ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್ಚುತ್ತಿರುವ ಬಿಜೆಪಿ ಪ್ರಾಬಲ್ಯ: ಕಾಂಗ್ರೆಸ್, ಎಡಪಕ್ಷದ ಕಡೆ ಮಮತಾ ಸ್ನೇಹ 'ಹಸ್ತ'

|
Google Oneindia Kannada News

ಕೋಲ್ಕತ್ತಾ, ಜೂನ್ 27: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಈ ರೀತಿಯ ಬೆಳವಣಿಗೆಗಳು ಮುಂದೆ ನಡೆಯಬಹುದು ಎಂದು ಯಾವ ವಿಶ್ಲೇಷಕರೂ, ಧುರೀಣರೂ ಲೆಕ್ಕಹಾಕಿರಲಿಕ್ಕಿಲ್ಲ. ಶತ್ರುವಿನ ಶತ್ರು 'ಮಿತ್ರ' ಎನ್ನುವಂತೆ ಆಡಳಿತಾರೂಢ ಟಿಎಂಸಿ, ರಾಜ್ಯ ರಾಜಕಾರಣದಲ್ಲಿ ಮುನ್ನೆಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾರೂ ನಿರೀಕ್ಷಿಸದಷ್ಟು ಮಟ್ಟಿಗೆ ಬಿಜೆಪಿ ಸೀಟು ಗಳಿಸಿರುವುದು, ದಿನದಿಂದ ದಿನಕ್ಕೆ ಕೇಸರಿ ಪ್ರಭಾವ ಹೆಚ್ಚಾಗುತ್ತಿರುವುದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ನಿದ್ದೆಗೆಡಿಸಿದೆ.

ದೇಶದಲ್ಲಿ ಮಹಾ ತುರ್ತುಪರಿಸ್ಥಿತಿ: ಮಮತಾ ಬ್ಯಾನರ್ಜಿ ಆರೋಪದೇಶದಲ್ಲಿ ಮಹಾ ತುರ್ತುಪರಿಸ್ಥಿತಿ: ಮಮತಾ ಬ್ಯಾನರ್ಜಿ ಆರೋಪ

ಯಾವ ಪಕ್ಷದ ದಶಕಗಳ ಆಡಳಿತ ನಿಲ್ಲಬೇಕೆಂದು ಅಹೋರಾತ್ರಿ ಹೋರಾಟ ನಡೆಸಿ ಅಧಿಕಾರಕ್ಕೆ ಬಂದಿದ್ದ ಮಮತಾ, ಈಗ ಅದೇ ಪಕ್ಷದತ್ತ ಸ್ನೇಹ ಹಸ್ತ ಚಾಚಿದ್ದಾರೆ.

To defeat BJP, Congress and left parties should join hands together: Mamata Banerjee

ಬಿಜೆಪಿ ಪ್ರಭಾವವನ್ನು ತಡೆಗಟ್ಟಬೇಕಾದರೆ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಕೈಜೋಡಿಸಬೇಕೆಂದು ಮಮತಾ ಹೇಳಿರುವುದು, ರಾಜ್ಯದ ಬದಲಾದ ರಾಜಕೀಯ ಸನ್ನಿವೇಶಕ್ಕೆ ಹಿಡಿದ ಕನ್ನಡಿಯಾಗಿದೆ.

ರಸ್ತೆಯಲ್ಲಿ ನಮಾಜ್ ಗೆ ಬಿಜೆಪಿಯ ತಿರುಗೇಟು: ರಸ್ತೆಯಲ್ಲೇ ಹನುಮಾನ್ ಚಾಲೀಸ್ ರಸ್ತೆಯಲ್ಲಿ ನಮಾಜ್ ಗೆ ಬಿಜೆಪಿಯ ತಿರುಗೇಟು: ರಸ್ತೆಯಲ್ಲೇ ಹನುಮಾನ್ ಚಾಲೀಸ್

ದೇಶದ ಸಂವಿಧಾನವನ್ನೇ ಬಿಜೆಪಿ ಬದಲಾಯಿಸಬಹುದು ಎನ್ನುವುದು ನನ್ನ ಆತಂಕ. ಇದಕ್ಕಾಗಿ, ಬಿಜೆಪಿಯನ್ನು ಮುಂದಿನ ದಿನಗಳಲ್ಲಿ ಸೋಲಿಸಲು, ಕಾಂಗ್ರೆಸ್ ಮತ್ತು ಎಡಪಕ್ಷಗಳು ಕೈಜೋಡಿಸುವ ಅನಿವಾರ್ಯತೆಯಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಈ ಆಹ್ವಾನಕ್ಕೆ ಕಾಂಗ್ರೆಸ್ ಮತ್ತು ಸಿಪಿಐ(ಎಂ) ತಿರುಗೇಟು ನೀಡಿದ್ದು, ಮಮತಾ ಬ್ಯಾನರ್ಜಿ ಸಮಯಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ರಾಜಕಾರಣಿ ಎಂದು ಲೇವಡಿ ಮಾಡಿವೆ.

English summary
To defeat BJP, Congress and left parties should join hands together: West Bengal Chief Minister Mamata Banerjee appeal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X