ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸರಕಾರದ ಡೇಟ್ ಎಕ್ಸ್ ಪೈರ್ ಆಗಿದೆ : ಮಮತಾ ಬ್ಯಾನರ್ಜಿ ಘರ್ಜನೆ

|
Google Oneindia Kannada News

ಕೋಲ್ಕತ್ತ, ಜನವರಿ 19: ಪಶ್ಚಿಮ ಬಂಗಾಳದ ಪುಣ್ಯ ಭೂಮಿಯಿಂದ, ವಿಚಾರವಂತಿಕೆ ಭೂಮಿಯಿಂದ ಬಿಜೆಪಿಯನ್ನು ಕೇಂದ್ರದಿಂದ ಕಿತ್ತೊಗೆಯುವ ಆಂದೋನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಕರೆ ಕೊಟ್ಟರು.

ಕೋಲ್ಕತ್ತದಲ್ಲಿ ಟಿಎಂಸಿ ಪಕ್ಷದ ವತಿಯಿಂದ ಆಯೋಜಿಸಿದ್ದ ವಿರೋಧ ಪಕ್ಷಗಳ ಮಹಾ ಸಮಾವೇಶದಲ್ಲಿ ಆವೇಶಭರಿತರಾಗಿ ಮಾತನಾಡಿದ ಮಮತಾ ಬ್ಯಾನರ್ಜಿ, ವಿರೋಧಿಸುತ್ತೇವೆ, ಹೋರಾಡುತ್ತೇವೆ ಮತ್ತು ಅಂತಿಮವಾಗಿ ಗೆಲುವು ಸಾಧಿಸುತ್ತೇವೆ ಎಂದು ಬಿಜೆಪಿ ವಿರುದ್ಧ ಅಬ್ಬರಿಸಿದರು.

ಸಮಾವೇಶದಲ್ಲಿ ಸೇರದ್ದ ಲಕ್ಷಾಂತರ ಜನರಿಗೆ ಬಿಜೆಪಿಯು ಅಸಾಂವಿಧಾನಿಕ ನಡೆಗಳ ಬಗ್ಗೆ ಮಾಹಿತಿ ನೀಡಿದ ಬ್ಯಾನರ್ಜಿ, ಅವರು ನಮ್ಮ ಇತಿಹಾಸವನ್ನು ತಿದ್ದುತಿದ್ದಾರೆ, ನಮ್ಮ ಭೂಗೋಳವನ್ನು ಬದಲಾಯಿಸುತ್ತಿದ್ದಾರೆ, ನಮ್ಮ ಸಂವಿಧಾನಸವನ್ನು, ಕಾನೂನನ್ನು ಬದಲಾಯಿಸುತ್ತಿದ್ದಾರೆ. ಹಾಗಾಗಿ ನಾವು ಅವರನ್ನು ಬದಲಾಯಿಸಬೇಕಿದೆ. ಈ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಮಮತಾ ಹೇಳಿದರು.

ಮಹಾಘಟಬಂಧನಕ್ಕೆ ಎಚ್ಚರಿಕೆ ಮಾತುಗಳನ್ನು ಹೇಳಿದ ದೇವೇಗೌಡಮಹಾಘಟಬಂಧನಕ್ಕೆ ಎಚ್ಚರಿಕೆ ಮಾತುಗಳನ್ನು ಹೇಳಿದ ದೇವೇಗೌಡ

ಮೋದಿ ಎಲ್ಲರಿಗೂ ತೊಂದರೆ ಕೊಡುತ್ತಲೇ ಬರುತ್ತಿದ್ದಾರೆ. ಅವರು ಅಡ್ವಾಣಿ ಅವರನ್ನು ಬಿಡಲಿಲ್ಲ, ಬಿಜೆಪಿ ಮಾಜಿ ಸಚಿವ ಯಶವಂತ್ ಸಿನ್ಹಾ ಅವರನ್ನು ಬಿಡಲಿಲ್ಲ, ಅಖಿಲೇಶ್ ಯಾದವ್ ಅವರನ್ನು ಬಿಡಲಿಲ್ಲ, ಮಾಯಾವತಿಯನ್ನು ಬಿಡಲಿಲ್ಲ, ತಮ್ಮ ಜೊತೆಗಿದ್ದ ಚಂದ್ರಬಾಬು ನಾಯ್ಡು ಅವರನ್ನು ಬಿಡಲಿಲ್ಲ, ಕುಮಾರಸ್ವಾಮಿಗೆ ತೊಂದರೆ ಕೊಡುತ್ತಿದ್ದಾರೆ, ನನ್ನನ್ನೂ ಬಿಡಲಿಲ್ಲ, ತೇಜಸ್ವಿ ಯಾದವ್‌ ಅವರನ್ನು ಬಿಡಲಿಲ್ಲ. ನಾವೆಲ್ಲಾ ಸೇರಿ ನಿಮ್ಮನ್ನು ಹೇಗೆ ಬಿಡುತ್ತೇವೆ ಎಂದು ಕೊಂಡಿರಿ ಎಂದು ದೀದಿ ವಾಗ್ಬಾಣ ಎಸೆದರು.

