ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟ ಮಮತಾ ಬ್ಯಾನರ್ಜಿ: ಬಿಜೆಪಿ ಪಲ್ಟಿ!

|
Google Oneindia Kannada News

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ, ರಾಜಕೀಯದ ದಾಳವನ್ನು ಹೇಗೇಗೆ ಬಳಸಿಕೊಳ್ಲಬಹುದು ಎಂದು ಮೋದಿ ಮತ್ತು ಅಮಿತ್ ಶಾ ತೋರಿಸಿಕೊಟ್ಟಿದ್ದೇ ಹೆಚ್ಚು.

ಕಳೆದ ಆರೇಳು ವರ್ಷಗಳಲ್ಲಿ ಅಮಿತ್ ಶಾ ತಂತ್ರಗಾರಿಕೆ ವರ್ಕೌಟ್ ಆಗದೇ ಇದ್ದ ಉದಾಹರಣೆಗಳು ಕಮ್ಮಿ. ಹೋದಲೆಲ್ಲಾ ಜಯಭೇರಿ ಬಾರಿಸುತ್ತಿರುವ ಬಿಜೆಪಿಗೆ ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಹಿನ್ನಡೆಯಾಗುತ್ತಿದೆ.

ಕೋಲ್ಕತ್ತಾ ಹೈಕೋರ್ಟ್‌ನಿಂದ ಬಿಜೆಪಿಯ ಸುವೇಂದು ಅಧಿಕಾರಿಗೆ ನೋಟಿಸ್ಕೋಲ್ಕತ್ತಾ ಹೈಕೋರ್ಟ್‌ನಿಂದ ಬಿಜೆಪಿಯ ಸುವೇಂದು ಅಧಿಕಾರಿಗೆ ನೋಟಿಸ್

ಅದರಲ್ಲಿ, ಮಹಾರಾಷ್ಟ್ರದಲ್ಲಿ ಸರಕಾರ ರಚಿಸುವಲ್ಲಿ ಎಡವಿದ್ದು ಒಂದಾದರೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನಾಗಾಲೋಟ ನಿಲ್ಲಿಸಲು ಸಾಧ್ಯವಾಗದೇ ಇದ್ದದ್ದು, ಬಿಜೆಪಿಗಾದ ಭಾರೀ ಹಿನ್ನಡೆ ಎಂದು ವ್ಯಾಖ್ಯಾನಿಸಬಹುದು.

 ಕೇಂದ್ರದ ಸಂಪುಟ ಪುನಾರಚನೆ ಬಗ್ಗೆ ಮಮತಾ ಬ್ಯಾನರ್ಜಿ ಪ್ರಶ್ನೆ ಕೇಂದ್ರದ ಸಂಪುಟ ಪುನಾರಚನೆ ಬಗ್ಗೆ ಮಮತಾ ಬ್ಯಾನರ್ಜಿ ಪ್ರಶ್ನೆ

ಬಂಗಾಳದಲ್ಲಿ ಸರಕಾರ ರಚಿಸಲು ಸಾಧ್ಯವಾಗದೇ ಇದ್ದದ್ದು ಒಂದೆಡೆಯಾದರೆ, ಅಲ್ಲಿ ನಡೆಯುತ್ತಿರುವ ಘರ್ ವಾಪ್ಸಿ ಬಿಜೆಪಿಗೆ ಮುಜುಗರವನ್ನು ತಂದೊಡ್ಡುತ್ತಿದೆ. ಬಿಜೆಪಿ ಚಾಪೆಯೊಳಗೆ ನುಸುಳಿಸಿದರೆ, ಮಮತಾ ಬ್ಯಾನರ್ಜಿ ರಂಗೋಲಿಯೊಳಗೆ ನುಗ್ಗಿದ ಒಂದು ಉದಾಹರಣೆ ಹೀಗಿದೆ:

 ಮಮತಾ ಬ್ಯಾನರ್ಜಿಯವರ ಪರಮಾಪ್ತ ವಲಯದ ಮುಕುಲ್ ರಾಯ್

ಮಮತಾ ಬ್ಯಾನರ್ಜಿಯವರ ಪರಮಾಪ್ತ ವಲಯದ ಮುಕುಲ್ ರಾಯ್

ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯವರ ಅತ್ಯಂತ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮುಕುಲ್ ರಾಯ್, ಸುವೇಂದು ಅಧಿಕಾರಿ, ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಸೇರಿದ್ದರು. ಆದರೆ, ಟಿಎಂಸಿ ಜಯಭೇರಿ ಬಾರಿಸುತ್ತಿದ್ದಂತೆಯೇ ಪಕ್ಷ ಬಿಟ್ಟವರು ವಾಪಸ್ ಟಿಎಂಸಿ ಸೇರಲು ಮುಗಿಬಿದ್ದಿದ್ದರು. ಅದರಲ್ಲಿ, ಮುಕುಲ್ ರಾಯ್ ಕೂಡಾ ಒಬ್ಬರು. ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಇವರು ಟಿಎಂಸಿ ಸೇರಿದ್ದು, ಬಿಜೆಪಿಗೆ ತೀರಾ ಇರಿಸುಮುರಿಸು ಉಂಟು ಮಾಡಿತ್ತು.

