ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಬಂಗಾಳದ ಹುಲಿ"ಗೆ ನಮ್ಮ ಬಲ, ಬೆಂಬಲ ಎಂದು ಘೋಷಿಸಿದ ಶಿವಸೇನೆ

|
Google Oneindia Kannada News

ಮುಂಬೈ, ಮಾರ್ಚ್ 4: ಪಶ್ಚಿಮ ಬಂಗಾಳದಲ್ಲಿ ಶಿವಸೇನೆ ಸ್ಪರ್ಧಿಸುವುದಿಲ್ಲ. ಆದರೆ ನಮ್ಮ ಸಂಪೂರ್ಣ ಬೆಂಬಲವನ್ನು "ಬಂಗಾಳದ ಹುಲಿ" ಮಮತಾ ಬ್ಯಾನರ್ಜಿಗೆ ನೀಡುತ್ತೇವೆ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಘೋಷಿಸಿದ್ದಾರೆ.

ಗುರುವಾರ, ಮುಂಬರಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿರುವ ಅವರು, "ಶಿವಸೇನೆ ಪಶ್ಚಿಮ ಬಂಗಾಳದಲ್ಲಿ ಸ್ಪರ್ಧೀಸುವುದೇ ಇಲ್ಲವೇ ಎಂಬ ಕುರಿತು ಹಲವರಿಗೆ ಕುತೂಹಲವಿದೆ. ಈ ಬಗ್ಗೆ ಪಕ್ಷದ ಮುಖಂಡ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚೆಯೂ ನಡೆದಿದೆ. ನಾವು ಇಲ್ಲಿ ಸ್ಪರ್ಧಿಸುವುದಿಲ್ಲ" ಎಂದು ಹೇಳಿದ್ದಾರೆ. ಮುಂದೆ ಓದಿ...

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನ ಮಂತ್ರ! ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನ ಮಂತ್ರ!

"ದೀದಿ ವಿರುದ್ಧ ಎಲ್ಲಾ ತಂತ್ರಗಳನ್ನೂ ಬಳಸಲಾಗುತ್ತಿದೆ"

ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಬಹು ದೊಡ್ಡ ಸವಾಲು ಇದೆ ಎನಿಸುತ್ತಿದೆ. "ದೀದಿ ವರ್ಸಲ್ ಎಲ್ಲರೂ" ಎಂಬ ರಾಜಕೀಯ ಚಿತ್ರಣ ಇಲ್ಲಿದೆ. ಹಣ, ಬಲ, ಮಾಧ್ಯಮ ಈ ಎಲ್ಲವನ್ನೂ ಮಮತಾ ಬ್ಯಾನರ್ಜಿ ವಿರುದ್ಧ ಪ್ರಯೋಗಿಸಲಾಗುತ್ತಿದೆ. ಹೀಗಾಗಿಯೇ ದೀದಿ ಪರವಾಗಿ ನಾವು ನಿಲ್ಲಲಿದ್ದೇವೆ ಎಂದು ಸಂಜಯ್ ರಾವತ್ ದೂರಿದರು.

"ಮಮತಾ ದೀದಿ ನಿಜವಾದ ಬಂಗಾಳದ ಹುಲಿ"

ಈ ಎಲ್ಲಾ ಪರಿಸ್ಥಿತಿಯನ್ನು ಗಮನಿಸಿಯೇ ಶಿವಸೇನೆ ಇಲ್ಲಿ ಸ್ಪರ್ಧಿಸಬಾರದು ಎಂದು ತೀರ್ಮಾನಿಸಿದ್ದೇವೆ. ಆದರೆ ಮಮತಾ ಬ್ಯಾನರ್ಜಿಗೆ ಬೆನ್ನಾಗಿ ನಿಲ್ಲುತ್ತೇವೆ. ಅವರ ಚುನಾವಣಾ ಕಾರ್ಯತಂತ್ರಗಳಿಗೆ ಬೆಂಬಲ ನೀಡುತ್ತೇವೆ. ಮಮತಾ ಬ್ಯಾನರ್ಜಿಗೆ ಬಹು ದೊಡ್ಡ ಯಶಸ್ಸು ಸಿಗಲಿ. ಏಕೆಂದರೆ ಅವರೇ ನಿಜವಾದ ಬಂಗಾಳದ ಹೆಣ್ಣು ಹುಲಿ ಎಂದು ಟ್ವಿಟ್ಟರ್‌ ಮೂಲಕ ತಮ್ಮ ಬೆಂಬಲ ಘೋಷಿಸಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆ; ಈ ಬಾರಿ ಅಭ್ಯರ್ಥಿಗಳ ಆಯ್ಕೆಯಲ್ಲೂ ಬದಲಾವಣೆಪಶ್ಚಿಮ ಬಂಗಾಳ ಚುನಾವಣೆ; ಈ ಬಾರಿ ಅಭ್ಯರ್ಥಿಗಳ ಆಯ್ಕೆಯಲ್ಲೂ ಬದಲಾವಣೆ

