ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀಬ್ ಬ್ಯಾನರ್ಜಿ, ಆಶಿಶ್ ದಾಸ್ ದೀದಿ ಪಕ್ಷಕ್ಕೆ ಸೇರಲು ಮುಹೂರ್ತ ನಿಗದಿ

|
Google Oneindia Kannada News

ಕೋಲ್ಕತ್ತಾ ಅಕ್ಟೋಬರ್ 31: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಶಾಸಕರು ಆಘಾತಕಾರಿ ಸುದ್ದಿ ಕೊಟ್ಟಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಟರ್ನ್‌ಕೋಟ್ ರಾಜೀಬ್ ಬ್ಯಾನರ್ಜಿ ಅವರು ಭಾನುವಾರ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಮರು ಸೇರ್ಪಡೆಗೊಳ್ಳುತ್ತಿದ್ದಾರೆ. ಬಿಜೆಪಿ ಸೇರುವ ಮೂಲಕ ತಾನು ತಪ್ಪು ಮಾಡಿದ್ದೇನೆ ಎಂದು ಹೇಳಿರುವ ರಾಜೀಬ್ ಬ್ಯಾನರ್ಜಿ, "ನನಗೆ ಮತ್ತೆ ಸೇರ್ಪಡೆಗೊಳ್ಳಲು ಅವಕಾಶ ನೀಡಿದ ಅಭಿಷೇಕ್ ಬ್ಯಾನರ್ಜಿ ಮತ್ತು ಮಮತಾ ಬ್ಯಾನರ್ಜಿ ಅವರಿಗೆ ನಾನು ಕೃತಜ್ಞನಾಗಿದ್ದೇನೆ" ಎಂದು ಹೇಳಿದ್ದಾರೆ.

ಟಿಎಂಸಿಗೆ ಮರುಸೇರ್ಪಡೆಯಾದ ನಂತರ ಮಾತನಾಡಿದ ಅವರು, "ಬಿಜೆಪಿ ಸೇರುವ ಮೊದಲು ಉದ್ಯೋಗ ಮತ್ತು ಕೃಷಿಯಲ್ಲಿ ಹಲವಾರು ಭರವಸೆಗಳನ್ನು ನೀಡಲಾಗಿತ್ತು, ಅದು ಸಂಭವಿಸಲಿಲ್ಲ" ಎಂದು ರಾಜೀಬ್ ಬ್ಯಾನರ್ಜಿ ಆರೋಪಿಸಿದ್ದಾರೆ. "ಅವರ ಮುಖ್ಯ ಅಜೆಂಡಾ ಧಾರ್ಮಿಕ ರಾಜಕೀಯವಾಗಿತ್ತು. ನಾನು ಹೊರಡಲು ನಿರ್ಧರಿಸಿದಾಗ ತುಂಬಾ ತಡವಾಗಿತ್ತು" ಎಂದು ರಾಜೀಬ್ ಬ್ಯಾನರ್ಜಿ ಹೇಳಿದರು. "ಪರಿವರ್ತನ್ ಬರುತ್ತಿದೆ. ನಾನು ಜನರಿಗಾಗಿ ಕೆಲಸ ಮಾಡಲು ಬಯಸುತ್ತೇನೆ. ಮಮತಾ ಕೇವಲ ಬಂಗಾಳದ ನಾಯಕಿ ಅಲ್ಲ, ಆದರೆ ದೇಶದ ಇತರ ಭಾಗಗಳ ನಾಯಕಿ ಎಂದು ನಾನು ನಂಬುತ್ತೇನೆ " ತ್ರಿಪುರಾದ ಜನರು ಮಮತಾ ಬ್ಯಾನರ್ಜಿಯಲ್ಲಿ ವಿಶ್ವಾಸವಿಡುವಂತೆ ಒತ್ತಾಯಿಸುವುದಾಗಿ ರಾಜೀಬ್ ಬ್ಯಾನರ್ಜಿ ಹೇಳಿದ್ದಾರೆ.

