ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಎ ವಿರುದ್ಧ ನಿರ್ಣಯ ಪಾಸ್: ಇದು ಮಮತಾ ಸರ್ಕಾರದ ನಿರ್ಧಾರ

|
Google Oneindia Kannada News

Recommended Video

ಅಂಬೇಡ್ಕರ್ ಮೊಮ್ಮಗನ ವಿವಾದಾತ್ಮಕ ಹೇಳಿಕೆ | AMBEDKAR | RAJARATHNA AMBEDKAR | GRANDSON | RSS

ಕೋಲ್ಕತ್ತಾ, ಜನವರಿ.27: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ನಿರ್ಣಯ ಅಂಗೀಕರಿಸಲಾಗಿದೆ. ಕೇರಳ ಹಾಗೂ ಪಂಜಾಬ್, ರಾಜಸ್ಥಾನದ ಬಳಿಕ ಸಿಎಎ ವಿರುದ್ಧ ಪಶ್ಚಿಮ ಬಂಗಾಳ ವಿಧಾನಸಭಾ ಅಧಿವೇಶನದಲ್ಲಿ ನಿರ್ಣಯ ಅಂಗೀಕಾಗೊಂಡಿದೆ.

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ 249 ಸದಸ್ಯರ ಪೈಕಿ ಮಮತಾ ಬ್ಯಾನರ್ಜಿ ನೇತೃತ್ವದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷವು ಮೂರರ ಎರಡರಷ್ಟು ಬಹುಮತ ಹೊಂದಿದ್ದು, ಸಿಎಎ ವಿರುದ್ಧ ನಿರ್ಣಯ ಮಂಡಿಸಿ ಅಂಗೀಕರಿಸಿದೆ.

ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜಸ್ಥಾನ ಸರ್ಕಾರಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜಸ್ಥಾನ ಸರ್ಕಾರ

2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಮತದಾರರ ಓಲೈಕೆಗೆ ಎಲ್ಲ ಪಕ್ಷಗಳು ತಂತ್ರ ಹೆಣೆಯುತ್ತಿವೆ. ಇದರ ಮಧ್ಯೆದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನೇ ಅಸ್ತ್ರವಾಗಿ ಬಳಸಿಕೊಳ್ಳುವ ಪ್ರಯತ್ನೆ ನಡೆಯುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.

"ನಾನು ಜೀವಂತವಿರುವವರೆಗೂ ಸಿಎಎ ಜಾರಿಗೆ ಬಿಡಲ್ಲ"

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವಿ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿಯನ್ನು ಪಶ್ಚಿಮ ಬಂಗಾಳದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಡಾಖಂಡಿತವಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಸಿಎಎಯನ್ನು ನನ್ನ ಶವದ ಮೇಲೆ ಅನುಷ್ಠಾನಗೊಳಿಸಬೇಕಷ್ಟೇ ಎಂದು ಸವಾಲ್ ಹಾಕಿದ್ದಾರೆ.

ಸಿಎಎ ವಿರುದ್ಧ ಕೇಂದ್ರ ಸರ್ಕಾರಕ್ಕೆ ದೀದಿ ಸವಾಲ್

ಸಿಎಎ ವಿರುದ್ಧ ಕೇಂದ್ರ ಸರ್ಕಾರಕ್ಕೆ ದೀದಿ ಸವಾಲ್

ಕಳೆದ ಡಿಸೆಂಬರ್.10ರಂದು ದೇಶವ್ಯಾಪಿ ಪೌರತ್ವ ತಿದ್ದುಪಡಿ ಕಾಯ್ದೆಯು ಅನುಷ್ಠಾನಗೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿತು. ಇದರ ಬೆನ್ನಲ್ಲೇ ಸಾಲು ಸಾಲಾಗಿ ರಾಜ್ಯ ಸರ್ಕಾರಗಳಲ್ಲಿ ಸಿಎಎ ವಿರುದ್ಧ ನಿರ್ಣಯವನ್ನು ಅಂಗೀಕರಿಸಲಾಗುತ್ತಿದೆ. ಇದೀಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರ ಕೂಡಾ ಅದೇ ಹೆಜ್ಜೆಯಿಟ್ಟಿದ್ದು, ಆ ಮೂಲಕ ಕೇಂದ್ರ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.

ಸಿಎಎ ವಿರುದ್ಧ ಮತ್ತೊಂದು ರಾಜ್ಯದಲ್ಲಿ ನಿರ್ಣಯ ಅಂಗೀಕಾರ?

ಸಿಎಎ ವಿರುದ್ಧ ಮತ್ತೊಂದು ರಾಜ್ಯದಲ್ಲಿ ನಿರ್ಣಯ ಅಂಗೀಕಾರ?

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಈಗಾಗಲೇ ನಾಲ್ಕು ರಾಜ್ಯಗಳಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಇದರ ಬೆನ್ನಲ್ಲೇ ಇತ್ತೀಚಿಗಷ್ಟೇ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ತಮ್ಮ ರಾಜ್ಯದಲ್ಲೂ ಕೂಡಾ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸುವುದಾಗಿ ಭರವಸೆ ನೀಡಿದ್ದರು. ಸಿಎಎ ಸಂಪೂರ್ಣ ದೋಷಪೂರಿತವಾಗಿದ್ದು, ಸಂವಿಧಾನದ ಮೂಲ ಉದ್ದೇಶವನ್ನೇ ಮರೆತು ರೂಪಿಸಿದ ಕಾಯ್ದೆಯನ್ನು ತೆಲಂಗಾಣದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಕಠೋರವಾಗಿ ಹೇಳಿದ್ದರು.

ಕೇರಳ, ಪಂಜಾಬ್, ರಾಜಸ್ಥಾನದಲ್ಲಿ ನಿರ್ಣಯ ಅಂಗೀಕಾರ

ಕೇರಳ, ಪಂಜಾಬ್, ರಾಜಸ್ಥಾನದಲ್ಲಿ ನಿರ್ಣಯ ಅಂಗೀಕಾರ

ಇನ್ನು, ಕೇಂದ್ರ ಸರ್ಕಾರ ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಈಗಾಗಲೇ ಮೂರು ರಾಜ್ಯಗಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಮೊದಲಿಗೆ ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ಸಿಎಎ ವಿರುದ್ಧ ನಿರ್ಣಯ ಪಾಸ್ ಮಾಡಿತು. ಇದರ ಬೆನ್ನಲ್ಲೇ ಪಂಜಾಬ್ ಹಾಗೂ ರಾಜಸ್ಥಾನ ಸರ್ಕಾರಗಳು ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿವೆ. ಇದೀಗ ಪಶ್ಚಿಮ ಬಂಗಾಳ ನಾಲ್ಕನೇ ರಾಜ್ಯವಾಗಿ ಸಿಎಎ ವಿರುದ್ಧ ನಿರ್ಣಯವನ್ನು ಪಾಸ್ ಮಾಡಿದೆ.

English summary
Citizenship Amendment Act: West Benagal Is 4th State Of Passed A Resolution Against CAA In State Assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X