ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ನಾಯಕಿ ಬಿಡುಗಡೆಗೆ ವಿಳಂಬ, ಬಂಗಾಳಕ್ಕೆ ಸುಪ್ರೀಂ ತರಾಟೆ

|
Google Oneindia Kannada News

ಕೋಲ್ಕತ್ತಾ, ಮೇ 15: ಮಮತಾ ಬ್ಯಾನರ್ಜಿ ಅವರ ಚಿತ್ರವನ್ನು ಎಡಿಟ್ ಮಾಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ಕಾರಣಕ್ಕೆ ಬಂಧನಕ್ಕೊಳಗಾಗಿದ್ದ ಬಿಜೆಪಿ ನಾಯಕಿ ಪ್ರಿಯಾಂಕಾ ಶರ್ಮಾ ಅವರ ಜಾಮೀನು ಮಂಜೂರಾಗಿದ್ದರೂ, ಅವರನ್ನು ಒಂದು ರಾತ್ರಿ ಜೈಲಿನಲ್ಲೇ ಕಳೆಯುವಂತೆ ಮಾಡಿದ್ದೇಕೆ ಎಂದು ಸುಪ್ರೀಂ ಕೋರ್ಟ್ ಬಂಗಾಳ ಸರ್ಕಾರವನ್ನು ಪ್ರಶ್ನಿಸಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಐದು ದಿನಗಳ ಹಿಂದೆ ಬಂಧನಕ್ಕೊಳಗಾಗಿದ್ದ ಪ್ರಿಯಾಂಕಾ ಶರ್ಮಾ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿತ್ತು. ಆದರೆ ಮೇ 14 ರ ಬೆಳಿಗ್ಗೆಯೇ ಸುಪ್ರೀಂ ಕೋರ್ಟ್ ಆದೇಶ ನೀದಿದ್ದರೂ, ಅವರನ್ನು 18 ಗಂಟೆಗಳ ಕಾಲ ಜೈಲಿನಲ್ಲಿಯೇ ಇರಿಸಿಕೊಳ್ಳಲಾಗಿತ್ತು. ಅದಕ್ಕೆ ಸಮಜಾಯಿಷಿ ನೀಡುವಂತೆ ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಪ್ರಿಯಾಂಕ ಹೋಲುವಂತೆ ಮಮತಾ ಬ್ಯಾನರ್ಜಿ ಚಿತ್ರ ಎಡಿಟ್: ಬಿಜೆಪಿ ನಾಯಕಿ ಅರೆಸ್ಟ್ ಪ್ರಿಯಾಂಕ ಹೋಲುವಂತೆ ಮಮತಾ ಬ್ಯಾನರ್ಜಿ ಚಿತ್ರ ಎಡಿಟ್: ಬಿಜೆಪಿ ನಾಯಕಿ ಅರೆಸ್ಟ್

ಈ ನಡುವೆ ತಮಗೆ ಜೈಲಿನಲ್ಲಿ ಕಿರುಕುಳ ನೀಡಲಾಗಿತ್ತು. ಐದು ದಿನಗಳ ಕಾಲ ತನಗೆ ಕುಟುಂಬಸ್ಥರ ಬಳಿಯಾಗಲೀ, ವಕೀಲರ ಬಳಿಯಾಗಲೀ ಮಾತನಾಡುವುದಕ್ಕೂ ಅವಕಾಶ ನೀಡಲಿಲ್ಲ. ಕುಡಿಯುವುದಕ್ಕೆ ಸರಿಯಾಗಿ ನೀರೂ ಕೊಡುತ್ತಿರಲಿಲ್ಲ ಎಂದು ಶರ್ಮಾ ಆರೋಪಿಸಿದ್ದಾರೆ.

Supreme Court asks WB government for delaying in release of Priyanka Sharma

ಇತ್ತೀಚೆಗೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ 'ಎಂಇಟಿ ಗಾಲಾ - 2019' ಫ್ಯಾಷನ್ ಶೋನಲ್ಲಿ ಕಾಣಿಸಿಕೊಂಡ ಚಿತ್ರಕ್ಕೆ ಮಮತಾ ಬ್ಯಾನರ್ಜಿಯ ಮುಖವನ್ನು ಹಚ್ಚಿ, ಎಡಿಟ್ ಮಾಡಲಾಗಿತ್ತು. ಈ ಚಿತ್ರವನ್ನು ಪಶ್ಚಿಮ ಬಂಗಾಳದ ಯುವ ನಾಯಕಿ, ಹೌರಾ ಜಿಲ್ಲೆಯ ಬಿಜೆಪಿ ಸಂಚಾಲಕಿ ಪ್ರಿಯಾಂಕ ಶರ್ಮಾ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.

ಜೈಲಿನಲ್ಲಿ ಹಿಂಸೆ ನೀಡಲಾಗಿತ್ತು ಎಂದ ಬಿಜೆಪಿ ನಾಯಕಿಜೈಲಿನಲ್ಲಿ ಹಿಂಸೆ ನೀಡಲಾಗಿತ್ತು ಎಂದ ಬಿಜೆಪಿ ನಾಯಕಿ

ಇದು ಬಂಗಾಳದ ಸಂಸ್ಕೃತಿಗೆ ಮಾಡುವ ಅವಮಾನ ಎಂದು ದೂರು ಅವರ ವಿರುದ್ಧ ತೃಣಮೂಲ ಕಾಂಗ್ರೆಸ್ ಮುಖಂಡ ವಿಭಾಸ್ ಹಜ್ರಾ ಪೊಲೀಸರಿಗೆ ದೂರು ನೀಡಿದ್ದರು.

English summary
Supreme Court asked West Bengal government to give proper reasons why it delayed to release BJP young leader Priyanka Sharma's release, who was arrested for posting edited photo of WB CM Mamata Banerjee,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X