ಬಿಲ್ಡಿಂಗ್ ನಿಂದ ನೋಟಿನ ಸುರಿಮಳೆ... ವಿಡಿಯೋ ವೈರಲ್
ಕೊಲ್ಕತ್ತಾ, ನವೆಂಬರ್ 21: ಕೊಲ್ಕತ್ತಾದ ಕಟ್ಟಡವೊಂದರ ಆರನೇ ಮಹಡಿಯಿಂದ ಹಣ ಹುದುರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರೂ.2,000, ರೂ. 500, ರೂ. 100 ರ ಮುಖಬೆಲೆಯ ನೋಟುಗಳು ರಸ್ತೆಗೆ ಉದುರುತ್ತಿದ್ದ ದೃಶ್ಯ ಕಂಡುಬಂದಿದ್ದು, ಪೊರಕೆಯಿಂದ ಅದನ್ನು ಮೇಲಿನಿಂದ ತಳ್ಳಲಾಗುತ್ತಿತ್ತು ಎನ್ನಲಾಗಿದೆ.
ಕೊಲ್ಕತ್ತಾದ ಖಾಸಗಿ ಕಂಪನಿಯೊಂದರಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ದೂರಿನ ಮೇರೆಗೆ ಆ ಬಿಲ್ಡಿಂಗ್ ನಲ್ಲಿದ್ದ ಆಮದು, ರಫ್ತು ವ್ಯವಹಾರ ನಡೆಸುವ ಕಂಪನಿಯ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ (Directorate of Revenue Intelligence)ದ ಅಧಿಕಾರಿಗಳು ದಾಳಿ ನಡೆಸಿದ್ದರು.
#WATCH Bundles of currency notes were thrown from a building at Bentinck Street in Kolkata during a search at office of Hoque Merchantile Pvt Ltd by DRI officials earlier today. pic.twitter.com/m5PLEqzVwS
— ANI (@ANI) November 20, 2019
ಇದೇ ಸಂದರ್ಭದಲ್ಲಿ ಹಣ ಮೇಲಿನಿಂದ ಉದುರಲು ಆರಂಭಿಸಿದ್ದು, ಅಧಿಕಾರಿಗಳಿಗೆ ಹಣದ ಲೆಕ್ಕ ಸಿಗಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಿರಬಹುದು ಎನ್ನಲಾಗಿದೆ. ಆದರೆ ಕೆಲವು ಮೂಲಗಳ ಪ್ರಕಾರ DRI ಅಧಿಕಾರಿಗಳ ದಾಳಿಗೂ, ಹಣ ಉದುರುತ್ತಿರುವುದಕ್ಕೂ ಸಂಬಮಧವಿಲ್ಲ, ಅದು ಕಾಕತಾಳೀಯ ಎನ್ನಲಾಗಿದೆ.ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.