ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಉಸ್ತುವಾರಿ ಬಿಜೆಪಿ ಪರ, ಅವರನ್ನು ತೆಗೆದುಹಾಕಿ: ಟಿಎಂಸಿ ಆಗ್ರಹ

|
Google Oneindia Kannada News

ಕೋಲ್ಕತಾ, ಮಾರ್ಚ್ 4: ಪಶ್ಚಿಮ ಬಂಗಾಳದ ಉಪ ಚುನಾವಣಾ ಆಯುಕ್ತ ಉಸ್ತುವಾರಿ ಸುದೀಪ್ ಜೈನ್ ಬಿಜೆಪಿ ಪರ ಪಕ್ಷಪಾತಿಯಾಗಿದ್ದು, ಒಕ್ಕೂಟ ವ್ಯವಸ್ಥೆಯ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿದ್ದಾರೆ. ಹೀಗಾಗಿ ಅವರನ್ನು ತೆಗೆದುಹಾಕಬೇಕು ಎಂದು ಆಡಳಿತಾರೂಢ ಟಿಎಂಸಿ ಒತ್ತಾಯಿಸಿದೆ.

ಸುದೀಪ್ ಜೈನ್ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷಪಾತಿಯಾಗಿದ್ದ ದಾಖಲೆಯಿದೆ. ಹೀಗಾಗಿ ಅವರನ್ನು ರಾಜ್ಯ ಚುನಾವಣಾ ಉಸ್ತುವಾರಿಯಿಂದ ತೆಗೆದುಹಾಕುವಂತೆ ಪಕ್ಷದ ಮುಖಂಡ ಡೆರೆಕ್ ಒಬ್ರಿಯಾನ್ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎಂದು ಟಿಎಂಸಿ ವಕ್ತಾರ ಸೌಗತ ರಾಯ್ ಗುರುವಾರ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಪಕ್ಷಾಂತರ ಪರ್ವ: ಟಿಎಂಸಿಗೆ ನಾಲ್ವರು ನಾಯಕರು!ಪಶ್ಚಿಮ ಬಂಗಾಳದಲ್ಲಿ ಪಕ್ಷಾಂತರ ಪರ್ವ: ಟಿಎಂಸಿಗೆ ನಾಲ್ವರು ನಾಯಕರು!

'ಕಳೆದ ಲೋಕಸಭೆ ಚುನಾವಣೆಯಲ್ಲಿ ಸುದೀಪ್ ಜೈನ್ ಚುನಾವಣಾ ಆಯೋಗದ ನಿಯಮಾವಳಿಗಳು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ನಿಯಮಗಳ ವಿರುದ್ಧವಾಗಿಯೂ ಅನೇಕ ಹೆಜ್ಜೆಗಳನ್ನು ತೆಗೆದುಕೊಂಡಿದ್ದರು. ನಮಗೆ ಅವರ ಮೇಲೆ ನಂಬಿಕೆ ಇಲ್ಲ. ಈ ಬಾರಿ ಕೂಡ ಅವರು ಬಿಜೆಪಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನೆರವಾಗುವಂತೆ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎನ್ನುವುದು ನಮಗೆ ಖಚಿತವಾಗಿದೆ' ಎಂದು ಸೌಗತ ರಾಯ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

TMC Demands Removal Of Deputy Election Commissioner Sudeep Jain For Biased Towards BJP

"ಬಂಗಾಳದ ಹುಲಿ"ಗೆ ನಮ್ಮ ಬಲ, ಬೆಂಬಲ ಎಂದು ಘೋಷಿಸಿದ ಶಿವಸೇನೆ

ಕೋವಿಡ್ ಲಸಿಕೆ ಕಾರ್ಯಕ್ರಮದ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಹಾಗೂ ವಿಡಿಯೋಗಳನ್ನು ಬಳಕೆ ಮಾಡುತ್ತಿರುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಹೀಗಾಗಿ ಅವುಗಳನ್ನು ತೆರವುಗೊಳಸಿಬೇಕು ಎಂದು ಚುನಾವಣಾ ಆಯೋಗಕ್ಕೆ ಟಿಎಂಸಿ ಪತ್ರ ಬರೆದಿತ್ತು.

English summary
West Bengal Assembly Election 2021: TMC has demanded to remove Deputy election commissioner in-charge Sudeep Jain for biased towards BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X