ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

|
Google Oneindia Kannada News

ಕೋಲ್ಕತಾ, ಜನವರಿ 27: ಮಾಜಿ ಕ್ರಿಕೆಟಿಗ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಅಸ್ವಸ್ಥಗೊಂಡಿದ್ದಾರೆ. ಬುಧವಾರ ಮಧ್ಯಾಹ್ನ ಅವರನ್ನು ಕೋಲ್ಕತಾದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗೂಲಿ ಅವರಿಗೆ ಮತ್ತೊಮ್ಮೆ ಎದೆನೋವು ಕಾಣಿಸಿಕೊಂಡಿರುವ ವರದಿಗಳು ಬಂದಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇತ್ತೀಚೆಗೆ ಲಘು ಹೃದಯಾಘಾತಕ್ಕೊಳಗಾಗಿದ್ದ ಗಂಗೂಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಆಂಜಿಯೋಪ್ಲಾಸ್ಟಿ ಹಾಗೂ ಇನ್ನಿತರ ಚಿಕಿತ್ಸೆ ನೀಡಲಾಗಿತ್ತು. ಸೌರವ್ ಗಂಗೂಲಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಮನೆಗೆ ಕಳಿಸಲಾಗಿತ್ತು.

Sourav Ganguly admitted to hospital once again after complaining of chest pain: report

ಗಂಗೂಲಿ ಅವರಿಗೆ ಕೋಲ್ಕತ್ತಾದ ವುಡ್‌ಲ್ಯಾಂಡ್‌ ಆಸ್ಪತ್ರೆಯಲ್ಲಿ ಎರಡನೆಯ ಆಂಜಿಯೋಪ್ಲಾಸ್ಟಿ ಮಾಡಬೇಕಾಗಿತ್ತು. ಆದರೆ, ನಂತರದ ಹಂತದಲ್ಲಿ ಮಾಡಬಹುದು ಎಂದು ವೈದ್ಯರ ತಂಡ ನಿರ್ಣಯ ತೆಗೆದುಕೊಂಡಿತ್ತು. ಬೆಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ. ದೇವಿಶೆಟ್ಟಿ ಅವರು ದೆಹಲಿಗೆ ತೆರಳಿ, ಗಂಗೂಲಿ ಅವರ ಮುಂದಿನ ಚಿಕಿತ್ಸೆಗಳ ಬಗ್ಗೆ ವೈದ್ಯರೊಂದಿಗೆ ಸಮಾಲೋಚಿಸಿದ್ದರು.

<br>ಫಾರ್ಚ್ಯೂನ್ ರೈಸ್ ಬ್ರಾನ್ ಅಂಬಾಸಿಡರ್ ಆಗಿ ಸೌರವ್ ಗಂಗೂಲಿ ಮುಂದುವರಿಕೆ: ಅದಾನಿ ವಿಲ್ಮರ್ Dy CEO
ಫಾರ್ಚ್ಯೂನ್ ರೈಸ್ ಬ್ರಾನ್ ಅಂಬಾಸಿಡರ್ ಆಗಿ ಸೌರವ್ ಗಂಗೂಲಿ ಮುಂದುವರಿಕೆ: ಅದಾನಿ ವಿಲ್ಮರ್ Dy CEO

ಭಾರತ ತಂಡದ ಪರ ಎಡಗೈ ಬ್ಯಾಟ್ಸ್‌ಮನ್‌ ಸೌರವ್ ಗಂಗೂಲಿ ಅವರು 113 ಟೆಸ್ಟ್ ಪಂದ್ಯಗಳಲ್ಲಿ 42.18ರ ಸರಾಸರಿಯಲ್ಲಿ 7212 ರನ್, 311 ಏಕದಿನ ಪಂದ್ಯಗಳಲ್ಲಿ 40.73ರ ಸರಾಸರಿಯಂತೆ 11363 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ 59 ಪಂದ್ಯಗಳಲ್ಲಿ 1349 ರನ್ ಬಾರಿಸಿದದ್ದಾರೆ. ಟೆಸ್ಟ್‌ನಲ್ಲಿ 16, ಏಕದಿನದಲ್ಲಿ 22 ಶತಕಗಳನ್ನು ಗಳಿಸಿದ್ದಾರೆ.

English summary
BCCI president and former Indian captain Sourav Ganguly was admitted in a Kolkata hospital once again after complaining of chest pain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X