'ಕಳ್ಳನಿಗಿಂತಲೂ ಅವನ ತಾಯಿಗೆ ಬಾಯಿ ಜೋರು'

'ಕಳ್ಳನಿಗಿಂತಲೂ ಅವನ ತಾಯಿಗೆ ಬಾಯಿ ಜೋರು'

ಸುಳ್ಳುಗಳ ಸರದಾರರು ನೀವು, ಎರಡು ಕೋಟಿ ಉದ್ಯೋಗ, ಖಾತೆಗೆ 15 ಲಕ್ಷ ಹಣ, ರೈತರಿಗೆ ಆದಾಯ ದ್ವಿಗುಣ ಇನ್ನೂ ಏನೇನು ಭರವಸೆಗಳನ್ನು ನೀಡಿದ್ದಿರಿ ಆದರೆ ಯಾವುದನ್ನೂ ಪೂರೈಸಲಿಲ್ಲ. ಆದರೆ ಹಗರಣಗಳನ್ನು ಮಾತ್ರ ಪೊಗಡುದಸ್ತಾಗಿ ಮಾಡಿದಿರಿ, ರಫೆಲ್, ಬೆಳೆ ವಿಮಾ ಹಗರಣ ಎಲ್ಲದರಲ್ಲೂ ಹಗರಣವೇ. ನೀವು ತಿನ್ನಲಿಲ್ಲ ಆದರೆ ಬೇರೆಯವರಿಗೆ ತಿನ್ನಿಸಿದರಿ. 'ಕಳ್ಳನಿಗಿಂತ ಅವನ ತಾಯಿಗೆ ಮಾತು ಜೋರಂತೆ' ಹಾಗೆಯೇ ನೀವು ಸಹ ಎಂದು ಮೊದಿಯ ಹೆಸರು ಹೇಳದೆ ಮೊನಚು ಮಾತಿನಿಂದ ಇರಿದರು ದೀದಿ.

ಕೋಲ್ಕತ್ತದಲ್ಲಿ ಕರ್ನಾಟಕ ಬಿಜೆಪಿಯ ಬೆತ್ತಲಾಗಿಸಿದ ಕುಮಾರಸ್ವಾಮಿ ಕೋಲ್ಕತ್ತದಲ್ಲಿ ಕರ್ನಾಟಕ ಬಿಜೆಪಿಯ ಬೆತ್ತಲಾಗಿಸಿದ ಕುಮಾರಸ್ವಾಮಿ

'ಭಾರತದ ಸಾಮರಸ್ಯವನ್ನೇ ಹಾಳು ಮಾಡಿದಿರಿ'

'ಭಾರತದ ಸಾಮರಸ್ಯವನ್ನೇ ಹಾಳು ಮಾಡಿದಿರಿ'

ಹಿಂದು ತ್ಯಾಗಿ, ನಿಯತ್ತಿನವ ಮುಸ್ಲಿಂ, ಪ್ರೀತಿಯವ ಕ್ರೈಸ್ತ, ತ್ಯಾಗ ನೀಡುವವ ಸಿಖ್ಖ ಇದು ನಮ್ಮ ಭಾರತ ಆಗಿತ್ತು. ಆದರೆ ನೀವದನ್ನು ಹಾಳು ಮಾಡಿಬಿಟ್ಟಿರಿ. ಧರ್ಮದ ಹೆಸರಲ್ಲಿ ದೊಡ್ಡಗೋಡೆಗಳನ್ನು ಕಟ್ಟಿದಿರಿ. ಮನುಷ್ಯರ ಆಚರಣೆಗಳಿಗಾಗಿ, ಅವರು ತಿನ್ನುವ ಆಹಾರ ಕಾರಣಗಳಾಗಿ ಜನರೇ ಜನರನ್ನು ಕೊಲ್ಲುವಂತೆ ಮಾಡಿಬಿಟ್ಟಿರಿ ಎಂದು ಮಮತಾ ಹತಾಶರಾಗಿ ನುಡಿದರು. ಪಶ್ಚಮ ಬಂಗಾಳದಲ್ಲೂ ಸಹ ಬೆಂಕಿ ಇಡುವ ಕೆಲಸ ಮಾಡಿದ್ದೀರಿ ಎಂದ ಮಮತಾ, ಅಮಿತ್ ಶಾ ಕೊಲ್ಕತ್ತದಲ್ಲಿ ಹೇಳಿದ್ದ 'ಧಂಗೆ' ವಿಷಯವನ್ನು ಪ್ರಸ್ತಾಪಿಸಿದರು.

