ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100% ದೃಷ್ಟಿಹೀನ ಬಜೆಟ್; ತೃಣಮೂಲ ಕಾಂಗ್ರೆಸ್ ಟೀಕೆ

|
Google Oneindia Kannada News

ನವದೆಹಲಿ, ಫೆಬ್ರುವರಿ 01: "ಇದು 100% ದೃಷ್ಟಿಹೀನ ಬಜೆಟ್. ಭಾರತವನ್ನು ಮಾರಾಟ ಮಾಡುವ ಪರಿಕಲ್ಪನೆಯಲ್ಲಿ ಈ ಬಜೆಟ್ ಮಂಡನೆ ಮಾಡಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಟೀಕಿಸಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಕೇಂದ್ರ ಬಜೆಟ್ ಮಂಡನೆ ಮಾಡಿದ್ದು, ಈ ಬಗ್ಗೆ ತೃಣಮೂಲ ಕಾಂಗ್ರೆಸ್ ಟೀಕೆ ಮಾಡಿದೆ.

ಕೇಂದ್ರ ಬಜೆಟ್‌ಗೆ ಬಂಗಾಳಿಗಳದ್ದೇ ಚಿಂತೆ; ನಿರ್ಮಲಾ ಸೀರೆಯಲ್ಲಿ ಅಡಗಿತ್ತಾ ಮರ್ಮ?ಕೇಂದ್ರ ಬಜೆಟ್‌ಗೆ ಬಂಗಾಳಿಗಳದ್ದೇ ಚಿಂತೆ; ನಿರ್ಮಲಾ ಸೀರೆಯಲ್ಲಿ ಅಡಗಿತ್ತಾ ಮರ್ಮ?

"ಭಾರತದ ಮೊದಲ ಕಾಗದರಹಿತ ಬಜೆಟ್ ಎಂಬುದು ಕೂಡ ದೃಷ್ಟಿರಹಿತ ಬಜೆಟ್. ಈ ನಕಲಿ ಬಜೆಟ್ ಉದ್ದೇಶವೇ ಭಾರತವನ್ನು ಮಾರಾಟ ಮಾಡುವುದು" ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಡೇರಕ್ ಒಬ್ರಿಯಾನ್ ಪ್ರತಿಕ್ರಿಯೆ ನೀಡಿದ್ದಾರೆ.

 Trinamul Congress Reaction Over Budget 2021

ರೈಲ್ವೆ ಮಾರಾಟವಾಗಿದೆ, ವಿಮಾನ ನಿಲ್ದಾಣ ಮಾರಾಟವಾಗಿದೆ, ಬಂದರುಗಳನ್ನು ಮಾರಾಟ ಮಾಡಲಾಗಿದೆ. ವಿಮೆಗಳನ್ನು ಮಾರಾಟ ಮಾಡಲಾಗಿದೆ. ಈ ಬಾರಿ ಭಾರತವನ್ನು ಇನ್ನಷ್ಟು ಮಾರಾಟ ಮಾಡುವ ಯೋಜನೆ ಮಂಡಿಸಲಾಗಿದೆ ಎಂದು ದೂರಿದರು.

ಬಜೆಟ್ ನಲ್ಲಿ ಸಾಮಾನ್ಯ ಜನರನ್ನು ಹಾಗೂ ರೈತರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಈ ಬಜೆಟ್ ಶ್ರೀಮಂತರನ್ನು ಶ್ರೀಮಂತರನ್ನಾಗಿಸುತ್ತದೆ. ಬಡವರನ್ನು ಬಡವರಾಗಿಯೇ ಉಳಿಸುತ್ತದೆ. ಮಧ್ಯಮ ವರ್ಗದವರಿಗೆ ಏನೂ ದೊರೆತಿಲ್ಲ ಎಂದು ಆರೋಪಿಸಿದರು.

ಪಶ್ಚಿಮ ಬಂಗಾಳ ನಿನ್ನೆ ಮಾಡಿ ಬಿಟ್ಟಿದ್ದರ ಬಗ್ಗೆ ಇಂದು ಕೇಂದ್ರ ಸರ್ಕಾರ ಮಾತನಾಡುತ್ತಿದೆ. ಈ ಬಾರಿ ಬಜೆಟ್ 625 ಕಿಲೋ ಮೀಟರ್ ರಸ್ತೆ ಬಗ್ಗೆ ಭರವಸೆ ನೀಡಿದೆ. 2018-19ರ ಸಾಲಿನಲ್ಲಿ 5111 ಕಿ.ಮೀ ರಸ್ತೆ ಇತ್ತು. 2019-20ನೇ ಸಾಲಿನಲ್ಲಿ 1165 ಕಿ.ಮೀ ರಸ್ತೆ ನಿರ್ಮಿಸಲಾಗಿದೆ ಎಂದು ಟೀಕಿಸಿದರು.

English summary
"It was 100 per cent "visionless" and its theme was "sell India" reacted TMC over union budget 2021
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X