ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲ್ಕತ್ತಾದಲ್ಲಿ ನಿನ್ನೆ ನಡೆದಿದ್ದೇನು? ವಿಡಿಯೋ ಬಿಡುಗಡೆ ಮಾಡಲಿರುವ ಟಿಎಂಸಿ

|
Google Oneindia Kannada News

ಕೋಲ್ಕತ್ತಾದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ಸಮಯದಲ್ಲಿ ಮಂಗಳವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದನ್ನು ತೃಣಮೂಲ ಕಾಂಗ್ರೆಸ್ ಬಿಡುಗಡೆಮಾಡಲಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಬುಧವಾರ ಮಧ್ಯಾಹ್ನ ದೆಹಲಿಯಲ್ಲಿ ಟಿಎಂಸಿ ಮುಖಂಡರು ಪತ್ರಿಕಾ ಗೋಷ್ಠಿ ನಡೆಸಲಿದ್ದು, ಮಂಗಳವಾರದ ಹಿಂಸಾಚಾರದ ಸಮಯದಲ್ಲಿ ನಿಜವಾಗಿಯೂ ನಡೆದಿದ್ದೇನು, ಈ ಗಲಭೆಗೆ ಕಾರಣ ಯಾರು ಎಂಬ ವಿಡಿಯೋವನ್ನು ಬಿಡುಗಡೆ ಮಾಡಲಿದ್ದಾರೆ.

CRPF ಸಿಬ್ಬಂದಿಯಿಲ್ಲದಿದ್ದರೆ ನಾನು ಬದುಕಿ ಬರುತ್ತಿರಲಿಲ್ಲ: ಅಮಿತ್ ಶಾCRPF ಸಿಬ್ಬಂದಿಯಿಲ್ಲದಿದ್ದರೆ ನಾನು ಬದುಕಿ ಬರುತ್ತಿರಲಿಲ್ಲ: ಅಮಿತ್ ಶಾ

ಘಟನೆಗೆ ಸಂಬಂಧಿಸಿದಂತೆ ಟಿಎಂಸಿ ವಿರುದ್ಧ ಬಿಜೆಪಿ, ಅಮಿತ್ ಶಾ ವಿರುದ್ಧ ಟಿಎಂಸಿ ಈಗಾಗಲೇ ಪರಸ್ಪರ ದೂರು ದಾಖಲಿಸಿವೆ.

TMC to release a video of riots in Amit Shahs road show of in pressmeet in Delhi

ಈ ಕುರಿತಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ದೆಹಲಿಯಲ್ಲಿ ಪತ್ರಿಕಾಗೊಷ್ಠಿ ನಡೆಸಿ, ಈ ಘಟನೆಗೆ ಟಿಎಂಸಿಯೇ ಹೊಣೆ. ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಚುನಾವಣೆಗೆ ಸ್ಪರ್ಧಿಸಿದೆ, ರೋಡ್ ಶೋ ನಡೆಸುತ್ತೇವೆ. ಆದರೆ ಎಲ್ಲಿಯೂ ಇಂಥ ಘಟನೆ ನಡೆಯುವುದಿಲ್ಲ. ಆದರೆ ಪಶ್ಚಿಮ ಬಂಗಾಳದಲ್ಲಿ ಮಾತ್ರ ಏಕೆ? ಕಾನೂನು ಸುವ್ಯವಸ್ಥೆ ಕಾಪಾಡಲಾಗದ ಪಶ್ಚಿಮ ಬಂಗಾಳ ಸರ್ಕಾರದ ನಡೆಯೇ ಇದಕ್ಕೆ ಕಾರಣ ಎಂದು ಅವರು ದೂರಿದರು.

ಮಂಗಳವಾರ ಗಲಭೆ ಸಮಯದಲ್ಲಿ ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ ಅವರ ಪುತ್ಥಳಿಯನ್ನು ಧ್ವಂಸ ಮಾಡಲಾಗಿದ್ದು, ಅನುಕಂಪಕ್ಕಾಗಿ ಟಿಎಂಸಿ ಕಾರ್ಯಕರ್ತರೇ ಈ ಕೆಲಸ ಮಾಡಿದ್ದಾರೆ ಎಂದೂ ಅಮಿತ್ ಶಾ ದೂರಿದ್ದರು.

English summary
Trinmool Congress leaders in Delhi will have a pressmeet and will release a video of Tuesday's violence in Amit Shah's road show.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X