ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನುಮಾನ್ ಚಾಲಿಸಾ ವಾಚಿಸಿದ್ದಕ್ಕೆ ಬೆದರಿಕೆ: ತ್ರಿವಳಿ ತಲಾಖ್ ಅರ್ಜಿದಾರಳ ಅಳಲು

|
Google Oneindia Kannada News

ಕೋಲ್ಕತ್ತಾ, ಜುಲೈ 18: ಕೋಲ್ಕತ್ತದ ಬಿಜೆಪಿ ಸದಸ್ಯೆ ಇಶ್ರಾತ್ ಜಹಾನ್ ಅವರು ಹಿಜಾಬ್ ಧರಿಸಿ ಹನುಮಾನ್ ಚಾಲಿಸಾ ವಾಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ತಮಗೆ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಿದ್ದಾರೆ.

ತ್ರಿವಳಿ ತಲಾಖ್ ನಿಷೇಧಿಸಬೇಕೆಂದು ಸುಪ್ರೀಂ ಕೋರ್ಟ್ ಮೊರೆಹೋಗಿದ್ದ ಅರ್ಜಿದಾರರಲ್ಲಿ ಒಬ್ಬರಾದ ಇಶ್ರಾತ್ ಜಹಾನ್, ತಮಗೆ ಅಸಭ್ಯ ಭಾಷೆಯಲ್ಲಿ ಬೆದರಿಕೆ ಒಡ್ಡಲಾಗಿದೆ, ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೊವ್ರಾದ ಗೊಲಾಬರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮದುವೆಯಾಗಿ 24 ಗಂಟೆಗಳಲ್ಲೇ ಪತ್ನಿಗೆ ತಲಾಖ್ ಕೊಟ್ಟಿದ್ದು ಇದೇ ಕಾರಣಕ್ಕೆಮದುವೆಯಾಗಿ 24 ಗಂಟೆಗಳಲ್ಲೇ ಪತ್ನಿಗೆ ತಲಾಖ್ ಕೊಟ್ಟಿದ್ದು ಇದೇ ಕಾರಣಕ್ಕೆ

ಹಿಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹನುಮಾನ್ ಚಾಲಿಸಾ ವಾಚನದ ಸಮಯದಲ್ಲಿ ಉಪಸ್ಥಿತರಿದ್ದ ಕಾರಣಕ್ಕೆ ತಮ್ಮ ಭಾವ ಮತ್ತು ಮಾಲೀಕ ಸೇರಿ ತನ್ನನ್ನು ವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಒಡ್ಡಿದ್ದಾರೆ ಎಂದು ಜಹಾನ್ ಆರೋಪಿಸಿದ್ದಾರೆ.

Triple Talaq petitioner threatened for attending Hanuman Chalisa programme

ತ್ರಿವಳಿ ತಲಾಖ್ ಮಸೂದೆ ಮಂಡನೆ: ವಿರೋಧಿಸಿದ್ದು ಯಾರು? ಅಧಿವೇಶನದಲ್ಲಿ ನಡೆದಿದ್ದೇನು?ತ್ರಿವಳಿ ತಲಾಖ್ ಮಸೂದೆ ಮಂಡನೆ: ವಿರೋಧಿಸಿದ್ದು ಯಾರು? ಅಧಿವೇಶನದಲ್ಲಿ ನಡೆದಿದ್ದೇನು?

ನಾನು ಕಾರ್ಯಕ್ರಮ ಮುಗಿಸಿ ಬರುತ್ತಿದ್ದಂತೆಯೇ ನಮ್ಮ ಮನೆ ಎದುರು ನೆರೆದಿದ್ದ ಹಲವರು 'ಹಿಜಾಬ್ ಹಾಕಿ ಹನುಮಾನ್ ಚಾಲಿಸಾ ಕಾರ್ಯಕ್ರಮಕ್ಕೆ ಏಕೆ ತೆರಳಿದ್ದೆ ಎಂದು ನನ್ನನ್ನು ಪ್ರಶ್ನಿಸಿದರು. ಆ ಕೂಡಲೇ ಮನೆ ಖಾಲಿ ಮಾಡದಿದ್ದರೆ ನನ್ನನ್ನು ಮನೆಯಿಂದ ಆಚೆ ಕಳಿಸುವುದಾಗಿ ಬೆದರಿಕೆ ಒಡ್ಡಿದರು. ನಾನು ನನ್ನ ಮಗನೊಂದಿಗೆ ವಾಸವಾಗಿದ್ದೇನೆ. ನನಗೆ ರಕ್ಷಣೆ ನೀಡುವಂತೆ ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ' ಎಮದು ಜಹಾನ್ ದೂರಿನಲ್ಲಿ ಮನವಿ ಮಾಡಿದ್ದಾರೆ.

English summary
Kolkata Bharatiya Janata Party (BJP) member Ishrat Jahan, a petitioner in the triple talaq case in the Supreme Court, has filed a police complaint alleging she was threatened and verbally abused for attending a Hanuman Chalisa recital in a hijab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X