ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಎಸ್‌ಸಿ ಹಗರಣ: ಅರ್ಪಿತಾ ಮುಖರ್ಜಿ ಕಾರುಗಳು ಕಾಣೆ

|
Google Oneindia Kannada News

ಕೋಲ್ಕತ್ತಾ ಜುಲೈ 30: ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಿಲುಕಿರುವ ಮಾಜಿ ಸಚಿವ ಪಾರ್ಥ ಚಟರ್ಜಿ ಹಾಗೂ ಅವರ ಆಪ್ತರಾದ ಅರ್ಪಿತಾ ಮುಖರ್ಜಿ ವಿಚಾರಣೆಯನ್ನು ಇಡಿ ಚುರುಕುಗೊಳಿಸಿದೆ. ಇದರ ಬೆನ್ನಲ್ಲೆ ಅರ್ಪಿತಾ ಮುಖರ್ಜಿ ಅವರ ಚಾಲಕ ಪ್ರಣಬ್ ಭಟ್ಟಾಚಾರ್ಯ ಅವರು ಕಳೆದ ಮೂರು ತಿಂಗಳಿನಿಂದ ಅವರ ಹೆಸರಿನಲ್ಲಿ ಅನೇಕ ವಾಹನಗಳು ಕಾಣೆಯಾಗಿರುವುದನ್ನು ಖಚಿತಪಡಿಸಿದ್ದಾರೆ. ಹೋಂಡಾ ಸಿಟಿಯನ್ನು ಬಿಟ್ಟರೆ ಉಳಿದ ಕಾರುಗಳನ್ನು ಓಡಿಸಲು ಆತನಿಗೆ ಅನುಮತಿ ನೀಡಿರಲಿಲ್ಲ ಎಂದು ಚಾಲಕ ಹೇಳಿಕೊಂಡಿದ್ದಾರೆ. ಅಪಾರ್ಟ್‌ಮೆಂಟ್ ಬಳಿ ಇದ್ದ ಉಳಿದ ಕಾರುಗಳು ಸದ್ಯ ನಾಪತ್ತೆಯಾಗಿವೆ ಎಂದು ಚಾಲಕ ಟಿವಿ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ. ಪಾರ್ಥ ಚಟರ್ಜಿ ಕೆಲವೊಮ್ಮೆ ಅರ್ಪಿತಾ ಅವರನ್ನು ಭೇಟಿಯಾಗುತ್ತಿದ್ದರು. ಪಾರ್ಥ ಚಟರ್ಜಿ ಅಮಾನತುಗೊಳ್ಳುವ ಮುನ್ನ ಅರ್ಪಿತಾ ಅವರ ಮನೆಗೆ ಪ್ರವೇಶಿಸುವುದನ್ನು ಪ್ರಣಬ್ ನೋಡಿರುವುದಾಗಿ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಕೂಡ ಅವರನ್ನು ಪ್ರಶ್ನಿಸಿದೆ ಎಂದು ಭಟ್ಟಾಚಾರ್ಯ ತಿಳಿಸಿದ್ದಾರೆ. "ಇಡಿ ಅಧಿಕಾರಿಗಳು ಬಂದಾಗ ನಾನು ಹಾಜರಿದ್ದೆ. ಅವರು ನನ್ನನ್ನು ಒಳಗೆ ಕುಳಿತುಕೊಳ್ಳಲು ಹೇಳಿದರು. ಈ ವೇಳೆ ಅವರು ನನಗೆ ಕರೆ ಮಾಡಿ ಅರ್ಪಿತಾ ಎಲ್ಲಿದ್ದಾರೆ ಎಂದು ಕೇಳಿದರು," ಎಂದು ಅರ್ಪಿತಾ ಅವರ ಚಾಲಕ ಹೇಳಿದರು. ಅವರು ಇಡಿ ಅಧಿಕಾರಿಗಳಿಗೆ ತಮ್ಮ ಸಂಪರ್ಕ ಸಂಖ್ಯೆಯನ್ನು ನೀಡಿದ್ದಾರೆ ಮತ್ತು ಅವರು ಕರೆದಾಗಲೆಲ್ಲಾ ಅವರನ್ನು ಭೇಟಿ ಮಾಡುತ್ತಿರುವುದಾಗಿ ಹೇಳಿದರು.