ಮಹಾಘಟಬಂಧನ ರ‍್ಯಾಲಿಯಲ್ಲಿ ಮೋದಿ ಮೇಲೆ ಹಾರ್ದಿಕ್ ವಾಗ್ದಾಳಿ ಮಹಾಘಟಬಂಧನ ರ‍್ಯಾಲಿಯಲ್ಲಿ ಮೋದಿ ಮೇಲೆ ಹಾರ್ದಿಕ್ ವಾಗ್ದಾಳಿ

ಆಂದೋಲನ ಹುಟ್ಟಿದ ಪುಣ್ಯಭೂಮಿ ಬಂಗಾಳ

ಆಂದೋಲನ ಹುಟ್ಟಿದ ಪುಣ್ಯಭೂಮಿ ಬಂಗಾಳ

ಇದು ಪಶ್ಚಿಮ ಬಂಗಾಳ ಹಲವು ಆಂದೋಲನಗಳು ಹುಟ್ಟಿದ ಪುಣ್ಯ ನಾಡು. ಬ್ರಿಟೀಷರನ್ನು ವಿಚಾರಗಳಿಮದ ಎದುರಿಸಿದ ವಿಚಾರವಂತರ ನಾಡು ಇಲ್ಲಿನಿಂದ ಬಿಜೆಪಿಯ ಅವನತಿಗೆ ವಿಚಾರ ಯಜ್ಞ ಆರಂಭವಾಗಿದೆ. ನಿಮಗೆ ಜನರು ಅಭೂತಪೂರ್ವವಾದ ಅವಕಾಶ ಕೊಟ್ಟಿದ್ದರು ಆದರೆ ನೀವದನ್ನು ಉಳಿಸಿಕೊಳ್ಳಲಿಲ್ಲ. ಜನರಿಗೆ ಕೊಡುತ್ತೇನೆಂದಿದ್ದ 'ಅಚ್ಛೆ ದಿನ್‌ ಅನ್ನು ನಿಮಗೆ ಮಾತ್ರವೇ ಕೊಟ್ಟುಕೊಂಡಿರಿ, ಹಾಗಾಗಿ ಬಿಜೆಪಿಗೆ ಇನ್ನು ಮುಂದೆ ಕೆಟ್ಟ ದಿನಗಳು ಮಾತ್ರವೇ ಬಾಕಿ ಇದೆ' ಎಂದು ಮಮತಾ ಅಬ್ಬರಿಸಿದರು.

