ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ v/s ಮಮತಾ ಬ್ಯಾನರ್ಜಿ ಯುದ್ಧ: ಪ್ರಮುಖ ಘಟನಾವಳಿಗಳು

|
Google Oneindia Kannada News

ಕೊಲ್ಕತ್ತ, ಫೆಬ್ರವರಿ 06: ಕಳೆದ ಎರಡು ದಿನಗಳಿಂದ ಕೊಲ್ಕತ್ತದಲ್ಲಿ ನಡೆಯುತ್ತಿರುವ ಘಟನೆಗಳು ದೇಶದ ಗಮನ ಸೆಳೆದಿದೆ. ಕೊಲ್ಕತ್ತ ಪೊಲೀಸ್ ಕಮಿಷನರ್ ಅವರ ಬಂಧನಕ್ಕೆ ಬಂದಿದ್ದ ಸಿಬಿಐನ ಅಧಿಕಾರಿಗಳನ್ನೇ ಕೊಲ್ಕತ್ತ ಪೊಲೀಸರು ಬಂಧಿಸಿದ್ದರು. ಆ ನಂತರ ಅದು ಮಮತಾ ಬ್ಯಾನರ್ಜಿ v/s ಕೇಂದ್ರ ಸರ್ಕಾರ ಮಧ್ಯೆ ಯುದ್ಧವಾಗಿ ಮಾರ್ಪಾಡಾಯಿತು.

ಮುಖ್ಯಮಂತ್ರಿ ಧರಣಿ ಕೂರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ: ಯೋಗಿಮುಖ್ಯಮಂತ್ರಿ ಧರಣಿ ಕೂರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ: ಯೋಗಿ

ಮಮತಾ ಬ್ಯಾನರ್ಜಿ ಅವರು ಸಿಬಿಐ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಭಾನುವಾರ ರಾತ್ರಿ ಪ್ರತಿಭಟನಾ ಧರಣಿ ಕೂತರು. ಪ್ರಕರಣ ಸುಪ್ರಿಂಕೋರ್ಟ್‌ ಮೆಟ್ಟಿಲೇರಿತು. ಇಂದು ಸುಪ್ರಿಂ ಕೋರ್ಟ್‌ ಆದೇಶ ಹೊರಡಿಸಿದ ನಂತರ ಮಮತಾ ಬ್ಯಾನರ್ಜಿ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

ದೀದಿಗೆ ಮುಖಭಂಗ: ವಿಚಾರಣೆಗೆ ಹಾಜರಾಗಲು ಕುಮಾರ್ ಗೆ ಸುಪ್ರೀಂ ಸೂಚನೆದೀದಿಗೆ ಮುಖಭಂಗ: ವಿಚಾರಣೆಗೆ ಹಾಜರಾಗಲು ಕುಮಾರ್ ಗೆ ಸುಪ್ರೀಂ ಸೂಚನೆ

ಕೇಂದ್ರ ಸರ್ಕಾರ v/s ಮಮತಾ ಬ್ಯಾನರ್ಜಿ ಯುದ್ಧದ ಪ್ರಮುಖ ಘಟನಾವಳಿಗಳು ಇಲ್ಲಿವೆ...

* ಕೊಲ್ಕತ್ತ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರನ್ನು ಚಿಟ್‌ಫಂಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ, ತಪಾಸಣೆ ಹಾಗೂ ಬಂಧನಕ್ಕೆ ಭಾನುವಾರ ರಾತ್ರಿ ಸಿಬಿಐ ತಂಡ ಆಗಮನ, ಸಿಬಿಐ ತಂಡವನ್ನು ವಶಕ್ಕೆ ಪಡೆದ ಕೊಲ್ಕತ್ತ ಪೊಲೀಸರು.

ಸಿಬಿಐ Vs ಮಮತಾ ಕದನದ ಕೇಂದ್ರಬಿಂದು ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಯಾರು?ಸಿಬಿಐ Vs ಮಮತಾ ಕದನದ ಕೇಂದ್ರಬಿಂದು ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಯಾರು?

