ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುರ್ಗಾ ಮಾತೆ ಪೂಜಿಸಿದ ಸಂಸದೆ ನುಸ್ರತ್ ಜಹಾನ್ ವಿರುದ್ಧ ಮೌಲ್ವಿ ಕಿಡಿ

|
Google Oneindia Kannada News

ಕೋಲ್ಕತ್ತಾ, ಅಕ್ಟೋಬರ್ 08: ತೃಣಮೂಲ ಕಾಂಗ್ರೆಸ್​ ಸಂಸದೆ, ನಟಿ ನುಸ್ರತ್​ ಜಹಾನ್ ವಿರುದ್ಧ ಮತ್ತೊಮ್ಮೆ ಇಸ್ಲಾಂ ಧಾರ್ಮಿಕ ಗುರುಗಳು ಕಿಡಿಕಾರಿದ್ದಾರೆ. 'ನುಸ್ರತ್ ಅವರು ಇಸ್ಲಾಂ ಧರ್ಮಕ್ಕೆ ಅಪಮಾನ ಎಸಗುತ್ತಿದ್ದಾರೆ. ಅವರು ತಮ್ಮ ಹೆಸರು, ಧರ್ಮ ಸಂಪೂರ್ಣ ಬದಲಾಯಿಸಿಕೊಳ್ಳಲಿ' ಎಂದಿದ್ದಾರೆ.

'ಎಲ್ಲರನ್ನೂ ಒಳಗೊಂಡ ಭಾರತ'ಎಲ್ಲರನ್ನೂ ಒಳಗೊಂಡ ಭಾರತ"ದ ಪ್ರತಿನಿಧಿ' ಎಂದ ಸಂಸದೆ ನುಸ್ರತ್ ಜಹಾನ್

ಉದ್ಯಮಿ ನಿಖಿಲ್​ ಜೈನ್​ ವರಿಸಿದ ಬಳಿಕ ನುಸ್ರತ್​ ಜಹಾನ್​ ಅವರು ಹಿಂದೂ ಧಾರ್ಮಿಕ ಆಚರಣೆ, ಪೂಜೆ ಪುನಸ್ಕಾರಗಳಲ್ಲಿ ತೊಡಗಿಕೊಂಡಾಗಲೆಲ್ಲ ಅವರ ವಿರುದ್ಧ ಭಾರಿ ಟೀಕೆಗಳು ಕೇಳಿಬರುತ್ತಿವೆ. ಸಂಸದರಾದ ಬಳಿಕ ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿಹಣೆಗೆ ಸಿಂಧೂರ ಇಟ್ಟುಕೊಂಡು ಬಂದಿದ್ದರು ಎಂದು ಟೀಕಿಸಲಾಗಿತ್ತು.

TMC MP Nusrat Jahan criticized by Muslim cleric for celebrating Durga puja

ಸಾಂಪ್ರದಾಯಿಕ​ ಸೀರೆಯನ್ನುಟ್ಟು, ಹಣೆಗೆ ಸಿಂಧೂರ ಹಾಗೂ ಮಂಗಳಸೂತ್ರವನ್ನು ಹಾಕಿಕೊಂಡು ಹಬ್ಬದ ಸಂಭ್ರಮದಲ್ಲಿದ್ದ ನುಸ್ರತ್ ಕಂಡು ಮುಸ್ಲಿಂ ಮೌಲ್ವಿಗಳ ಕೆಂಗಣ್ಣು ಬೀರಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆ ಪತಿ ಜೊತೆಗೂಡಿ ಪೂಜೆ ಸಲ್ಲಿಸಿದ್ದರು. 'ಈ ರೀತಿ ಕಾಣಿಸಿಕೊಂಡು ಇಸ್ಲಾಂ ಧರ್ಮವನ್ನು ಅವಮಾನಿಸುವ ಬದಲು ಹೆಸರನ್ನು ಬದಲಾಯಿಸಿಕೊಳ್ಳಿ' ಎಂದು ಮೌಲ್ವಿ ಮುಫ್ತಿ ಅಸಾದ್​ ಕಾಸ್ಮಿ ಟೀಕಿಸಿದ್ದಾರೆ.

"ಅಲ್ಲಾಹು ಹೊರತುಪಡಿಸಿ ಇತರೆ ದೇವರುಗಳನ್ನು ಪೂಜಿಸಲು ಇಸ್ಲಾಂ ಧರ್ಮದಲ್ಲಿ ಅನುಮತಿ ನೀಡಿಲ್ಲ. ಆದರೆ, ನುಸ್ರತ್​ ದುರ್ಗಾ ಪೂಜೆಯನ್ನು ನೆರವೇರಿಸಿದ್ದಾರೆ. ಇದು ಸಂಪೂರ್ಣವಾಗಿ ಇಸ್ಲಾಂ ವಿರೋಧಿಯಾಗಿದೆ. ಅವರು ಇಸ್ಲಾಂ ಅನ್ನು ಅನುಸರಿಸುತ್ತಿಲ್ಲ. ಇದಲ್ಲದೆ, ಮುಸ್ಲಿಮೇತರ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಹೀಗಾಗಿ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲಿ, ಅದನ್ನು ಬಿಟ್ಟಿ ಇಸ್ಲಾಂಗೆ ಅಪಮಾನ ಮಾಡುವುದು ಸರಿಯೇ?" ಎಂದು ಮುಫ್ತಿ ಅಸಾದ್​ ಕಾಸ್ಮಿ ಪ್ರಶ್ನಿಸಿದ್ದಾರೆ.

View this post on Instagram

Guess Who? #asur #asurfilter #durgapuja2019

A post shared by Nusrat (@nusratchirps) on

"ಎಲ್ಲ ಧರ್ಮದ ಸೌಹಾರ್ದತೆ ಸಾರಲು ನನ್ನದೇ ಆದ ದಾರಿಯಲ್ಲಿ ನಾನು ಹೋಗುತ್ತಿದ್ದೇನೆ. ನಾನು ಮಾಡುತ್ತಿರುವ ಸರಿಯೆಂದು ನನಗನಿಸುತ್ತಿದೆ. ನಾವು ಎಲ್ಲ ಧರ್ಮದ ಹಬ್ಬಗಳನ್ನು ಆಚರಿಸಬೇಕು" ಎಂದು ಬಷಿರಾತ್ ಸಂಸದೆ ನುಸ್ರತ್ ಸಮರ್ಥಿಸಿಕೊಂಡಿದ್ದಾರೆ.

English summary
The actress-turned-TMC (MP) Lok Sabha member Nusrat Jahan once again coated herself into controversy for attending Durga puja celebrations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X