 ದೀದಿ ಜೊತೆಗೆ ಆರ್‌ಜೆಡಿ-ಸಮಾಜವಾದಿ-ಶಿವಸೇನಾ ಬಲ

ದೀದಿ ಜೊತೆಗೆ ಆರ್‌ಜೆಡಿ-ಸಮಾಜವಾದಿ-ಶಿವಸೇನಾ ಬಲ

ಪಶ್ಚಿಮ ಬಂಗಾಳ ಈ ಬಾರಿ 294 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಎದುರಿಸುತ್ತಿದೆ. 2016ರಲ್ಲಿ, ಕೇವಲ ಮೂರು ಕ್ಷೇತ್ರಗಳಲ್ಲಿ ಗೆಲುವು ಪಡೆದುಕೊಂಡಿದ್ದ ಬಿಜೆಪಿ ಈಗ ತೃಣಮೂಲ ಕಾಂಗ್ರೆಸ್‌ ಮಣಿಸಿ ಅಧಿಕಾರ ರಚನೆ ಮಾಡುವ ಹುಮ್ಮಸ್ಸಿನಲ್ಲಿದೆ. ತೃಣಮೂಲ ಕಾಂಗ್ರೆಸ್‌ನ ಪ್ರಮುಖ ಮುಖಂಡರು ಸೇರಿದಂತೆ ಹಲವು ಸದಸ್ಯರನ್ನು ತನ್ನ ಪಕ್ಷಕ್ಕೆ ಸೇರಿಸಿಕೊಂಡಿದೆ. ಆದರೆ ಟಿಎಂಸಿ ಇದನ್ನೇ ಸವಾಲಾಗಿ ಸ್ವೀಕರಿಸುವುದಾಗಿ ಘೋಷಿಸಿದೆ. ಈ ಸವಾಲಿಗೆ ಬಿಹಾರ ವಿಪಕ್ಷ ನಾಯಕ ತೇಜಸ್ವಿ ಯಾದವ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಹಾಗೂ ಶಿವಸೇನೆ ಬೆಂಬಲ ಘೋಷಿಸಿರುವುದು ದೀದಿಗೆ ಬಲ ತಂದುಕೊಡುವಂತಿದೆ.

 ಮಾರ್ಚ್ 27ರಿಂದ ನಡೆಯಲಿರುವ ಚುನಾವಣೆ

ಮಾರ್ಚ್ 27ರಿಂದ ನಡೆಯಲಿರುವ ಚುನಾವಣೆ

ಇದೇ ಮಾ. 27ರಿಂದ ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ 2ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ಚುನಾವಣೆಗೆ ತೃಣಮೂಲ ಕಾಂಗ್ರೆಸ್ ತಿಂಗಳ ಹಿಂದಿನಿಂದಲೇ ಪ್ರಚಾರ ಕಾರ್ಯ ಆರಂಭಿಸಿದ್ದು, ಮಾ.5ರಂದು ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿರುವುದಾಗಿ ತಿಳಿದುಬಂದಿದೆ. ಈ ಬಾರಿ ಅಭ್ಯರ್ಥಿಗಳ ಆಯ್ಕೆಯಲ್ಲಿಯೂ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ.

English summary
Shiv Sena has decided not to contest West Bengal polls and stand in solidarity with Mamata Banerjee. she is the real Bengal Tigress, said shiv sena leader sanjya raut,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X