ಸಿಸಿಟಿವಿ ದೃಶ್ಯಾವಳಿಯಿಂದ ತನಿಖೆ

ಸಿಸಿಟಿವಿ ದೃಶ್ಯಾವಳಿಯಿಂದ ತನಿಖೆ

ಕೋಲ್ಕತ್ತಾದ ಡೈಮಂಡ್ ಸಿಟಿ ಕಾಂಪ್ಲೆಕ್ಸ್‌ನಲ್ಲಿರುವ ತನ್ನ ನಿವಾಸದಿಂದ ನಾಲ್ಕು ಐಷಾರಾಮಿ ಕಾರುಗಳು ಕಾಣೆಯಾಗಿವೆ ಎಂದು ಪಾರ್ಥ ಚಟರ್ಜಿ ಸಹಾಯಕ ಅರ್ಪಿತಾ ಮುಖರ್ಜಿ ಶುಕ್ರವಾರ ವರದಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅರ್ಪಿತಾ ಅವರನ್ನು ಇಡಿ ಬಂಧಿಸಿದಾಗಿನಿಂದ ಫ್ಲಾಟ್‌ನಲ್ಲಿ ಕಾರುಗಳು ನಾಪತ್ತೆಯಾಗಿದ್ದವು. ಅಧಿಕಾರಿಗಳು ಪ್ರಸ್ತುತ ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಕಾಣೆಯಾದ ಕಾರುಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.

76 ಲಕ್ಷ ಮೌಲ್ಯದ ಚಿನ್ನ ವಶ

76 ಲಕ್ಷ ಮೌಲ್ಯದ ಚಿನ್ನ ವಶ

ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರ ನಿಕಟ ಸಹಚರ ಎಂದು ತನಿಖಾ ಸಂಸ್ಥೆ ವಿವರಿಸಿರುವ ಅರ್ಪಿತಾ ಮುಖರ್ಜಿ ಅವರ ನಿವಾಸದಿಂದ ಜುಲೈ 22 ರಂದು ಇಡಿ 21.90 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿಸಿಕೊಳ್ಳಲಾಗಿದೆ. 56 ಲಕ್ಷ ವಿದೇಶಿ ಕರೆನ್ಸಿ ಮತ್ತು 76 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈವರೆಗೂ ಅರ್ಪಿತಾ ಅವರಿಗೆ ಸಂಬಂಧಿಸಿದ ನಿವಾಸಗಳಲ್ಲಿ ಇಡಿ ಅಧಿಕಾರಿಗಳು ದಾಳಿಯಿಂದ ಸುಮಾರು 50 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ.