ತನ್ನ ಗುರಿ ತ್ರಿಪುರ ಎಂದು ಅಭಿಷೇಕ್ ಬ್ಯಾನರ್ಜಿ ಹೇಳಿರುವುದನ್ನು ಉಲ್ಲೇಖಿಸಿದ ರಾಜೀಬ್ ಬ್ಯಾನರ್ಜಿ, "ನಮ್ಮ ಸಂಸ್ಕೃತಿ ಒಂದೇ. ಎರಡು ವರ್ಷಗಳ ಹಿಂದೆಯೇ ಯೋಚಿಸಿದ್ದ ತ್ರಿಪುರಾಕ್ಕೆ ಅಭಿವೃದ್ಧಿ ತಲುಪಬೇಕಿದೆ. ಮುಂದಿನ ದಿನಗಳಲ್ಲಿ ಬಂಗಾಳದ ದೇವಿ ಮಮತಾ ಮತ್ತು ಅಭಿಷೇಕ್ ಬ್ಯಾನರ್ಜಿ ಅವರು ಪ್ರತಿ ರಾಜ್ಯದಲ್ಲೂ ಉನ್ನತ ನಾಯಕರಾಗುತ್ತಾರೆ. ತ್ರಿಪುರಾದ ಜನರು ಕಾಂಗ್ರೆಸ್ ಅಥವಾ ಸಿಪಿಎಂ ಅನ್ನು ನಂಬಬೇಡಿ, ಆದರೆ ಮಮತಾ ಬ್ಯಾನರ್ಜಿ ಅವರ ಮೇಲೆ ನಂಬಿಕೆ ಇಡುವಂತೆ ನಾನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು. "ನಾನು ತ್ರಿಪುರಾದ ಜನರಿಗೆ ಹೇಳುತ್ತೇನೆ, ತಪ್ಪು ಮಾಡಬೇಡಿ. ನನ್ನ ನಂಬಿಕೆಯನ್ನು ಬಿಜೆಪಿ ಕಳೆದುಕೊಂಡಿದೆ, ನಿಮ್ಮ ನಂಬಿಕೆಯನ್ನು ಹಾಳುಮಾಡುತ್ತದೆ. ನಿಮ್ಮ ನಂಬಿಕೆಯನ್ನು ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿಯಲ್ಲಿ ಇರಿಸಿ. ಅವರು ಪಕ್ಷದ ನಾಯಕತ್ವ ವಹಿಸಿರುವ ಯಾವುದೇ ಕೆಲಸವನ್ನು ಕೈಗೊಳ್ಳುವುದಾಗಿ ಮತ್ತು ಜನರಿಗಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ" ಎಂದಿದ್ದಾರೆ. "ಮುಂಬರುವ ಪ್ರತಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಟಿಎಂಸಿ ಗೆಲ್ಲುತ್ತದೆ" ಎಂದು ಭಾನುವಾರ ಪಕ್ಷಕ್ಕೆ ಮರುಸೇರ್ಪಡೆಯಾದ ನಂತರ ರಾಜೀಬ್ ಬ್ಯಾನರ್ಜಿ ಹೇಳಿದರು.

TMC turncoat Rajib Banerjee, Tripura MLA Ashish Das likely to join party today

ಇನ್ನೂ 2023ರಲ್ಲಿ ತ್ರಿಪುರಾದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯ ಮಾಜಿ ಶಾಸಕ ಆಶಿಶ್ ದಾಸ್ ಕೂಡ ಟಿಎಂಸಿ ಸೇರಲಿದ್ದಾರೆ. ಪಕ್ಷದ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಇಬ್ಬರೂ ನಾಯಕರು ಟಿಎಂಸಿಗೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ. ಅವರು ಇಂದು ಅಗರ್ತಲಾದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.

ತ್ರಿಪುರ ಬಿಜೆಪಿ ಶಾಸಕ ಆಶಿಷ್ ದಾಸ್ ಇಂದು ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಈ ತಿಂಗಳ ಆರಂಭದಲ್ಲಿ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರನ್ನು ಟೀಕಿಸಿದ್ದ ದಾಸ್ ಅವರು ಟಿಎಂಸಿಗೆ ಸೇರ್ಪಡೆಗೊಳ್ಳುವ ಮೊದಲು ಪ್ರಾಯಶ್ಚಿತ್ತದ ಕಾರ್ಯವನ್ನು ಮಾಡುತ್ತಿರುವುದಾಗಿ ಹೇಳಿ ತಮ್ಮ ತಲೆ ಬೋಳಿಸಿಕೊಂಡಿದ್ದರು. 'ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಪ್ರಾಯಶ್ಚಿತ್ತವಾಗಿ ನಾನು ಕೇಶಮುಂಡನ ಮಾಡಿಸಿಕೊಳ್ಳುತ್ತಿದ್ದೇನೆ. ನಾನು ಪಕ್ಷವನ್ನು ತ್ಯಜಿಸಲು ಮತ್ತು ಮುಂದಿನ ಹೆಜ್ಜೆ ಇರಿಸಲು ನಿರ್ಧರಿಸಿದ್ದೇನೆ. ತ್ರಿಪುರ ಕಂಡ ಬಿಜೆಪಿ ನೇತೃತ್ವದ ಸರ್ಕಾರದ ಅರಾಜಕತೆ ಹಾಗೂ ದುರಾಡಳಿತವು ನನಗೆ ನೋವನ್ನುಂಟುಮಾಡಿದೆ. ಹೀಗಾಗಿ ಕಳೆದ ಎರಡು ವರ್ಷಗಳಿಂದ ನಾನು ಅವರ ಎಲ್ಲ ತಪ್ಪುಗಳನ್ನು ಟೀಕಿಸುತ್ತಾ ಬಂದಿದ್ದೇನೆ ಮತ್ತು ಪಕ್ಷ ಹಾಗೂ ರಾಜಕೀಯದಾಚೆ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ' ಎಂದು ಹೇಳಿದ್ದಾರೆ.

English summary
Trinamool Congress (TMC) turncoat Rajib Banerjee, who had joined the Bharatiya Janata Party (BJP) ahead of West Bengal Assembly polls, is likely to rejoin the Mamata Banerjee-led party on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X