ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕಿಯ ಕೈಕಾಲು ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಟಿಎಂಸಿ ಮುಖಂಡ

|
Google Oneindia Kannada News

Recommended Video

Lady teacher was punished inhumanely in West Bengal | Brutal | Viral

ಕೊಲ್ಕತ್ತ, ಫೆಬ್ರವರಿ 3: ರಸ್ತೆ ನಿರ್ಮಾಣಕ್ಕಾಗಿ ಭೂಮಿಯನ್ನು ಅಕ್ರಮವಾಗಿ ಕಬಳಿಸಿದ್ದವರ ವಿರುದ್ಧ ಧ್ವನಿ ಎತ್ತಿದ ಶಿಕ್ಷಕಿಯನ್ನು ಕೈಕಾಲುಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಅಮಾನವೀಯ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್ ಪುರ್‌ನ ಗಂಗ್ರಾಮ್‌ ಪುರದಲ್ಲಿ ನಡೆದಿದೆ.

ಶಿಕ್ಷಕಿಗೆ ಸೇರಿದ್ದ ಭೂಮಿಯನ್ನು ಬಲವಂತವಾಗಿ ಆಕ್ರಮಣ ಮಾಡಿ ರಸ್ತೆ ನಿರ್ಮಿಸಲು ಪಂಚಾಯತ್ ಮುಖಂಡರು ಮುಂದಾಗಿದ್ದರು. ಇದರ ವಿರುದ್ಧ ಶಿಕ್ಷಕಿ ಪ್ರತಿಭಟಿಸಿದ್ದರು. ಇದಕ್ಕೆ ಆಕ್ರೋಶಗೊಂಡ ಮುಖಂಡ ಹಾಗೂ ಆತನ ಬೆಂಬಲಿಗರು ಸೇರಿ ಶಿಕ್ಷಕಿಯ ಕೈಕಾಲುಗಳನ್ನು ಕಟ್ಟಿ ರಸ್ತೆಯ ಮೇಲೆ ಎಳೆದೊಯ್ದಿದ್ದಾರೆ.

ಮಹಿಳೆಯರ ಸೀಟಲ್ಲಿ ಕೂರ್ಬೇಡಿ ಏಳಿ ಅಂದ ಕಂಡಕ್ಟರ್ ಗತಿ ಏನಾಯ್ತು?ಮಹಿಳೆಯರ ಸೀಟಲ್ಲಿ ಕೂರ್ಬೇಡಿ ಏಳಿ ಅಂದ ಕಂಡಕ್ಟರ್ ಗತಿ ಏನಾಯ್ತು?

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪಂಚಾಯತ್ ಮುಖಂಡನನ್ನು ತೃಣಮೂಲ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರ್ಪಿತಾ ಘೋಷ್ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Trinamool Member Leads Assault On Woman Teacher

ಸ್ಥಳೀಯ ಪಂಚಾಯತ್ ನ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡ ಸೇರಿದಂತೆ ಕೆಲ ಟಿಎಂಸಿ ಕಾರ್ಯಕರ್ತರು ಶಿಕ್ಷಕಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತ್ತಿದೆ.

ಘಟನೆ ವೇಳೆ ಶಿಕ್ಷಕಿಯ ರಕ್ಷಣೆಗೆ ಧಾವಿಸಿದ್ದ ತಾಯಿ ಹಾಗೂ ಸಹೋದರಿಗೂ ಟಿಎಂಸಿ ಕಾರ್ಯಕರ್ತರು ಥಳಿಸಿದ್ದಾರೆಂದು ಹೇಳಲಾಗುತ್ತಿದೆ.

ರಸ್ತೆ ನಿರ್ಮಾಣ ಹಿನ್ನೆಲೆಯಲ್ಲಿ ಆರಂಭದಲ್ಲಿಯೇ ಮನೆ ಮುಂಭಾಗದಲ್ಲಿ 12 ಅಡಿ ಜಾಗ ನೀಡಲಾಗಿತ್ತು. ಆದರೆ, ಪಂಚಾಯತ್ ಮುಖಂಡರು ಹಾಗೂ ಸದಸ್ಯರು ನಮಗೆ ಮಾಹಿತಿ ನೀಡದೆಯೇ, ಯಾವುದೇ ಪರಿಹಾರವನ್ನೂ ನೀಡದೆಯೇ ರಸ್ತೆಗೆ 24 ಅಡಿ ಜಾಗ ಕಬಳಿಕೆ ಮಾಡಿಕೊಂಡು ನಿರ್ಮಾಣಕ್ಕೆ ಮುಂದಾಗಿದ್ದರು. ಇದರಿಂದ ನಮ್ಮ ಬಹುತೇಕ ಜಾಗ ನಾಶಗೊಳ್ಳುತ್ತದೆ. ನಮಗೆ ನಷ್ಟವಾಗುತ್ತದೆ ಎಂದು ಶಿಕ್ಷಕಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಘಟನೆ ಬಳಿಕ ಗ್ರಾಮಸ್ಥರು ಶಿಕ್ಷಕಿ ಹಾಗೂ ಆಕೆಯ ಕುಟುಂಬ ಸದಸ್ಯರನ್ನು ರಕ್ಷಣೆ ಮಾಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

English summary
In a despicable incident, a female teacher in West Bengal's South Dinajpur district was tied, beaten, and dragged for resisting a land acquisition attempt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X