ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ತಿಂಗಳಲ್ಲಿ ಟಿಎಂಸಿ-ಬಿಜೆಪಿ-ಟಿಎಂಸಿಗೆ ಸೇರ್ಪಡೆಯಾದ ಪ್ರಚಂಡ ರಾಜಕಾರಣಿಗಳು

|
Google Oneindia Kannada News

Recommended Video

1 ತಿಂಗಳಲ್ಲಿ ಟಿಎಂಸಿ-ಬಿಜೆಪಿ-ಟಿಎಂಸಿಗೆ ಸೇರ್ಪಡೆಯಾದ ಪ್ರಚಂಡ ರಾಜಕಾರಣಿಗಳು

ಕೋಲ್ಕತ್ತಾ, ಜುಲೈ 31: ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ಸಿನ ಸಾಲುಸಾಲು ಶಾಸಕರು, ಕೌನ್ಸಿಲರ್ ಗಳು ಬಿಜೆಪಿಗೆ ಸೇರುತ್ತಿರುವ ಮಧ್ಯೆ, ಬಿಜೆಪಿ ಸೇರಿದ್ದ ಇಬ್ಬರು ಟಿಎಂಸಿ ಕೌನ್ಸಿಲರ್ ಗಳು ತಮ್ಮ ನಿಯತ್ತನ್ನು ಒಂದೇ ತಿಂಗಳಲ್ಲಿ ಬದಲಾಯಿಸಿ, ಮಾತೃಪಕ್ಷಕ್ಕೆ ಮರಳಿದ್ದಾರೆ.

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಹರಿಂಗಘಾಟಾ ಏಳನೇ ವಾರ್ಡಿನ ಸೂಗಿ ಸೊರೇನ್ ಮತ್ತು ಹದಿನೇಳನೇ ವಾರ್ಡಿನ ಸೌಮೇಂದ್ರನಾಥ ಬ್ಯಾನರ್ಜಿ ಕೇವಲ ಒಂದು ತಿಂಗಳ ಹಿಂದೆ, ಬಿಜೆಪಿ ಸೇರಿದ್ದರು. ಆದರೆ, ಬದಲಾದ ಜಿಲ್ಲೆಯ ರಾಜಕೀಯ ಪರಿಸ್ಥಿತಿಯಲ್ಲಿ ವಾಪಸ್ ಟಿಎಂಸಿ ಪಕ್ಷಕ್ಕೆ ಮರಳಿದ್ದಾರೆ.

ಸಿದ್ದಾರ್ಥ ಸಾವಿಗೆ ವಿಷಾದ ವ್ಯಕ್ತಪಡಿಸುತ್ತಾ ಮೋದಿ ಸರಕಾರವನ್ನು ಬೆಂಡೆತ್ತಿದ ಮಮತಾಸಿದ್ದಾರ್ಥ ಸಾವಿಗೆ ವಿಷಾದ ವ್ಯಕ್ತಪಡಿಸುತ್ತಾ ಮೋದಿ ಸರಕಾರವನ್ನು ಬೆಂಡೆತ್ತಿದ ಮಮತಾ

"ನಮ್ಮ ನಾಯಕಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅನುಮತಿ ಸಿಕ್ಕಿದ ನಂತರ, ಇಬ್ಬರು ಕೌನ್ಸಿಲರ್ ಗಳನ್ನು ವಾಪಸ್ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ" ಎಂದು ಪಕ್ಷದ ಜಿಲ್ಲಾಧ್ಯಕ್ಷರು ಹೇಳಿಕೆಯನ್ನು ನೀಡಿದ್ದಾರೆ.

Two Councillors Rejoined TMC From BJP In Nadia District Of West Bengal

"ಸ್ಥಳೀಯ ಮುಖಂಡರ ಜೊತೆಗಿನ ಮನಸ್ತಾಪದಿಂದಾಗಿ ಪಕ್ಷ ತೊರೆದಿದ್ದೆವು. ಪಕ್ಷ ತೊರೆದ ಕೆಲವೇ ದಿನಗಳಲ್ಲಿ, ಬಿಜೆಪಿ ಪಕ್ಷದಲ್ಲಿ ಕೆಲಸ ಮಾಡುವುದು ಕಷ್ಟ ಎನ್ನುವುದನ್ನು ಅರಿತು, ವಾಪಸ್ ಟಿಎಂಸಿಗೆ ಮರಳಿದ್ದೇವೆ" ಎಂದು ಸೌಮೇಂದ್ರನಾಥ ಬ್ಯಾನರ್ಜಿ ಹೇಳಿದ್ದಾರೆ.

ಏಪ್ರಿಲ್ - ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ನಂತರ, ಬಿಜೆಪಿಗೆ ಹಲವು ಟಿಎಂಸಿ ಮುಖಂಡರು ಗುಳೇ ಹೋಗಿದ್ದರು. ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಹದಿನೆಂಟು ಕ್ಷೇತ್ರದಲ್ಲಿ ಜಯ ಸಾಧಿಸಿತ್ತು.

ಬಂಗಾಳದಲ್ಲಿ ಹೆಚ್ಚಿದ ಬಿಜೆಪಿ ಪ್ರಭಾವ ತಗ್ಗಿಸಲು 'ದೀದಿಗೆ ಹೇಳಿ'! ಬಂಗಾಳದಲ್ಲಿ ಹೆಚ್ಚಿದ ಬಿಜೆಪಿ ಪ್ರಭಾವ ತಗ್ಗಿಸಲು 'ದೀದಿಗೆ ಹೇಳಿ'!

ಟಿಎಂಸಿ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ಪಕ್ಷದ ಸುಮಾರು 107 ಶಾಸಕರು ಬಿಜೆಪಿ ಸೇರಲು ಸಿದ್ದರಾಗಿದ್ದಾರೆಂದು, ಒಂದು ಕಾಲದಲ್ಲಿ ಮಮತಾ ಆಪ್ತ, ಈಗ ಬಿಜೆಪಿಯ ಪ್ರಭಾವೀ ಮುಖಂಡರಾಗಿರುವ ಮುಕುಲ್ ರಾಯ್ ಕೆಲವು ದಿನಗಳ ಹಿಂದೆ ಹೇಳಿಕೆಯನ್ನು ನೀಡಿದ್ದರು.

English summary
Two councillors rejoined West Bengal’s ruling Trinamool Congress (TMC) in Nadia district over a month after they defected to BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X