• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಶ್ಚಿಮ ಬಂಗಾಳ: ಮೊದಲ 4 ಹಂತದಲ್ಲಿ ಬಿಜೆಪಿಗೆ 93 ಸ್ಥಾನಗಳಲ್ಲಿ ಗೆಲುವು ಖಚಿತ, ಅಮಿತ್ ಶಾ

|

ಕೋಲ್ಕತ್ತಾ, ಏಪ್ರಿಲ್ 16: ಪಶ್ಚಿಮ ಬಂಗಾಳದಲ್ಲಿ ನಡೆದ ಮೊದಲ 4 ಹಂತದ ಮತದಾನದಲ್ಲಿ 93 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಶುಕ್ರವಾರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಲ್ಕು ಹಂತಗಳಲ್ಲಿ ಒಟ್ಟು 153 ಸ್ಥಾನಗಳಿಗೆ ಚುನಾವಣೆ ನಡೆದಿದೆ ಅದರಲ್ಲಿ 93 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.

ನಿಗದಿಯಂತೆಯೇ ಚುನಾವಣೆ ನಡೆಸಲಿ: ಆಯೋಗಕ್ಕೆ ಬಿಜೆಪಿ ಮನವಿನಿಗದಿಯಂತೆಯೇ ಚುನಾವಣೆ ನಡೆಸಲಿ: ಆಯೋಗಕ್ಕೆ ಬಿಜೆಪಿ ಮನವಿ

ಪಶ್ಚಿಮ ಬಂಗಾಳದಲ್ಲಿ ಒಟ್ಟು 8 ಹಂತದ ಚುನಾವಣೆ ನಡೆಯಲಿದ್ದು ಈಗಾಗಲೇ ನಾಲ್ಕು ಹಂತಗಳಿಗೆ ಚುನಾವಣೆ ನಡೆದಿದೆ, ಇನ್ನೂ ನಾಲ್ಕು ಹಂತಗಳಿಗೆ ಮತದಾನ ಬಾಕಿ ಇದೆ, ಮೇ 2 ರಂದು ಫಲಿತಾಂಶ ಹೊರಬೀಳಲಿದೆ.

ಈ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಒಟ್ಟು 200 ಸೀಟುಗಳನ್ನು ಗಳಿಸಲಿದೆ, ದೀದಿ ನನ್ನ ಮಾತನ್ನು ಕಿವಿಗೊಟ್ಟು ಕೇಳಿ, ನೀವು ರಾಜ್ಯದಿಂದ ಹೊರಹೋಗುವ ಸಮಯ ಹತ್ತಿರದಲ್ಲೇ ಇದೆ. ಬಿಜೆಪಿ ದ್ವಿಶತಕ ಬಾರಿಸುವುದು ಖಚಿತವಾಗಿದೆ ಎಂದಿದ್ದಾರೆ.

ಮೇ 2ರ ಬಳಿಕ ದುರ್ಗಾ ಪೂಜೆ ಮಾಡಲು ಹೈಕೋರ್ಟ್‌ನಲ್ಲಿ ಅನುಮತಿ ಪಡೆಯಬೇಕಿಲ್ಲ, ಮೇ 2 ರಂದು ಮಮತಾ ಬ್ಯಾನರ್ಜಿ ಸರ್ಕಾರ ಬುಡಮೇಲಾಗಲಿದೆ. ಸರಸ್ವತಿ ಪೂಜೆ ಮಾಡಲು ಯಾರೂ ಅಡ್ಡಿಬರುವುದಿಲ್ಲ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಗಡಿಯಲ್ಲಿ ಒಂದು ಪಕ್ಷಿಯೂ ನಮ್ಮ ದೇಶಕ್ಕೆ ಬರಲು ಬಿಡುವುದಿಲ್ಲ, ಯಾರೂ ಬಡವರ ಅನ್ನವನ್ನು ಕಿತ್ತುಕೊಂಡಿದ್ದಾರೋ ಅವರನ್ನು ಕಂಬಿ ಎಣಿಸುವಂತೆ ಮಾಡುತ್ತೇವೆ ಎಂದು ಹೇಳಿದರು.

ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉಳಿದ ನಾಲ್ಕು ಹಂತಗಳ ಚುನಾವಣೆಯನ್ನು ಏಕಕಾಲಕ್ಕೆ ನಡೆಸುವಂತೆ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗದ ಬಳಿ ಕೇಳಿಕೊಂಡಿದ್ದರು, ಆದರೆ ಯಾವುದೇ ಕಾರಣಕ್ಕೂ ಎಲ್ಲಾ ಹಂತವನ್ನು ಒಟ್ಟಿಗೆ ಸೇರಿಸಿ ಚುನಾವಣೆ ನಡೆಸುವ ಚಿಂತನೆ ಇಲ್ಲ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿತ್ತು.

English summary
Ahead of fifth phase of the west bengal assembly elections, Union minister Amit shah on Friday claimed that BJP will win over 93 seats out of 135 seats which went to polls in the first four phases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X