ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳ: ಒಂದೇ ದಿನ ಉಳಿದ 3 ಹಂತಗಳ ಚುನಾವಣೆ ನಡೆಸಲು ಟಿಎಂಸಿ ಒತ್ತಾಯ

|
Google Oneindia Kannada News

ಕೋಲ್ಕತ್ತಾ, ಏಪ್ರಿಲ್ 21: ಪಶ್ಚಿಮ ಬಂಗಾಳದಲ್ಲಿ ಬಾಕಿ ಉಳಿದಿರುವ 3 ಹಂತಗಳ ಚುನಾವಣೆಯನ್ನೂ ಒಂದೇ ದಿನ ನಡೆಸುವಂತೆ ಟಿಎಂಸಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ಮೂರು ಹಂತಗಳ ಚುನಾವಣೆಯನ್ನು ಒಂದೇ ದಿನ ನಡೆಸಿ ಎಂದು ಕೇಳಿದೆ.ಒಟ್ಟು 8 ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಐದು ಹಂತಗಳು ಮುಗಿದಿದೆ, ಇನ್ನೂ ಮೂರು ಹಂತದ ಚುನಾವಣೆಗಳು ಬಾಕಿ ಇವೆ.

ಪಶ್ಚಿಮ ಬಂಗಾಳದಲ್ಲಿ ದೊಡ್ಡ ಚುನಾವಣಾ ಸಮಾವೇಶ ನಡೆಸುವುದಿಲ್ಲವೆಂದ ಬಿಜೆಪಿಪಶ್ಚಿಮ ಬಂಗಾಳದಲ್ಲಿ ದೊಡ್ಡ ಚುನಾವಣಾ ಸಮಾವೇಶ ನಡೆಸುವುದಿಲ್ಲವೆಂದ ಬಿಜೆಪಿ

ಟಿಎಂಸಿಯ ಓಬ್ರಿಯೆನ್, ಸುಖೇಂದು ಶೇಖರ್ ರಾಯ್, ಪ್ರತಿಮಾ ಮಂಡಲ್, ಪೂರ್ಣೇಂದು ಬಸು ಚುನಾವಣಾ ಆಯುಕ್ತರ ಕಚೇರಿಗೆ ತೆರಳಿ ಪತ್ರ ನೀಡಿದ್ದಾರೆ. ಪಕ್ಷ ಹಾಗೂ ಅಭ್ಯರ್ಥಿಗಳು 52 ದಿನಗಳ ಕಾಲ ಚುನಾವಣಾ ಪ್ರಚಾರ ನಡೆಸಿದ್ದಾರೆ, ಹಾಗಾಗಿ ಒಂದೇ ದಿನ ಚುನಾವಣೆ ನಡೆಸುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದಿದ್ದಾರೆ.

 TMC Repeats Demands For Clubbing Last 3 Phases Of West Bengal Elections

ಆದರೆ ಬಿಜೆಪಿಯು ಈ ಕುರಿತು ತಮ್ಮ ನಿಲುವು ಹೇಳಿದ್ದು, ಯಾವುದೇ ಕಾರಣಕ್ಕೂ ಚುನಾವಣಾ ದಿನಾಂಕವನ್ನು ಬದಲಿಸುವುದು ಬೇಡ, ಈಗಾಗಲೇ ನಿರ್ಧರಿತವಾಗಿರುವಂತೆಯೇ ಚುನಾವಣೆ ನಡೆಯಲಿ ಎಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಉಳಿದ ಮೂರು ಹಂತಗಳಿಗೆ ಏಪ್ರಿಲ್ 22, ಏಪ್ರಿಲ್ 26, ಏಪ್ರಿಲ್ 29ರಂದು ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಮಂಗಳವಾರ ಹೊಸದಾಗಿ 10 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 46 ಮಂದಿ ಸಾವನ್ನಪ್ಪಿದ್ದಾರೆ.

English summary
As Covid-19 cases across the country surge, the All India Trinamool Congress (TMC) on Monday appealed to the Election Commission (EC) to club the remaining three phases of polling in the West Bengal election and conduct it on a single day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X