ಮಮತಾ ಬ್ಯಾನರ್ಜಿ ಧರಣಿ ಪ್ರಾರಂಭ

ಮಮತಾ ಬ್ಯಾನರ್ಜಿ ಧರಣಿ ಪ್ರಾರಂಭ

* ಕೇಂದ್ರ ತನಿಖಾ ಸಂಸ್ಥೆಯನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಮಮತಾ ಬ್ಯಾನರ್ಜಿ ಭಾನುವಾರ ರಾತ್ರಿ ಧರಣಿ ಸತ್ಯಾಗ್ರಹ. ಸಂವಿಧಾನ ಉಳಿಸಿ ಪ್ರತಿಭಟನೆಗೆ ಟಿಎಂಸಿಯ ಕಾರ್ಯಕರ್ತರು, ಮಂತ್ರಿಗಳು, ಶಾಸಕರು ಭಾಗಿ.

ಹಲವು ರಾಷ್ಟ್ರ ನಾಯಕರ ಬೆಂಬಲ

ಹಲವು ರಾಷ್ಟ್ರ ನಾಯಕರ ಬೆಂಬಲ

* ಚಂದ್ರಬಾಬು ನಾಯ್ಡು, ಕನಿಮೋಳಿ, ರಾಹುಲ್ ಗಾಂಧಿ, ದೇವೇಗೌಡ, ಯಶವಂತ ಸಿನ್ಹಾ, ಶರದ್ ಪೊವಾರ್, ತೇಜಸ್ವಿ ಯಾದವ್ ಸೇರಿ ಇನ್ನೂ ಹಲವರಿಂದ ಮಮತಾ ಬ್ಯಾನರ್ಜಿಗೆ ಬೆಂಬಲ.

* ಕೊಲ್ಕತ್ತ ಪೊಲೀಸರು ಹಾಗೂ ಮಮತಾ ಬ್ಯಾನರ್ಜಿ ವಿರುದ್ಧ ಸುಪ್ರಿಂಕೋರ್ಟ್‌ಗೆ ಮನವಿ ಸಲ್ಲಿಸಿದ ಸಿಬಿಐ, ಸೂಕ್ತ ದಾಖಲೆಗಳೊಂದಿಗೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚನೆ.

ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ

ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ

* ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ, ಕೊಲ್ಕತ್ತ ಪೊಲೀಸ್ ಕಮಿಷನರ್ ರಾಜೀವ್ ಅವರು ಮೇಘಾಲಯದ ಶಿಲ್ಲಾಂಗ್‌ನಲ್ಲಿ ಸಿಬಿಐ ಎದುರು ವಿಚಾರಣೆಗೆ ಹಾಜರಾಗಲು ಸೂಚಿಸಿತು. ಹಾಗೆಯೇ ರಾಜೀವ್ ಕುಮಾರ್ ಅವರನ್ನು ಬಂಧಿಸದಂತೆ ಸಿಬಿಐಗೆ ಸೂಚನೆ ನೀಡಿದೆ.

ಧರಣಿ ಅಂತ್ಯಗೊಳಿಸಿದ ಮಮತಾ

ಧರಣಿ ಅಂತ್ಯಗೊಳಿಸಿದ ಮಮತಾ

* ಸುಪ್ರಿಂ ಆದೇಶದ ಬಳಿಕ ಮಮತಾ ಬ್ಯಾನರ್ಜಿ ಅವರು ತಮ್ಮ ಮೂರು ದಿನದ ಧರಣಿ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು. ಇದು ನಮಗೆ ಸಿಕ್ಕ ನೈಕಿಕ ಜಯ ಎಂದು ಹೇಳಿದರು. ಇನ್ನು ಮುಂದೆ ಇದೇ ಹೋರಾಟ ದೆಹಲಿಯಲ್ಲಿ ಮುಂದುವರೆಯಲಿದೆ ಎಂದು ಮಮತಾ ಹೇಳಿದರು.

'ಮಮತಾ ಮುಖದ ಮೇಲೆ ಮೊಟ್ಟೆ'

'ಮಮತಾ ಮುಖದ ಮೇಲೆ ಮೊಟ್ಟೆ'

* ಸುಪ್ರಿಂಕೋರ್ಟ್‌ ಆದೇಶದ ಬಳಿಕ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸುಪ್ರಿಂ ಆದೇಶ ಮಮತಾ ಬ್ಯಾನರ್ಜಿ ಮುಖದ ಮೇಲೆ ಮೊಟ್ಟೆ ಎಸೆದಂತಾಗಿದೆ ಎಂದರು.

English summary
The Police Commissioner of Kolkata Rajeev Kumar will appear before the Central Bureau of Investigation (CBI) in Shillong, Meghalaya as a neutral place, says Supreme court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X