ರಾನು ಮೊಂಡಲ್ ಹಾಡು ''ಊಳಿಟ್ಟ'' ವಿಡಿಯೋ ವೈರಲ್
Recommended Video
ಕೋಲ್ಕತ್ತಾ, ಜನವರಿ 16: ಬೀದಿ ಬದಿಯಲ್ಲಿ ಹಾಡುತ್ತಾ ತನ್ನ ಪಾಡಿಗಿದ್ದ ಗಾಯಕಿ ರಾನು ಮೊಂಡಲ್ ಗೆ ಬಾಲಿವುಡ್ ಲೋಕ ಪ್ರವೇಶಿಸಲು ಸಂಗೀತಗಾರ ಹಿಮೇಶ್ ರೇಶಾಮಿಯಾ ಅವಕಾಶ ನೀಡಿದ್ದು ತಿಳಿದಿರಬಹುದು. ರಾನು ಹಾಡು ವೈರಲ್ ಆಗುತ್ತಿದ್ದಂತೆ ಅನೇಕರು ಹಾಡನ್ನು ಅಭ್ಯಾಸ ಮಾಡುವುದು ಕೂಡಾ ವೈರಲ್ ಆಗಿಬಿಟ್ಟಿತು. ಆದರೆ, ಈಗ ರಾನು ಹಾಡನ್ನು ನಾಯಿಯೊಂದು ಊಳಿಡುವ ಮೂಲಕ ಸದ್ದು ಮಾಡಿದೆ.
ಸುಬೀರ್ ಖಾನ್ ಎಂಬುವರು ಹಾರ್ಮೊನಿಯಂ ಹಿಡಿದುಕೊಂಡು ಹಾಡನ್ನು ಅಭ್ಯಾಸ ಮಾಡತೊಡಗಿದಾಗ, ಅವರ ಮನೆಯ ನಾಯಿ ಜೊತೆಗೆ ದನಿಯಾಗಿದೆ. ಮೇರಿ ಅವಾಜ್ ಹಿ ಪೆಹೆಚಾನ್ ಹೈ ಎಂಬ ಲತಾ ಮಂಗೇಶ್ಕರ್ ಅವರ ಹಾಡಿಗೆ ದನಿಯಾಗಿದ್ದ ರಾನುಗೆ ಅವಕಾಶಗಳು ಹುಡುಕಿಕೊಂಡು ಬಂದಿವೆ.
ಸುಬೀರ್ ಅವರ ತಮ್ಮ ಹಾಡುಗಾರಿಕೆ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಹಾಕಿದ್ದು, ಜೊತೆಯಲ್ಲಿ ನಾಯಿ ಕೂಡಾ ಊಳಿಟ್ಟಿದೆ. ಹಾಡಿನ ಮಧ್ಯೆ ಕಾಲುಗಳನ್ನು ಎತ್ತಿ ಹಾಡು ನಿಲ್ಲಿಸುವಂತೆ ಸನ್ನೆ ಮಾಡಿದಂತೆ ತೋರುತ್ತದೆ. ತೇರಿ ಮೇರಿ ಕಹಾನಿ ಹಾಡನ್ನು ಹಾಡುವಾಗ ಅವರ ಮನೆ ನಾಯಿ ಬಾಘಾ ಪಕ್ಕದಲ್ಲೇ ನಿಂತು ಕೇಳಿಸಿಕೊಂಡಿದ್ದಲ್ಲದೆ, ಕೋರಸ್ ಸಿಂಗರ್ ಆಗಿರುವ ವಿಡಿಯೋ ಈಗ ಅನೇಕರ ಮೆಚ್ಚುಗೆ ಪಡೆದುಕೊಂಡಿದೆ.
Contrarian Cousin sent me this last night and Im still laughing 😂😂😂 pic.twitter.com/VPzaudcUVD
— manjula narayan (@utterflea) January 15, 2020
30 ಸೆಕೆಂಡು ಗಳ ಈ ವಿಡಿಯೋ ಕ್ಲಿಪ್ 59000 ಬಾರಿ ಹಂಚಿಕೆಯಾಗಿದ್ದು, 26000 ಬಾರಿ ಪ್ರತಿಕ್ರಿಯೆ ಪಡೆದುಕೊಂಡಿದೆ. 2.5 ಮಿಲಿಯನ್ ಬಾರಿ ವೀಕ್ಷಣೆ ಪಡೆದುಕೊಂಡಿದ್ದು ಅನೇಕ ಮೀಮ್ಸ್, ಪ್ರಾಣಿಪ್ರಿಯರ ಪೇಜ್ ಗಳಲ್ಲಿ ಹರಿದಾಡಿದೆ.