ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಂತ ಮಗಳನ್ನು ಬಂಗಾಳ ಬಯಸುತ್ತದೆ; ತೃಣಮೂಲ ಕಾಂಗ್ರೆಸ್‌ ಹೊಸ ಘೋಷಣೆ

|
Google Oneindia Kannada News

ಕೋಲ್ಕತ್ತಾ, ಫೆಬ್ರವರಿ 20: ಇದೇ ಏಪ್ರಿಲ್- ಮೇ ತಿಂಗಳಿನಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2021 ನಡೆಯಲಿದ್ದು, ರಾಜ್ಯದಲ್ಲಿ ಬಿಜೆಪಿ-ತೃಣಮೂಲ ಕಾಂಗ್ರೆಸ್ ಚುನಾವಣಾ ಪ್ರಚಾರ ಕಾರ್ಯ ಬಿರುಸಾಗಿ ಸಾಗಿದೆ.

ಮುಂಬರುವ ಚುನಾವಣೆಗೆ ಶನಿವಾರ ಟಿಎಂಸಿ ಪಕ್ಷ ಚುನಾವಣಾ ಘೋಷಣೆ ಬಿಡುಗಡೆ ಮಾಡಿದೆ. "ಸ್ವಂತ ಮಗಳನ್ನು ಬಂಗಾಳ ಬಯಸುತ್ತದೆ" ಎಂಬ ಘೋಷಣೆಯೊಂದಿಗೆ ಚುನಾವಣಾ ಪ್ರಚಾರ ಕೈಗೊಳ್ಳಲಾಗುತ್ತಿದೆ. ಹೊರಗಿನವರು ಹಾಗೂ ಒಳಗಿನವರು ಎಂಬ ವಾದದೊಂದಿಗೇ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಪರ ಪ್ರಚಾರ ಕಾರ್ಯ ಕೈಗೊಂಡಿದ್ದರು. ಬಿಜೆಪಿಯನ್ನು ಹೊರಗಿನವರು ಎಂದು ಪ್ರತಿ ಬಾರಿಯೂ ಕರೆದಿದ್ದರು. ಹೊರಗಿನವರಿಗೆ ಬಂಗಾಳದಲ್ಲಿ ಅಧಿಕಾರ ಪಡೆಯಲು ಬಿಡುವುದಿಲ್ಲ ಎಂದು ಸವಾಲು ಕೂಡ ಹಾಕಿದ್ದರು.

 ಪಶ್ಚಿಮ ಬಂಗಾಳ ಚುನಾವಣೆ; ಗೆಲುವಿಗೆ ಬಿಜೆಪಿ ಹೊಸ ಕಾರ್ಯತಂತ್ರ ಪಶ್ಚಿಮ ಬಂಗಾಳ ಚುನಾವಣೆ; ಗೆಲುವಿಗೆ ಬಿಜೆಪಿ ಹೊಸ ಕಾರ್ಯತಂತ್ರ

ಇದೀಗ ಸಿಎಂ ಮಮತಾ ಬ್ಯಾನರ್ಜಿ ಅವರನ್ನು "ಬಂಗಾಳದ ಮಗಳು" ಎಂದು ಕರೆದುಕೊಂಡಿರುವ ಪಕ್ಷ ಕೋಲ್ಕತ್ತಾದೆಲ್ಲೆಡೆ ಮಮತಾ ಬ್ಯಾನರ್ಜಿ ಫೋಟೊ ಜೊತೆ ಈ ಘೋಷಣೆಯನ್ನೂ ಹಾಕುತ್ತಿದೆ.

TMC Launches 2021 Bengal Election Slogan

"ಸಿಎಂ ಆಗಿ ಹಲವು ವರ್ಷಗಳಿಂದಲೂ ತಮ್ಮ ಜೊತೆಯಿರುವ ಮಮತಾ ಬ್ಯಾನರ್ಜಿ ಅವರನ್ನೇ ಬಂಗಾಳ ಜನರು ಅಧಿಕಾರಕ್ಕೆ ತರಲು ಬಯಸುತ್ತಿದ್ದಾರೆ. ಬಂಗಾಳದಲ್ಲಿ ಹೊರಗಿನವರಿಗೆ ಅವಕಾಶ ನೀಡುವುದು ಬೇಡವಾಗಿದೆ" ಎಂದು ತೃಣಮೂಲ ಕಾರ್ಯದರ್ಶಿ ಪಾರ್ಥ ಚಟರ್ಜಿ ಹೇಳಿದ್ದಾರೆ.

294 ಸೀಟುಗಳಿಗೆ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಬಿಜೆಪಿ ಪರಿವರ್ತನಾ ಯಾತ್ರೆ ನಡೆಸಿದೆ. ಟಿಎಂಸಿ ಕೂಡ ಸಾಲು ಸಾಲು ಪ್ರಚಾರ ಮೆರವಣಿಗೆ ನಡೆಸುತ್ತಿದೆ.

English summary
The slogan Bengal wants its own daughter along with Mamata Banerjee's photo was put up on advertisement hoardings across Kolkata over upcoming election in state,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X