸ್ಥಳದಲ್ಲಿ ಎರಡು ಸೈಕಲ್‌ಗಳು, ಅಧಾರ್ ಕಾರ್ಡ್, ಎರಡು ಛತ್ರಿ ಮತ್ತು ಸೆಲ್ ಫೋನ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದು ಅಪರಾಧಿಗಳನ್ನು ಹುಡುಕಲು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಅಪರಾಧಿಗಳನ್ನು ಹಿಡಿದು ಶಿಕ್ಷಿಸುವವರೆಗೆ ನಾವು ಮುಷ್ಕರ ಮುಂದುವರಿಸುತ್ತೇವೆ' ಎಂದು ದಸ್ಪರಾ ಗ್ರಾಮ ಸಭಾ ಸಮಿತಿ ಸದಸ್ಯ ಅಸಿಮ್ ಬರ್ಮನ್ ಹೇಳಿದ್ದಾರೆ.

ಮಹಾರಾಷ್ಟ್ರ: ಕೊವಿಡ್ ಕ್ವಾರಂಟೈನ್ ಕೇಂದ್ರದಲ್ಲಿ ಮಹಿಳೆ ಮೇಲೆ ಅತ್ಯಾಚಾರಮಹಾರಾಷ್ಟ್ರ: ಕೊವಿಡ್ ಕ್ವಾರಂಟೈನ್ ಕೇಂದ್ರದಲ್ಲಿ ಮಹಿಳೆ ಮೇಲೆ ಅತ್ಯಾಚಾರ

ಭಯದ ವಾತಾವರಣ ಸೃಷ್ಟಿಯಾಗಿದೆ

ಭಯದ ವಾತಾವರಣ ಸೃಷ್ಟಿಯಾಗಿದೆ

ಬಾಲಕಿಯ ಅತ್ಯಾಚಾರ ಖಂಡಿಸಿರುವ ಬಿಜೆಪಿ ನಾಯಕ ಸೂರಜಿತ್ ಸೇನ್ 'ಟಿಎಂಸಿ ದುಷ್ಕರ್ಮಿಗಳು ಈ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಅಂತಹ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಆರೋಪಿ ಮತ್ತು ಅಪರಾಧಿಯನ್ನು ಬಂಧಿಸಿ ಗಲ್ಲಿಗೇರಿಸಬೇಕೆಂದು ನಾವು ಒತ್ತಾಯಿಸುತ್ತೇವೆ" ಎಂದು ಆಗ್ರಹಿಸಿದ್ದಾರೆ.

ಮಹಿಳಾ ಮುಖ್ಯಮಂತ್ರಿ ನಾಡಲ್ಲಿ ಹೆಣ್ಣಿಗೆ ಅನ್ಯಾಯ

ಮಹಿಳಾ ಮುಖ್ಯಮಂತ್ರಿ ನಾಡಲ್ಲಿ ಹೆಣ್ಣಿಗೆ ಅನ್ಯಾಯ

'ಚೋಪ್ರಾ ವಿಧಾನಸಭೆ ಕ್ಷೇತ್ರದಲ್ಲಿ ಅಕ್ರಮ ಒಳನುಸುಳುವಿಕೆ ಹೆಚ್ಚಾಗಿದೆ. ಅಪರಾಧ ಪ್ರಕರಣಗಳು ಏರಿಕೆ ಕಂಡಿದೆ. ಒಂದು ಕಾಲದಲ್ಲಿ ಶಾಂತಿಯುತವಾಗಿದ್ದ ಈ ಪ್ರದೇಶವು ಇಂದು ಅಪರಾಧದ ಕೇಂದ್ರವಾಗಿ ಮಾರ್ಪಟ್ಟಿದೆ. ವಿಶೇಷವಾಗಿ ಮಹಿಳೆಯರ ವಿರುದ್ಧದ ಅಪರಾಧಗಳು ತೀವ್ರವಾಗಿ ಏರಿವೆ. ಮಹಿಳೆಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರೂ ಸಹ, ಪಶ್ಚಿಮ ಬಂಗಾಳವು ಮಹಿಳೆಯರ ದೌರ್ಜನ್ಯದಂತಹ ಅಪರಾಧಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ' ಎಂದು ಬಿಜೆಪಿ ಸಂಸದ ರಾಜು ಬಿಸ್ಟಾ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸೂಚನೆ ನೀಡಿದ್ದಾರೆ

ಸಿಎಂ ಸೂಚನೆ ನೀಡಿದ್ದಾರೆ

ಈ ಘಟನೆಯಿಂದ ಚೋಪ್ರಾ ವಿಧಾನಸಭೆ ಕ್ಷೇತ್ರದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಎರಡು ಗುಂಪುಗಳ ನಡುವೆ ಗಲಾಟೆ ನಡೆಯುವಂತಹ ವಾತಾವರಣ ಸೃಷ್ಟಿಯಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಪ್ರವಾಸೋದ್ಯಮ ಸಚಿವ ಗೌತಮ್ ದೇಬ್, 'ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೂಚನೆ ನೀಡಿದ್ದಾರೆ. ಟಿಎಂಸಿ ನಿಯೋಗವು ಚೋಪ್ರಾ ಪ್ರದೇಶಕ್ಕೆ ಭೇಟಿ ನೀಡಿ ಸೋಮವಾರ ಕುಟುಂಬವನ್ನು ಭೇಟಿ ಮಾಡುತ್ತದೆ' ಎಂದು ಹೇಳಿದರು.

English summary
West Bengal: An alleged rape and murder of a 15-year-old girl in Sonarpur has triggered furore among locals and political leaders in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X