ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸ್ತೆಯಲ್ಲಿ ನಮಾಜ್ ಗೆ ಬಿಜೆಪಿಯ ತಿರುಗೇಟು: ರಸ್ತೆಯಲ್ಲೇ ಹನುಮಾನ್ ಚಾಲೀಸ್

|
Google Oneindia Kannada News

ಕೋಲ್ಕತಾ, ಜೂನ್ 26: ರಸ್ತೆಯಲ್ಲಿ ನಮಾಜ್ ಮಾಡುವ ಪದ್ದತಿಗೆ ಬ್ರೇಕ್ ಹಾಕಬೇಕೆಂದು, ಕೋಲ್ಕತ್ತಾ ಬಿಜೆಪಿಯ ಯುವಮೋರ್ಚಾ ಘಟಕ, ವಿನೂತನ ಪ್ರತಿಭಟನೆಗೆ ಮುಂದಾಗಿದೆ.

ನಗರದ ಜಿ ಟಿ ರಸ್ತೆಯಲ್ಲಿ ಪ್ರತೀ ಶುಕ್ರವಾರ ರಸ್ತೆಯಲ್ಲಿ ನಮಾಜ್ ಮಾಡಲು ಸರಕಾರ ಅನುಮತಿ ನೀಡಿತ್ತು. ಇದನ್ನು ವಿರೋಧಿಸಿ ಬಿಜೆಪಿ ಈ ಹಿಂದೆ ಹಲವು ಬಾರಿ ತನ್ನ ಆಕ್ರೋಶ ವ್ಯಕ್ತಪಡಿಸಿತ್ತು.

ದೇಶದಲ್ಲಿ ಮಹಾ ತುರ್ತುಪರಿಸ್ಥಿತಿ: ಮಮತಾ ಬ್ಯಾನರ್ಜಿ ಆರೋಪದೇಶದಲ್ಲಿ ಮಹಾ ತುರ್ತುಪರಿಸ್ಥಿತಿ: ಮಮತಾ ಬ್ಯಾನರ್ಜಿ ಆರೋಪ

ಈಗ, ರಸ್ತೆಯಲ್ಲಿ ಮಾಡುವ ನಮಾಜ್ ಗೆ ತಿರುಗೇಟು ನೀಡಲು, ಹೌರಾದ ಬಲ್ಲಿಖಾಲಿ ಎನ್ನುವ ಪ್ರದೇಶದಲ್ಲಿ, ಬಿಜೆಪಿಯ ಯುವಮೋರ್ಚಾ, ರಸ್ತೆಯಲ್ಲಿ ಹನುಮಾನ್ ಚಾಲೀಸ್ ಪಠಿಸಿ, ಪ್ರತಿಭಟನೆ ನಡೆಸಿದೆ.

To protest against Namaz in road, BJP recite Hanuman chalis in Howrah road

ಹೌರಾ ಘಟಕದ ಬಿಜೆಪಿ ಮುಖ್ಯಸ್ಥ ಒ ಪಿ ಸಿಂಗ್, ಜಿ ಟಿ ರಸ್ತೆಯಲ್ಲಿ ಪ್ರತೀ ಶುಕ್ರವಾರ ರಸ್ತೆಯಲ್ಲಿ ನಮಾಜ್ ಮಾಡಲು ಅವಕಾಶ ನೀಡಲಾಗುತ್ತದೆ. ಇದರಿಂದ, ಟ್ರಾಫಿಕ್ ಜಾಮ್ ಆಗುತ್ತದೆ, ರೋಗಿಗಳು ಸಾವನ್ನಪ್ಪುತ್ತಿದ್ದಾರೆ, ಸಮಯಕ್ಕೆ ಸರಿಯಾಗಿ ಕಚೇರಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ರಸ್ತೆಯಲ್ಲಿ ನಮಾಜ್ ಮಾಡಲು ಕೊಟ್ಟಿರುವ ಅನುಮತಿ ಹಿಂದಕ್ಕೆ ಪಡೆಯುವವರೆಗೆ ನಾವೂ ಎಲ್ಲಾ ದೇವಾಲಯದ ಮುಂದಿನ ರಸ್ತೆಗಳಲ್ಲಿ ಹನುಮಾನ್ ಚಾಲೀಸ್ ಪಠಣ ಮಾಡುತ್ತೇವೆ ಎಂದು ಒ ಪಿ ಸಿಂಗ್ ಹೇಳಿದ್ದಾರೆ.

ಬಿಜೆಪಿ ಮುಖಂಡರ ಈ ವಿನೂತನ ಪ್ರತಿಭಟನೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

English summary
To protest against Namaz in road, BJP recite Hanuman chalis in Howrah road. GT Road is blocked to offer Friday namaz. Patients die,people can't reach office on time.Recitation continues till Friday Namaz like that is offered, O P Singh, BJP leader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X