ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳದ ಲಸಿಕಾ ಕೇಂದ್ರದಲ್ಲಿ ಕಾಲ್ತುಳಿತ, 20 ಮಂದಿಗೆ ಗಾಯ

|
Google Oneindia Kannada News

ಕೋಲ್ಕತ್ತಾ, ಆಗಸ್ಟ್ 31: ಪಶ್ಚಿಮ ಬಂಗಾಳದ ಲಸಿಕಾ ಕೇಂದ್ರದಲ್ಲಿ ಕಾಲ್ತುಳಿತ ಉಂಟಾಗಿದ್ದು, 20 ಮಂದಿಗೆ ಗಂಭೀರ ಗಾಯಗಳಾಗಿವೆ.

ಉತ್ತರ ಬಂಗಾಳದ ಜಲಪೈ ಗುರಿಯ ದುಪ್ಗುರಿ ಬ್ಲಾಕ್ ನಲ್ಲಿ ಲಸಿಕಾ ಕೇಂದ್ರವಾಗಿ ಶಾಲೆಯೊಂದನ್ನು ಪರಿವರ್ತಿಸಲಾಗಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಟೀ ಗಾರ್ಡನ್ ಜನರಿಂದ ಒಮ್ಮೆಲ್ಲೆ ನೂಕು ನೂಗಲು ಉಂಟಾದ್ದರಿಂದ ಈ ಘಟನೆ ಸಂಭವಿಸಿದೆ.

ಸುಮಾರು 2 ಸಾವಿರ ಜನರು ಲಸಿಕಾ ಕೇಂದ್ರದ ಬಳಿ ನೆರೆದಿದ್ದರು. ಅಲ್ಲಿ ಯಾವುದೇ ಪೊಲೀಸರನ್ನು ನಿಯೋಜಿಸಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Corona

ಪಶ್ಚಿಮ ಬಂಗಾಳದ ಜಲ ಪೈಗುರಿ ಜಿಲ್ಲೆಯ ಕೋವಿಡ್-19 ಲಸಿಕಾ ಕೇಂದ್ರವೊಂದರ ಬಳಿ ಕಾಲ್ತುಳಿತ ಸಂಭವಿಸಿದ್ದು, ಸುಮಾರು 10 ಜನರು ಗಾಯಗೊಂಡಿದ್ದಾರೆ. ಸುಮಾರು 30 ಜನ ಗಾಯಗೊಂಡಿದ್ದರೂ ಪೊಲೀಸರು 20 ಜನ ಗಾಯಗೊಂಡಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ. ಗಾಯಾಳುಗಳ ಪೈಕಿ ಐವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಆದಾಗ್ಯೂ, ಘಟನೆಯಲ್ಲಿ ಸುಮಾರು 30 ಮಂದಿ ಗಾಯಗೊಂಡಿದ್ದು, 8 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ.

ಅಪಾರ ಪ್ರಮಾಣದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರ ಪರಿಸ್ಥಿತಿ ತಹಬದಿಗೆ ಬಂದಿದೆ. ಸ್ಥಳೀಯರು ಕೂಡಾ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವಲ್ಲಿ ನೆರವಾಗಿದ್ದಾರೆ. ಘಟನೆಯಲ್ಲಿ ಸುಮಾರು 20 ಜನರು ಗಾಯಗೊಂಡಿದ್ದಾರೆ.

ಆದರೆ ಅವರಲ್ಲಿ 15 ಜನರಿಗೆ ಪ್ರಾಥಮಿಕ ಉಪಚಾರದ ನಂತರ ವಾಪಸ್ ಕಳುಹಿಸಲಾಗಿದೆ. ಐವರು ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ಜಲ್ ಪೈಗುರಿ ಪೊಲೀಸ್ ಮಹಾನಿರ್ದೇಶಕ ದೆಬೊರ್ಷಿ ದತ್ತ ಹೇಳಿದ್ದಾರೆ.

ಕಳೆದ ವಾರವಷ್ಟೇ ಭಾರತದಲ್ಲಿ ಒಂದೇ ದಿನದಲ್ಲಿ 1 ಕೋಟಿ ಕೊರೊನಾ ಲಸಿಕೆ ವಿತರಣೆ ಮಾಡಲಾಗಿತ್ತು, ಇದೀಗ ಮತ್ತೊಂದು ದಾಖಲೆ ಸೃಷ್ಟಿಸಿದ್ದು ಮಂಗಳವಾರ ಸಂಜೆ 8 ಗಂಟೆಯವರೆಗೆ 1.21 ಕೋಟಿ ಕೊರೊನಾ ಲಸಿಕೆಯನ್ನು ವಿತರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಆಗಸ್ಟ್ 27ರಂದು ಭಾರತದಲ್ಲಿ 1,08,99,699 ಕೊರೊನಾ ಲಸಿಕೆಯನ್ನು ನೀಡಲಾಗಿತ್ತು, ಇದುವರೆಗಿನ ಲಸಿಕೀಕರಣದಲ್ಲಿ ಇದು ಅತಿ ದೊಡ್ಡ ಸಂಖ್ಯೆಯಾಗಿತ್ತು. ಇದೀಗ ತನ್ನ ದಾಖಲೆಯನ್ನೇ ಭಾರತವು ಮುರಿದಿದೆ.

ರಾತ್ರಿ 8 ಗಂಟೆಯಷ್ಟೊತ್ತಿಗೆ ದೇಶದಲ್ಲಿ 1,21,99,230 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಆಗಸ್ಟ್ ತಿಂಗಳಲ್ಲಿ ಒಟ್ಟು 18 ಕೋಟಿ ಡೋಸ್‌ಗಳನ್ನು ನೀಡಲಾಗಿದೆ. ಜುಲೈಗಿಂತ ಶೇ.33ರಷ್ಟು ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ. ಜುಲೈನಲ್ಲಿ ಒಟ್ಟು 13.45 ಕೋಟಿ ಡೋಸ್‌ಗಳನ್ನು ನೀಡಲಾಗಿತ್ತು.

ಭಾರತದಲ್ಲಿ ಇದುವರೆಗೆ 50 ಕೋಟಿ ಮಂದಿ ಮೊದಲ ಡೋಸ್ ಪಡೆದಿದ್ದು, 15 ಕೋಟಿ ಮಂದಿ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ ಒಟ್ಟು ಇದುವರೆಗೆ 65 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ.

English summary
On the day when West Bengal vaccinated a record 11 lakh people against COVID-19, a stampede at a vaccination centre in Jalpaiguri district left around 20 people injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X