ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದನ, ಹಂದಿ ಮಾಂಸಾಹಾರ ಡೆಲಿವೆರಿ ಮಾಡುವುದಿಲ್ಲ: ಜೊಮ್ಯಾಟೊ ಸಿಬ್ಬಂದಿ ಪ್ರತಿಭಟನೆ

|
Google Oneindia Kannada News

Recommended Video

ದಾನ ಹಾಗು ಹಂದಿ ಮಾಂಸಾಹಾರವನ್ನ ಡೆಲಿವರಿ ಮಾಡುವುದಿಲ್ಲ ಎಂದ Zomato ಸಿಬ್ಬಂದಿ | Oneindia Kannada

ಕೊಲ್ಕತ್ತ, ಆಗಸ್ಟ್ 12: ಹಂದಿ ಮತ್ತು ದನದ ಮಾಂಸವವನ್ನು ಡೆಲಿವೆರಿ ಮಾಡುವುದಿಲ್ಲವೆಂದು ಆಹಾರ ಡೆಲಿವರಿ ಸಂಸ್ಥೆ ಜೊಮ್ಯಾಟೊದ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.

ನಮ್ಮ ಧಾರ್ಮಿಕ ಭಾವನೆಗಳಿಗೆ ಸಂಸ್ಥೆಯು ಗೌರವ ನೀಡುತ್ತಿಲ್ಲ, ನಮಗೆ ಹಂದಿ ಮತ್ತು ದನದ ಆಹಾರವನ್ನು ಡೆಲಿವರಿ ಮಾಡುವಂತೆ ಒತ್ತಾಯ ಹೇರಲಾಗುತ್ತಿದೆ ಎಂದು ಆರೋಪಿಸಿ ಜೊಮ್ಯಾಟೊ ಸಿಬ್ಬಂದಿ ಅನಿರ್ದಿಷ್ಟಾವದಿ ಪ್ರತಿಭಟನೆ ನಡೆಸಿದ್ದಾರೆ.

ಆರ್ಡರ್ ಕ್ಯಾನ್ಸಲ್ ಮಾಡಿದ್ದಕ್ಕೆ zomato ಕೊಟ್ಟ ಉತ್ತರಕ್ಕೆ ಫಿದಾ ಆಗಲೇಬೇಕು! ಆರ್ಡರ್ ಕ್ಯಾನ್ಸಲ್ ಮಾಡಿದ್ದಕ್ಕೆ zomato ಕೊಟ್ಟ ಉತ್ತರಕ್ಕೆ ಫಿದಾ ಆಗಲೇಬೇಕು!

ಜೊಮ್ಯಾಟೊ ಸಂಸ್ಥೆಯು ಹಿಂದು ಡೆಲಿವರಿ ಬಾಯ್‌ಗಳಿಂದ ದನದ ಆಹಾರವನ್ನು ಡೆಲಿವೆರಿ ಮಾಡಿಸುತ್ತಿದೆ, ಮುಸ್ಲಿಮರಿಂದ ಹಂದಿ ಮಾಂಸದಿಂದ ಮಾಡಿದ ಆಹಾರ ಪದಾರ್ಥ ಡೆಲಿವರಿ ಮಾಡಿಸುತ್ತಿದೆ. ಇದು ಡೆಲಿವರಿ ಬಾಯ್‌ಗಳ ನಂಬಿಕೆಗೆ ವಿರುದ್ಧವಾಗಿದೆ ಎಂದು ಪ್ರತಿಭಟನಾ ನಿರತ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

we will not deliver pork and beef: Zomato delivery boys protest

ಎಂಎನ್ ಸಿ ಕೆಲಸ ಬಿಟ್ಟು ಫುಡ್ ಡೆಲಿವರಿ ಗರ್ಲ್ ಆದ ಮೇಘನಾ!ಎಂಎನ್ ಸಿ ಕೆಲಸ ಬಿಟ್ಟು ಫುಡ್ ಡೆಲಿವರಿ ಗರ್ಲ್ ಆದ ಮೇಘನಾ!

ಸಿಬ್ಬಂದಿ ಪ್ರತಿಭಟನೆಗೆ ಹೇಳಿಕೆ ಬಿಡುಗಡೆ ಮಾಡಿರುವ ಜೊಮ್ಯಾಟೊ ಸಂಸ್ಥೆ, 'ಭಾರತದಂತಹಾ ವೈವಿದ್ದಯತೆ ತುಂಬಿರುವ ದೇಶದಲ್ಲಿ ಸಸ್ಯಾಹಾರ, ಮಾಂಸಾಹಾರ ಪದ್ಧತಿಗಳು ವಿತರಣೆ ವಿಭಾಗದಲ್ಲಿಯೂ ತೊಡಕುಗಳು ಬರುತ್ತವೆ ಎಂಬುದನ್ನು ಊಹಿಸಲು ಕಷ್ಟಸಾಧ್ಯ. ಡೆಲಿವರಿ ಕೆಲಸದ ಸಾಮಾನ್ಯ ಕಾರ್ಯವ್ಯಾಪ್ತಿಯನ್ನು ಅರ್ಥಮಾಡಿಕೊಂಡೇ ನಮ್ಮ ಡೆಲಿವರಿ ಸಿಬ್ಬಂದಿ ಕೆಲಸಕ್ಕೆ ಸೇರಿರುತ್ತಾರೆ. ಇದು ನಮ್ಮ ಎಲ್ಲ ಸಿಬ್ಬಂದಿಗೂ ಅರ್ಥವಾಗಿದೆ. ಹೌರಾದಲ್ಲಿನ ಡೆಲಿವರಿ ಸಿಬ್ಬಂದಿಯ ಸಣ್ಣ ಗುಂಪೊಂದು ಈ ಬಗ್ಗೆ ತಕರಾರು ಎತ್ತಿದ್ದಾರೆ, ನಾವು ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಜೊಮ್ಯಾಟೊ ಹೇಳಿಕೆ ಬಿಡುಗಡೆ ಮಾಡಿದೆ.

English summary
Zomato delivery boys did protest in Kolkata that zomato forcing us to deliver pork and beef to the customers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X