ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಪಾರ್ಥ ಚಟರ್ಜಿ ವಿರುದ್ಧ ಟೀಕೆ, ಟಿಎಂಸಿ ವಕ್ತಾರನಿಗೆ ಕೋಕ್!

|
Google Oneindia Kannada News

ಲಕ್ನೋ, ಆಗಸ್ಟ್ 7: ವಜಾಗೊಂಡಿರುವ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ವಿರುದ್ಧ ಹೇಳಿಕೆ ನೀಡಿಕ್ಕಾಗಿ ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಕುನಾಲ್ ಘೋಷ್ ಅವರನ್ನು 14 ದಿನಗಳ ಕಾಲ ಪಕ್ಷದ ವಕ್ತಾರ ಹುದ್ದೆಯಿಂದ ತೆಗೆದುಹಾಕಿದೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಕಾರ್ಯದರ್ಶಿ ಮತ್ತು ವಕ್ತಾರ ಕುನಾಲ್ ಘೋಷ್ ಅವರು ಪಾರ್ಥ ಚಟರ್ಜಿ ವಿರುದ್ಧ ಹೇಳಿಕೆಗಾಗಿ ಪಕ್ಷದ ವಕ್ತಾರ ಹುದ್ದೆಯಿಂದ ತೆಗೆದುಹಾಕಿದೆ. ಮೂಲಗಳ ಪ್ರಕಾರ, ಪಾರ್ಥ ಚಟರ್ಜಿ ಕುರಿತು ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸದಂತೆ ಕುನಾಲ್ ಘೋಷ್ ಅವರಿಗೆ ಸೂಚನೆ ನೀಡಲಾಗಿದೆ. 14 ದಿನಗಳ ಕಾಲ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳದಂತೆ ಕುನಾಲ್‌ಗೆ ತೃಣಮೂಲ ಕಾಂಗ್ರೆಸ್ ಆದೇಶ ನೀಡಿದೆ.

ಪಶ್ಚಿಮ ಬಂಗಾಳ ಶಿಕ್ಷಕರ ನೇಮಕಾತಿಯ ಭ್ರಷ್ಟಾಚಾರ ಪ್ರಕರಣದಲ್ಲಿದೆ ಎಂಬುದನ್ನು ಅರ್ಥ ಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಇದರ ಬೆನ್ನಲ್ಲೇ ತೃಣಮೂಲ ರಾಜ್ಯ ಕಾರ್ಯದರ್ಶಿ ಅವರ ವಿರುದ್ಧ ಹೇಳಿಕೆ ನೀಡಿದ್ದರು.

TMC Censors Kunal Ghosh on his comment Over Partha Chatterjee

ಎಸ್‌ಎಸ್‌ಸಿ ಹಗರಣದಲ್ಲಿ ಪಾರ್ಥ ಚಟ್ಟೋಪಾಧ್ಯಾಯ ಅವರ ಹೆಸರು ಸಿಲುಕಿದ ನಂತರ ಕುನಾಲ್ ನೇರವಾಗಿ ದಾಳಿ ನಡೆಸುತ್ತಿದ್ದರು. ಅವರ ಬಂಧನದ ನಂತರ ಕುನಾಲ್ ಘೋಷ್ ಅವರ ವಿರುದ್ಧ ಹೆಚ್ಚು ಧ್ವನಿ ಎತ್ತಿದ್ದಾರೆ. ಅವರನ್ನು ಪಕ್ಷದಿಂದ ವಜಾ ಮಾಡುವಂತೆಯೂ ಆಗ್ರಹಿಸಿದ್ದರು.

ಇವುಗಳ ನಡುವೆಯೇ ಸುಮ್ಮನಿದ್ದ ಪಕ್ಷ ಈ ಬಾರಿ ಪಕ್ಷದ ವಕ್ತಾರ ಹುದ್ದೆಯಿಂದ ತೆಗೆದು ಕ್ರಮ ಕೈಗೊಂಡಿದೆ. ಪಾರ್ಥ ಚಟರ್ಜಿ ಬಗ್ಗೆ ಬಾಯಿ ಬಿಡದಂದೆ ಆದೇಶ ನೀಡಲಾಗಿದೆ.

TMC Censors Kunal Ghosh on his comment Over Partha Chatterjee

ಮೂಲಗಳ ಪ್ರಕಾರ, ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಬಗ್ಗೆ ಪ್ರತಿಕ್ರಿಯಿಸುವಾಗ ಯಾವುದೇ ರೀತಿಯಲ್ಲಿ ಪಕ್ಷದ ರೇಖೆಗಳನ್ನು ದಾಟದಂತೆ ತೃಣಮೂಲ ನಾಯಕರಿಗೆ ಸೂಚನೆ ನೀಡಿದೆ. ಅದೇ ಸಮಯದಲ್ಲಿ, ಪಕ್ಷದ ನಾಯಕತ್ವವು ಕುನಾಲ್ ಘೋಷ್ ಅವರನ್ನು 14 ದಿನಗಳ ಕಾಲ ಮಾಧ್ಯಮಗಳ ಮುಂದೆ ಮಾತನಾಡುವುದನ್ನು ನಿಷೇಧಿಸಿದೆ.

English summary
TMC's Spokesperson Kunal Ghosh has been censored by the party for commenting against suspended party leader Partha Chatterjee. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X