ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

48 ಗಂಟೆಗಳ ಧರಣಿ ಆರಂಭಿಸಿದ ಟಿಎಂಸಿ, ನಾಟಕ ಎಂದ ಬಿಜೆಪಿ

|
Google Oneindia Kannada News

ಕೋಲ್ಕತ್ತಾ, ಮಾರ್ಚ್ 15: ಪಶ್ಚಿಮ ಬಂಗಾಳದ ಎಲ್ಲಾ ಮತಗಟ್ಟೆಗಳನ್ನೂ ಅತೀ ಸೂಕ್ಷ್ಮ ಮತಗಟ್ಟೆ ಎಂದು ಘೋಷಿಸಿರುವ ಚುನಾವಣಾ ಆಯೋಗದ ಕ್ರಮದ ವಿರುದ್ಧ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ) ಮಾ.15 ರ ಸಂಜೆಯಿಂದ 48 ಗಂಟೆಗಳ ಧರಣಿ ನಡೆಸಲು ಮುಂದಾಗಿದೆ.

ಮಮತಾಗೆ ಭಾರಿ ಆಘಾತ: ಬಿಜೆಪಿ ಸೇರಿದ ಟಿಎಂಸಿ ಪ್ರಭಾವಿ ಮುಖಂಡಮಮತಾಗೆ ಭಾರಿ ಆಘಾತ: ಬಿಜೆಪಿ ಸೇರಿದ ಟಿಎಂಸಿ ಪ್ರಭಾವಿ ಮುಖಂಡ

ಚುನಾವಣಾ ಆಯೋಗವನ್ನು ಮುಂದಿಟ್ಟುಕೊಂಡು ಬಿಜೆಪಿ ಆಟವಾಡುತ್ತಿದೆ. ಪಶ್ಚಿಮಬಂಗಾಳದಲ್ಲಿ ಠೇವಣಿಯೇ ಇಲ್ಲದಿದ್ದರು ಬಿಜೆಪಿ ಇಲ್ಲಿನ ಆಡಳಿತದಲ್ಲಿ ತಲೆ ಹಾಕುತ್ತಿದೆ. ಎಲ್ಲಾ ಮತಗಟ್ಟೆಗಳನ್ನೂ ಅತೀ ಸೂಕ್ಷ್ಮ ಎಂದು ಘೋಷಿಸುವ ಮೂಲಕ ದೇಶದ ಜನರಲ್ಲಿ ಪಶ್ಚಿಮ ಬಂಗಾಳದ ಬಗ್ಗೆ ಕೆಟ್ಟ ಭಾವನೆ ಸೃಷ್ಟಿಯಾಗುವಂತೆ ಮಾಡುತ್ತಿದೆ ಎಂದು ಟಿಎಂಸಿ ನಾಯಕರು ದೂರಿದ್ದಾರೆ.

ಮಮತಾ ಬ್ಯಾನರ್ಜಿ ಹೆಸರು ಬರೆದು ನಿವೃತ್ತ ಐಪಿಎಸ್ ಅಧಿಕಾರಿ ಆತ್ಮಹತ್ಯೆ ಮಮತಾ ಬ್ಯಾನರ್ಜಿ ಹೆಸರು ಬರೆದು ನಿವೃತ್ತ ಐಪಿಎಸ್ ಅಧಿಕಾರಿ ಆತ್ಮಹತ್ಯೆ

"ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಇಲ್ಲಿ ಎಲ್ಲವೂ ಸುಸೂತ್ರವಾಗಿಯೇ ನಡೆಯುತ್ತಿದೆ. ಆದರೆ ಬಿಜೆಪಿ ಈ ರಾಜ್ಯದ ಎಲ್ಲಾ ಮತಗಟ್ಟೆಗಳನ್ನೂ ಅತೀ ಸೂಕ್ಷ್ಮ ಎಂದು ಘೋಷಿಸುವಂತೆ ತಾನೇ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ. ಈ ಮೂಲಕ ಕೇಂದ್ರ ಭದ್ರತಾ ಪಡೆಗಳನ್ನು ಬಳಸಿಕೊಂಡು ಚುನಾವನೆ ಗೆಲ್ಲುವ ಹುನ್ನಾರ ನಡೆಸುತ್ತಿದೆ" ಎಂದು ಟಿಎಂಸಿ ಆರೋಪಿಸಿದೆ.

TMC starts 48 hour dharna, BJP calls it a Drama

"ನಾವು ಪಶ್ಚಿಮ ಬಂಗಾಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಚುನಾವನೆ ನಡೆಸುವ ಉದ್ದೇಶದಿಂದ ಎಲ್ಲಾ ಮತಗಟ್ಟೆಗಳನ್ನೂ ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಘೋಷಿಸಿದ್ದೇವೆ. ಪಂಚಾಯತ್ ಮಟ್ಟದ ಚುನಾವಣೆಯಲ್ಲೇ ಪಶ್ಚಿಮ ಬಂಗಾಳದಲ್ಲಿ ನಾಲ್ಕಾರು ಸಾವಿನ ಘಟನೆಗಳು ನಡೆದಿಲ್ಲವೇ? ನಮಗೆ ಶಾಂತಿಯುತ ಚುನಾವಣೆ ಮುಖ್ಯ. ಟಿಎಂಸಿಯ ಧರಣೆ ಒಂದು ಕಪಟ ನಾಟಕ" ಎಂದು ಬಿಜೆಪಿ ಸಮಜಾಯಿಷಿ ನೀಡಿದೆ.

English summary
In west Bengal the ruling Trinamool Congress Friday began its 48-hour-long sit-in against the BJP's alleged attempt to malign West Bengal by urging the ECI to declare all booths in the state as "super sensitive".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X