ದೇಶದ 23 ಪಕ್ಷಗಳು ಬಿಜೆಪಿ ವಿರುದ್ಧ ಇವೆ

ದೇಶದ 23 ಪಕ್ಷಗಳು ಬಿಜೆಪಿ ವಿರುದ್ಧ ಇವೆ

ದೇಶದ 23 ಪಕ್ಷಗಳು ಪ್ರಸ್ತುತವಾಗಿ ಬಿಜೆಪಿಯ ವಿರುದ್ಧ ನಿಂತಿವೆ. ಈ ಸಮಾವೇಶಕ್ಕೆ ಬರದ ಕೆಲವು ಪಕ್ಷಗಳೂ ಸಹ ಬಿಜೆಪಿಗೆ ವಿರುದ್ಧ ಇವೆ. ನಮಗೆ ಯಾರು ಪ್ರಧಾನಿ ಆಗುತ್ತಾರೆ ಎನ್ನುವುದು ಬೇಡ. ಆದರೆ ಬಿಜೆಪಿಯಂತಹಾ ಸಂವಿಧಾನ ವಿರೋಧಿ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕಾಗಿದೆ. ನಾವು ಐದು ವರ್ಷ ಗಟ್ಟಿ ಸರ್ಕಾರ ಕೊಡುವುದರಲ್ಲಿ ನನಗೆ ನಂಬಿಕೆ ಇದೆ. ಅವರಿಗೆ ನಾಯಕನೇ ಇಲ್ಲ ಎಂದು ಮೋದಿ ಹೇಳಿದ್ದಾರಂತೆ. ನಿಮಗೆ ಈಗ ನಾಯಕ ಇಲ್ಲ ಆದರೆ ನಮ್ಮಲ್ಲಿ ಇರುವವರೆಲ್ಲಾ ನಾಯಕರೇ, ಎಲ್ಲರೂ ಸಂಘಟಕರೆ, ಎಲ್ಲರೂ ಕಾರ್ಯಕರ್ತೆ, ನಮ್ಮದು ಒಗ್ಗಟ್ಟಿನ ನಾಯಕತ್ವ ಎಂದು ದೀದಿ ಟಾಂಗ್ ನೀಡಿದರು.

ಮಮತಾರ ಆಕ್ರೋಶಭರಿತ ಸಮತೋಲಿತ ಮಾತು

ಮಮತಾರ ಆಕ್ರೋಶಭರಿತ ಸಮತೋಲಿತ ಮಾತು

ಇಂಗ್ಲಿಷ್‌, ಹಿಂದಿ, ಬಂಗಾಳಿ ಮೂರು ಭಾಷೆಗಳನ್ನು ಸೇರಿಸಿ ಆಕ್ರೋಶಭರಿತವಾಗಿ ಮಾತನಾಡಿದ ಮಮತಾ, ರವೀಂದ್ರ ನಾಥ ಟ್ಯಾಗೋರರ ಕವಿತೆಗಳ ಸಾಲುಗಳು, ಬಂಗಾಳದ ಗಾದೆಗಳು, ಹಿಂದಿಯ ಕವಿ ಸಾಲುಗಳನ್ನು ನಡು-ನಡುವೆ ಬಳಸಿ ಜನರನ್ನು ಸೆಳೆದರು, ಮಮತಾ ಅವರaaಇಂಗ್ಲಿಷ್‌, ಹಿಂದಿ, ಬಂಗಾಳಿ ಮೂರು ಭಾಷೆಗಳನ್ನು ಸೇರಿಸಿ ಆಕ್ರೋಶಭರಿತವಾಗಿ ಮಾತನಾಡಿದ ಮಮತಾ, ರವೀಂದ್ರ ನಾಥ ಟ್ಯಾಗೋರರ ಕವಿತೆಗಳ ಸಾಲುಗಳು, ಬಂಗಾಳದ ಗಾದೆಗಳು, ಹಿಂದಿಯ ಕವಿ ಸಾಲುಗಳನ್ನು ನಡು-ನಡುವೆ ಬಳಸಿ ಜನರನ್ನು ಸೆಳೆದರು, ಮಮತಾ ಅವರ

ಮಾತಿಗಳಿಗೆ ಜನರು ಅಭೂತಪೂರ್ವ ಪ್ರತಿಕ್ರಿಯೆ ತೋರಿದರು. ಮುಂದಿನ ಬಾರಿ ಬಿಜೆಪಿ ತೊಲಗಿಸಿ ಎಂಬ ಘೋಷಣೆಗಳನ್ನು ಕೂಗಿಸುವ ಮೂಲಕ ಮಮತಾ ಅವರು ಸಮಾವೇಶಕ್ಕೆ ಮುಕ್ತಾಯ ಹಾಡಿದರು.ತಿಗಳಿಗೆಜನರು ಅಭೂತಪೂರ್ವ ಪ್ರತಿಕ್ರಿಯೆ ತೋರಿದರು. ಮುಂದಿನ ಬಾರಿ ಬಿಜೆಪಿ ತೊಲಗಿಸಿ ಎಂಬ ಘೋಷಣೆಗಳನ್ನು ಕೂಗಿಸುವ ಮೂಲಕ ಮಮತಾ ಅವರು ಸಮಾವೇಶಕ್ಕೆ ಮುಕ್ತಾಯ ಹಾಡಿದರು.

English summary
TMC leader, west Bengal CM Mamata Bbanarjee started moment against BJP in Kolkata today. She organized a successful opposition parties mega rally and send a strong message to BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X