ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿನಿಮಾ ನಿಷೇಧಿಸಿದ್ದಕ್ಕೆ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ 20 ಲಕ್ಷ ದಂಡ

|
Google Oneindia Kannada News

ಕೊಲ್ಕತ್ತಾ, ಏಪ್ರಿಲ್ 11: ರಾಜಕೀಯ ವಿಡಂಬನೆಯ ಸಿನಿಮಾ ಒಂದನ್ನು ನಿಷೇಧಿಸಿದ್ದಕ್ಕೆ ಪಶ್ಚಿಮ ಬಂಗಾಲದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಸುಪ್ರಿಂಕೋರ್ಟ್ 20 ಲಕ್ಷ ದಂಡ ವಿಧಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಭವಿಷ್ಯೋತ್ತರ್ ಭೂತ್ (ಭವಿಷ್ಯದ ಭೂತಗಳು) ಎಂಬ ರಾಜಕೀಯ ವಿಡಂಬನೆಯ ಸಿನಿಮಾವನ್ನು ಮಮತಾ ಬ್ಯಾನರ್ಜಿ ಸರ್ಕಾರ ನಿಷೇಧಿಸಿತ್ತು, ಇದರ ವಿರುದ್ಧ ಚಿತ್ರದ ನಿರ್ಮಾಪಕರು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು.

ಚೀನೀ ಭಾಷೆಯಲ್ಲಿ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರಚೀನೀ ಭಾಷೆಯಲ್ಲಿ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರ

ಪ್ರಕರಣದ ವಿಚಾರಣೆ ನಡೆಸಿದ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು, ಚಿತ್ರದ ನಿರ್ಮಾಪಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದ್ದಕ್ಕೆ ಈ ದಂಡ ವಿಧಿಸಲಾಗಿದೆ ಎಂದು ಹೇಳಿದೆ.

Supreme court impose fine on west bengal government for banning a movie

ದಂಡದ ಹಣವನ್ನು ಚಿತ್ರದ ನಿರ್ಮಾಪಕರಿಗೆ ಹಾಗೂ ಚಲನಚಿತ್ರ ಮಂದಿರಗಳಿಗೆ ನೀಡಬೇಕು ಎಂದು ಆದೇಶದಲ್ಲಿ ಹೇಳಿದ್ದು, ಕೂಡಲೆ ಚಿತ್ರ ಬಿಡುಗಡೆಗೆ ಅನುವು ಮಾಡಿಕೊಡಬೇಕು ಹಾಗೂ ಚಿತ್ರಮಂದಿರಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಸುಪ್ರಿಂ ಹೇಳಿದೆ.

ಬೌದ್ಧ, ಹಿಂದೂ ಬಿಟ್ಟು ಎಲ್ಲ ನುಸುಳುಕೋರರನ್ನು ಹೊರಗಟ್ಟುತ್ತೇವೆ: ಶಾಬೌದ್ಧ, ಹಿಂದೂ ಬಿಟ್ಟು ಎಲ್ಲ ನುಸುಳುಕೋರರನ್ನು ಹೊರಗಟ್ಟುತ್ತೇವೆ: ಶಾ

ಈ ಪ್ರಕರಣದ ವಿಚಾರಣೆ ನಡೆಸಿದ ಪೀಠವು, ಕಲೆಯ ಉದ್ದೇಶವೇ ಪ್ರಶ್ನಿಸುವುದು ಮತ್ತು ಪ್ರಚೋದಿಸುವುದು. ಆದರೆ ಸಮಾಜದಲ್ಲಿ ಕೆಲವು ಸಂಘಟಿತ ಗುಂಪುಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯ ತರುತ್ತಿವೆ, ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ.

'ಎಕ್ಸ್ ಪೈರಿ ಪಿಎಂ' ಎಂಬ ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ'ಎಕ್ಸ್ ಪೈರಿ ಪಿಎಂ' ಎಂಬ ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ

ಫೆಬ್ರವರಿ 15 ರಂದು ಭವಿಷ್ಯೋತೇರ್ ಭೂತ್ ಚಿತ್ರವು ತೆರೆಕಂಡಿತ್ತು, ಆದರೆ ಚಿತ್ರದಲ್ಲಿ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ತರುವ ಅಂಶವಿದೆ, ಹಾಗೂ ಚಿತ್ರವು ರಾಜಕೀಯ ಸಂಘರ್ಷಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಚಿತ್ರವನ್ನು ನಿಷೇಧ ಮಾಡಲಾಗಿತ್ತು.

English summary
Supreme court impose 20 lakh rupees fine on Mamata Banarjee's government for banning political movie 'Bhobishyoter Bhoot'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X