ಶಿಕ್ಷಕರ ನೇಮಕಾತಿ ಹಗರಣದಲ್ಲಿ ಹಣ ಗಳಿಕೆ

ಶಿಕ್ಷಕರ ನೇಮಕಾತಿ ಹಗರಣದಲ್ಲಿ ಹಣ ಗಳಿಕೆ

ಪಾರ್ಥ ಚಟರ್ಜಿ ಅವರು ಗ್ರೂಪ್ 'ಸಿ' ಮತ್ತು 'ಡಿ' ಸಿಬ್ಬಂದಿ, IX-XII ತರಗತಿಗಳ ಸಹಾಯಕ ಶಿಕ್ಷಕರು ಮತ್ತು ಪ್ರಾಥಮಿಕ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಮೊದಲ ದಾಳಿಯ ಕೆಲವು ದಿನಗಳ ನಂತರ, ಅರ್ಪಿತಾ ಮುಖರ್ಜಿ ಅವರ ಎರಡನೇ ಅಪಾರ್ಟ್‌ಮೆಂಟ್‌ನಿಂದ ಇಡಿ ಇನ್ನೂ 28.90 ಕೋಟಿ ರೂಪಾಯಿ ನಗದು, 5 ಕೆಜಿಗೂ ಹೆಚ್ಚು ಚಿನ್ನ ಮತ್ತು ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದೆ. ವಸೂಲಿಯಾದ ಮೊತ್ತವು ಶಿಕ್ಷಕರ ನೇಮಕಾತಿ ಹಗರಣದಿಂದ ಅಪರಾಧದ ಆದಾಯ ಎಂದು ಶಂಕಿಸಲಾಗಿದೆ. ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಅವರನ್ನು ಆಗಸ್ಟ್ 3 ರವರೆಗೆ ಇಡಿ ಕಸ್ಟಡಿಗೆ ಕಳುಹಿಸಲಾಗಿದೆ.

ಅರ್ಪಿತಾ ಫ್ಲಾಟ್‌ನಲ್ಲಿ ಹಣ ಸಂಗ್ರಹ

ಅರ್ಪಿತಾ ಫ್ಲಾಟ್‌ನಲ್ಲಿ ಹಣ ಸಂಗ್ರಹ

ವಸೂಲಿ ಮಾಡಿದ ಮೊತ್ತವು ಪಾರ್ಥ ಚಟರ್ಜಿಗೆ ಸೇರಿದ್ದು ಮತ್ತು ಅವರ ಹಣವನ್ನು ಇರಿಸಿಕೊಳ್ಳಲು ಅವರ ಫ್ಲಾಟ್ ಬಳಸಲಾಗಿದೆ ಎಂದು ಅರ್ಪಿತಾ ತಪ್ಪೊಪ್ಪಿಕೊಂಡಿದ್ದಾರೆ ಎಂದು ಇಡಿ ಮೂಲಗಳು ತಿಳಿಸಿವೆ. ಆ ಫ್ಲಾಟ್‌ನಲ್ಲಿ ಇಷ್ಟು ದೊಡ್ಡ ಮೊತ್ತವಿದೆ ಎಂದು ತನಗೆ ತಿಳಿದಿರಲಿಲ್ಲ ಮತ್ತು ಪಾರ್ಥ ಫ್ಲಾಟ್‌ಗೆ ಭೇಟಿ ನೀಡುತ್ತಿದ್ದು ಅವನಿಗೆ ಮಾತ್ರ ಅದರ ಬಗ್ಗೆ ತಿಳಿದಿದೆ ಎಂದು ಅವರು ಇಡಿ ವಿಚಾರಣೆಯಲ್ಲಿ ಹೇಳಿಕೊಂಡಿದ್ದಾರೆ. ಪಕ್ಷ ಮತ್ತು ವಿರೋಧ ಪಕ್ಷದೊಳಗಿನ ಒತ್ತಡದ ನಂತರ, ತೃಣಮೂಲ ಕಾಂಗ್ರೆಸ್ ಗುರುವಾರ ಪಾರ್ಥ ಚಟರ್ಜಿ ಅವರನ್ನು ಅಮಾನತುಗೊಳಿಸಿದೆ. ಶಿಕ್ಷಕರ ನೇಮಕಾತಿ ಹಗರಣ ಪ್ರಕರಣದಲ್ಲಿ ಇಡಿ ಅವರನ್ನು ಬಂಧಿಸಿದ ನಂತರ ಅವರನ್ನು ಬಂಗಾಳ ಸಚಿವಾಲಯದಿಂದ ತೆಗೆದುಹಾಕಲಾಗಿದೆ.

Recommended Video

DK ಆಟಕ್ಕೆ ಸುಸ್ತಾದ ವೆಸ್ಟ್ ಇಂಡೀಸ್: ಮೊದಲ T20 ಯಲ್ಲಿ ಟೀಮ್ ಇಂಡಿಯಾ ಜಯಭೇರಿ | OneIndia Kannada

English summary
Arpita Mukherjee's driver Pranab Bhattacharya confirmed that multiple vehicles under her name have been missing for the last three months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X