ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಯೇ ಮಾನ್ಯವಲ್ಲ ಎಂದ ಮೇಲೆ ವಿಚ್ಛೇದನ ಪ್ರಶ್ನೆ ಉದ್ಭವಿಸುವುದೇ ಇಲ್ಲ: ಟಿಎಂಸಿ ಸಂಸದೆ ನುಸ್ರತ್

|
Google Oneindia Kannada News

ತನ್ನ ಪ್ರೆಗ್ನೆನ್ಸಿ ಹಾಗೂ ಗಂಡನ ವಿವಾದಾತ್ಮಕ ಹೇಳಿಕೆ ಬಳಿಕ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಈ ವಿಚಾರವಾಗಿ ಮಾತನಾಡುತ್ತಾ 'ವಿದೇಶದಲ್ಲಿ ನೆಲೆಸಿದ್ದ ಕಾರಣ ಹಾಗೂ ಟರ್ಕಿ ಮ್ಯಾರೇಜ್ ರೆಗ್ಯುಲೇಷನ್ ಅನ್ವಯ ಈ ಮದುವೆ ಮಾನ್ಯವಲ್ಲ' ಎಂದಿದ್ದಾರೆ.

'ಅಲ್ಲದೇ ಇದೊಂದು ಅಪೂರ್ಣ ಮದುವೆ, ಹೀಗಾಗಿ ಇದಕ್ಕೆ ಶಾಸನಬದ್ಧ ಮಾನ್ಯತೆ ನೀಡಬೇಕಾದ ಅಗತ್ಯವಿತ್ತು ಆದರೆ ಹಾಗಾಗಲಿಲ್ಲ' ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ನುಸ್ರತ್ ತಾಯಿಯಾಗುತ್ತಿದ್ದಾರೆ ಎನ್ನುವ ವಿಚಾರ ಎಲ್ಲೆಡೆ ಹರಿದಾಡಿತ್ತು, ಆದರೆ ನುಸ್ರತ್ ಈ ಕುರಿತು ಯಾವುದೇ ಮಾತನಾಡಿರಲಿಲ್ಲ, ಆದರೆ ನುಸ್ರತ್ ಪತಿ ಮಾತ್ರ ಈ ಮಗು ನನ್ನದಲ್ಲ ಎಂದು ಹೇಳಿದ್ದು ಅಚ್ಚರಿಗೆ ಕಾರಣವಾಗಿತ್ತು.

TMC MP Nusrat Jahan Makes SHOCKING Revelations About Her Marriage With Nikhil Jain

ನುಸ್ರತ್ ಅವರ ಪ್ರಕಾರ 'ಕಾನೂನಾತ್ಮಕವಾಗಿ ಈ ಮದುವೆ ಮಾನ್ಯವಲ್ಲ, ಇದನ್ನು ಕೇವಲ ರಿಲೇಷನ್‌ಶಿಪ್ ಅಥವಾ ಲಿವ್ ಇನ್ ರಿಲೇಷನ್‌ಶಿಪ್ ಎನ್ನಬಹುದು. ಹೀಗಾಗಿ ವಿಚ್ಛೇದನ ಪ್ರಶ್ನೆಯೇ ಉದ್ಭವಿಸುವಿಲ್ಲ, ನಾವು ತುಂಬಾ ಸಮಯದ ಹಿಂದೆಯೇ ಬೇರೆಯಾಗಿದ್ದೇವೆ, ಆದರೆ ನಾನು ಈ ಬಗ್ಗೆ ಎಲ್ಲೂ ಮಾತನಾಡಿರಲಿಲ್ಲ'. ಯಾಕೆಂದರೆ ನಾನು ನನ್ನ ವೈಯಕ್ತಿಕ ಜೀವನದ ಬಗ್ಗೆ ಇತರರೊಂದಿಗೆ ಹೇಳಿಕೊಳ್ಳುವುದಿಲ್ಲ, ನಮ್ಮ ಮದುವೆ ಕಾನೂನು ಪ್ರಕಾರ ಮಾನ್ಯವಲ್ಲ ಎಂದು ಹೇಳಿದ್ದಾರೆ.

ಅತ್ತ ನುಸ್ರತ್ ಹಾಗೂ ನಿಖಿಲ್ ಮಧ್ಯೆ ಮನಸ್ಥಾಪವಿದೆ, ಹೀಗಿರುವಾಗ ನಿಖಿಲ್ ನುಸ್ರತ್ ವಿರುದ್ಧ ದೂರು ದಾಖಲಿಸಿದ್ದಾರೆ, ನುಸ್ರತ್‌ ನನ್ನ ಜೊತೆಗಲ್ಲ ಬೇರೆಯವರೊಂದಿಗೆ ಇರಲು ಇಷ್ಟಪಡುತ್ತಾಳೆ ಎಂದು ಹೇಳಿದ್ದಾರೆ.

ನುಸ್ರತ್ 2020ರ ಡಿಸೆಂಬರ್‌ನಲ್ಲಿ ಮನೆಬಿಟ್ಟು ಹೋಗಿದ್ದಾರೆ, ಅವರೀಗ ತನ್ನ ತಂದೆ ತಾಯಿ ಜತೆ ಬಾಲೀಗಂಜ್‌ನಲ್ಲಿರುವ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಅಂದಿನಿಂದ ನಾವಿಬ್ಬರೂ ಭೇಟಿಯಾಗಿಲ್ಲ. ಹೀಗಿರುವಾಗ ಆ ಮಗು ನನ್ನದು ಹೇಗಾಗುತ್ತದೆ ಎಂದು ನಿಖಿಲ್ ಪ್ರಶ್ನೆ ಮಾಡಿದ್ದಾರೆ.

ನುಸ್ರತ್ ಮದುವೆ ಬಗ್ಗೆ ವಿವರ: ನುಸ್ರತ್ ಜಹಾನ್, ಬೋಡ್ರಮ್ ಟೌನ್‌ನ ಉದ್ಯಮಿ ನಿಖಿಲ್ ಜೈನ್ ಜೊತೆ 2019ರ ಜೂನ್ 19ರಂದು ಮದುವೆಯಾಗಿದ್ದರು. ಇಬ್ಬರೂ ಹಿಂದೂ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಈ ಮೂರೂ ಸಂಪ್ರದಾಯದಂತೆ ಮದುವೆಯಾಗಿದ್ದರು. ಅವರ ಗಂಡ ನಿಖಿಲ್ ಜೈನ್ ಕೋಲ್ಕತ್ತಾದ ಪ್ರಸಿದ್ಧ ಜವಳಿ ಉದ್ಯಮಿಯಾಗಿದ್ದಾರೆ.

ನುಸ್ರತ್ ರಾಯಕೀಯ ಜೀವನ: ಬಂಗಾಳಿ ನಟಿಯಾಗಿರುವ ನುಸ್ರತ್ ಜಹಾನ್ 2019ರ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿ ಪಕ್ಷದ ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಬಂಗಾಳದ ಬಶೀರ್‌ಹಾಟ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ನುಸ್ರತ್ ಸುಮಾರು 3.3 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

English summary
In a shocking development, Trinamool MP Nusrat Jahan on Wednesday (June 9) said that her marriage with businessman Nikhil Jain was never valid hence there is no question of a divorce. Issuing a statement, the actor-turned-politician said that an interfaith marriage in India requires validation under the Special Marriage Act, which never happened in her case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X