ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಟಿಕ್‌ಟಾಕ್ ಮನರಂಜನಾ ಆಪ್, ಬ್ಯಾನ್ ಆತುರದ ನಿರ್ಧಾರ': ನಟಿ-ಸಂಸದೆ ನುಸ್ರತ್

|
Google Oneindia Kannada News

ಕೊಲ್ಕತ್ತಾ, ಜುಲೈ 1: ಚೀನಾ ಆಪ್ ಟಿಕ್‌ಟಾಕ್ ಬ್ಯಾನ್ ಮಾಡಿರುವುದರನ್ನು ಖಂಡಿಸಿರುವ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ 'ಇದು ಕೇಂದ್ರ ಸರ್ಕಾರದ ಆತುರ ನಿರ್ಧಾರ' ಎಂದಿದ್ದಾರೆ.

Recommended Video

Health minister Sriramulu sent notice to 18 hospital which avoided Covid patient | Oneindia Kannada

ಕೊಲ್ಕತ್ತಾದಲ್ಲಿ ಇಂದು ಇಸ್ಕಾನ್ ಆಡಳಿತ ಮಂಡಳಿ ಆಯೋಜಿಸಿದ್ದ ರಥ ಯಾತ್ರೆ ಸಂಭ್ರಮದಲ್ಲಿ ಭಾಗವಹಿಸಿದ್ದ ತೃಣಮೂಲ ಕಾಂಗ್ರೆಸ್ ಸಂಸದ ನುಸ್ರತ್ ಜಹಾನ್ ''ಟಿಕ್ ಟಾಕ್ ನಿಷೇಧದಿಂದ ಜನರು ತೊಂದರೆಗೊಳಗಾಗುತ್ತಾರೆ'' ಎಂದಿದ್ದಾರೆ.

ಟಿಕ್‌ಟಾಕ್ ನಿಷೇಧ : ಕೇಂದ್ರ ಸರ್ಕಾರದ ಜೊತೆ ಬ್ಯಾನ್ ಕುರಿತು ಚರ್ಚಿಸಲಿರುವ ಟಿಕ್‌ ಟಾಕ್ ಕಂಪನಿಟಿಕ್‌ಟಾಕ್ ನಿಷೇಧ : ಕೇಂದ್ರ ಸರ್ಕಾರದ ಜೊತೆ ಬ್ಯಾನ್ ಕುರಿತು ಚರ್ಚಿಸಲಿರುವ ಟಿಕ್‌ ಟಾಕ್ ಕಂಪನಿ

''ಟಿಕ್ ಟಾಕ್ ಒಂದು ಮನರಂಜನಾ ಆಪ್. ಇದು ಹಠಾತ್ ನಿರ್ಧಾರ. ಈ ಯೋಜನೆ ಹಿಂದಿನ ಕಾರ್ಯತಂತ್ರವೇನು? ನಿರುದ್ಯೋಗಿಗಳಾಗುತ್ತಿರುವ ಜನರ ಕಥೆಯೇನು? ನೋಟು ಬ್ಯಾನ್‌ನಲ್ಲಿ ತೊಂದರೆಗೆ ಒಳಗಾದ ರೀತಿ ಜನರು ಬಳಲುತ್ತಾರೆ. ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ನಿಷೇಧ ಮಾಡಿರುವ ಬಗ್ಗೆ ನನಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಈ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ'' ಎಂದು ನುಸ್ರತ್ ಜಹಾನ್ ಎಎನ್ಐಗೆ ತಿಳಿಸಿದ್ದಾರೆ.

ಟಿಕ್ ಟಾಕ್, ಶೇರ್ ಇಟ್, ಯುಸಿ ಬ್ರೌಸರ್ ಸೇರಿದಂತೆ ಚೀನಾ 59 ಆಪ್‌ಗಳನ್ನು ಭಾರತ ಸರ್ಕಾರ ಅಧಿಕೃತವಾಗಿ ನಿಷೇಧ ಮಾಡಿದೆ. ರಾಷ್ಟ್ರೀಯ ಭದ್ರತೆ ಕಾರಣ ನೀಡಿ ಈ ಆಪ್‌ಗಳ ಮೇಲೆ ನಿರ್ಬಂಧ ಹೇರಿದೆ.

TikTok Ban Is impulsive decision Said TMC Mp nusrat jahan

ಇನ್ನು ಮಂಗಳವಾರ ಈ ಬಗ್ಗೆ ಮಾತನಾಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ''ಚೀನಾ ಆಪ್‌ಗಳನ್ನು ನಿಷೇಧ ಮಾಡಿದರೆ ಸಾಲದು, ಚೀನಾಗೆ ಸೂಕ್ತ ಉತ್ತರ ನೀಡಬೇಕಿದೆ. ಅದು ಏನು ಎನ್ನುವುದನ್ನು ಸರ್ಕಾರ ನಿರ್ಧರಿಸಬೇಕಿದೆ'' ಎಂದಿದ್ದರು.

ಇಲ್ಲವಾದರೆ ಸರ್ಕಾರದ ನಿಲುವನ್ನು ದೇಶದ ಜನರು ಪ್ರಶ್ನಿಸಬಹುದು ಎಂದು ಪಶ್ಚಿಮ ಬಂಗಾಳ ಸಿಎಂ ಎಚ್ಚರಿಕೆ ನೀಡಿದ್ದರು. ''ಚೀನಾ ವಿರುದ್ಧ ಸರ್ಕಾರ ಯಾವುದೇ ನಿಲುವು ತೆಗೆದುಕೊಂಡರು ಅದರಲ್ಲಿ ಯಾವುದೇ ವಿನಾಯಿತಿ ನೀಡಬಾರದು. ನಾವು ಆಕ್ರಮಣಕಾರಿಯಾಗಿರಬೇಕು'' ಎಂದು ಕಿವಿಮಾತು ಹೇಳಿದ್ದಾರೆ.

English summary
TikTok is an entertainment app. It's an impulsive decision. What's the strategic plan - trinamool congress mp nusrat jahan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X