 ಮಮತಾ ವಿರುದ್ದ ವೈಯಕ್ತಿಕ ದಾಳಿ ನಡೆಸದ ಮುಕುಲ್ ರಾಯ್

ಮಮತಾ ವಿರುದ್ದ ವೈಯಕ್ತಿಕ ದಾಳಿ ನಡೆಸದ ಮುಕುಲ್ ರಾಯ್

ಚುನಾವಣಾ ಪ್ರಚಾರದ ವೇಳೆ, ಸಿಎಂ ಮಮತಾ ವಿರುದ್ದ ವೈಯಕ್ತಿಕ ದಾಳಿ ನಡೆಸದೇ ಇದ್ದಿದ್ದರಿಂದ ಮುಕುಲ್ ರಾಯ್ ಮತ್ತವರ ಪುತ್ರನನ್ನು ಯಾವುದೇ ಕಂಡೀಷನ್ ಹಾಕದೇ ಮಮತಾ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಇವರು ತೋರಿದ್ದ ಸ್ವಾಮಿ ನಿಷ್ಠೆಗೆ ಬಹುಮಾನವಾಗಿ ಮುಕುಲ್ ರಾಯ್ ಅವರನ್ನು ಈಗ ಪಿಎಸಿಯ (ಪಬ್ಲಿಕ್ ಅಕೌಂಟ್ಸ್ ಕಮಿಟಿ) ಅಧ್ಯಕ್ಷರನ್ನಾಗಿ ಮಮತಾ ಘೋಷಿಸಿದ್ದಾರೆ.

 ಪಿಎಸಿ ಹುದ್ದೆಯನ್ನು ಪ್ರಮುಖ ವಿರೋಧ ಪಕ್ಷಕ್ಕೆ ನೀಡುವ ಪದ್ದತಿ

ಪಿಎಸಿ ಹುದ್ದೆಯನ್ನು ಪ್ರಮುಖ ವಿರೋಧ ಪಕ್ಷಕ್ಕೆ ನೀಡುವ ಪದ್ದತಿ

ಸಾಮಾನ್ಯವಾಗಿ ದೇಶದ ಯಾವುದೇ ರಾಜ್ಯದಲ್ಲಿ ಪಿಎಸಿ ಹುದ್ದೆಯನ್ನು ಪ್ರಮುಖ ವಿರೋಧ ಪಕ್ಷಕ್ಕೆ ನೀಡುವ ಪದ್ದತಿಯಿದೆ. ಹಾಗಾದರೆ, ಇಲ್ಲಿ ಮಮತಾ ಬ್ಯಾನರ್ಜಿ ಈ ಶಿಷ್ಟಾಚಾರವನ್ನು ಮರೆತರಾ ಎನ್ನುವ ಪ್ರಶ್ನೆ ಎದುರಾದಾಗ ಇಲ್ಲ ಎನ್ನುವ ಉತ್ತರ ಬರುತ್ತದೆ. ಯಾಕೆಂದರೆ, ಇಲ್ಲಿ ಮಮತಾ ಅವರು ಬಿಜೆಪಿಗೆ ಸರಿಯಾದ ತಿರುಗೇಟನ್ನು ನೀಡಿದ್ದಾರೆ.

Recommended Video

ಪ್ರತಿಯೊಬ್ಬರಿಗೂ ಕೈಲಾದ ಸಹಾಯ ಮಾಡುತ್ತಿರುವ ಬಿಜೆಪಿ ಶಾಸಕ | Renukacharya | Oneindia Kannada
 ಮಮತಾ ಪ್ರೊಟೊಕಾಲ್ ಅನ್ನು ಬದಿಗೆ ತಳ್ಳದೇ, ಚಾಣಾಕ್ಷ ರಾಜಕೀಯ

ಮಮತಾ ಪ್ರೊಟೊಕಾಲ್ ಅನ್ನು ಬದಿಗೆ ತಳ್ಳದೇ, ಚಾಣಾಕ್ಷ ರಾಜಕೀಯ

ಮುಕುಲ್ ರಾಯ್ ಅವರು ಟಿಎಂಸಿಗೆ ಸೇರ್ಪಡೆಗೊಂಡಿದ್ದರೂ, ಅಧಿಕೃತ ದಾಖಲೆಯ ಪ್ರಕಾರ ಅವರಿನ್ನೂ ಬಿಜೆಪಿಯಲ್ಲೇ ಇದ್ದಾರೆ. ಬಿಜೆಪಿಯಿಂದ ಶಾಸಕರಾಗಿ ಮುಕುಲ್ ರಾಯ್ ಆಯ್ಕೆಯಾಗಿದ್ದರೂ, ಆ ಸ್ಥಾನಕ್ಕೆ ಇನ್ನೂ ಅವರು ರಾಜೀನಾಮೆ ನೀಡಿಲ್ಲ. ಹಾಗಾಗಿ, ಸಾಂವಿಧಾನಿಕವಾಗಿ ನೋಡುವುದಾದರೆ, ಮಮತಾ ಪ್ರೊಟೊಕಾಲ್ ಅನ್ನು ಬದಿಗೆ ತಳ್ಳದೇ, ಚಾಣಾಕ್ಷ ರಾಜಕೀಯವನ್ನು ಬಿಜೆಪಿಗೆ ತೋರಿಸಿಕೊಟ್ಟಿದ್ದಾರೆಂದು ವ್ಯಾಖ್ಯಾನಿಸಲಾಗುತ್ತಿದೆ. ಮಮತಾ ನಿರ್ಧಾರದ ವಿರುದ್ದ ಬಿಜೆಪಿಯವರು ತಿರುಗಿ ಬಿದ್ದಿದ್ದಾರೆ, ಎಂಟು ಬಿಜೆಪಿ ಶಾಸಕರು ರಾಜೀನಾಮೆ ನೀಡಿದ್ದಾರೆ.

English summary
TMC Leader Mukul Roy Appointed As PAC Head In West Bengal, Set back To BJP. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X