• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಹುಲ್ ಓರ್ವ ಪ್ರವಾಸಿ ರಾಜಕಾರಣಿ ಎಂದ ಅಮಿತ್ ಶಾ

|
Google Oneindia Kannada News

ಕೋಲ್ಕತ್ತಾ, ಏಪ್ರಿಲ್ 16: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಓರ್ವ ಪ್ರವಾಸಿ ರಾಜಕಾರಣಿ ಎಂದು ಅಮಿತ್ ಶಾ ಲೇವಡಿ ಮಾಡಿದ್ದಾರೆ.

ರಾಹುಲ್ ಗಾಂಧಿ ಈ ಮೊದಲು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ನಡೆಸಿರಲಿಲ್ಲ, ಕೇರಳ, ತಮಿಳುನಾಡು, ಪುದುಚೇರಿ, ಅಸ್ಸಾಂನಲ್ಲಿ ಮಾತ್ರವೇ ಪ್ರಚಾರ ನಡೆಸಿದ್ದರು. ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತ ಮುಗಿದ ಬಳಿಕ ಪ್ರಚಾರಕ್ಕಿಳಿದಿದ್ದಾರೆ ಎಂದರು.

ಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಮತಬೇಟೆಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಮತಬೇಟೆ

ಚುನಾವಣಾ ಪ್ರಚಾರ ಸಭೆಯಲ್ಲಿ ಅಮಿತ್ ಶಾ ಮಾತನಾಡಿ, ಕಾಂಗ್ರೆಸ್ ನಾಯಕನನ್ನು ಟೀಕಿಸಿದ್ದು ಮಾತ್ರವಲ್ಲದೆ, ಬಿಜೆಪಿ ಅಭಿವೃದ್ಧಿ ಅಜೆಂಡಾ, ರಾಷ್ಟ್ರೀಯತೆ ಹಾಗೂ ಆತ್ಮ ನಿರ್ಭರ ಭಾರತದ ಅಭಿಯಾನಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಮೋದಿಯವರ ಬಂಗಾರದ ಬಂಗಾಳ ನಿಮಗೆ ಬೇಕೆ ಅಥವಾ ನುಸುಳುಕೋರರಿಗೆ ಸಹಾಯ ಮಾಡುವ ದೀದಿ ಅವರ ಬಂಗಾಳ ಬೇಕೇ ಎಂಬುದನ್ನು ನೀವೇ ನಿರ್ಧರಿಸಿ ಎಂದಿದ್ದಾರೆ.

ಮೇ 2 ರಂದು ನೀವು ಬಿಜೆಪಿಯನ್ನುಅಧಿಕಾರಕ್ಕೆ ತಂದ ಬಳಿಕ ಗಡಿ ನುಸುಳಿ ಬರಲು ಯಾರಿಗೂ ಅವಕಾಶವಿರುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ ಎಂದು ನುಡಿದರು.

ಅಮಿತ್ ಶಾ
Know all about
ಅಮಿತ್ ಶಾ

ಪ್ರಧಾನಿ ನರೇಂದ್ರ ಮೋದಿ ಹಣಕಾಸು ಅಭಿವೃದ್ಧಿ ಬಯಸಿದರೆ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನುಸುಳುಕೋರರಿಗೆ ನೆರವಾಗಲು ಬಯಸುತ್ತಿದ್ದಾರೆ. ಈಗ ಯಾವ ರೀತಿಯ ಸರ್ಕಾರ ಬೇಕೆಂದು ನೀವೇ ನಿರ್ಧರಿಸಿ ಎಂದು ಹೇಳಿದರು.

English summary
Union Home Minister Amit Shah Friday accused West Bengal Chief Minister Mamata Banerjee of denying citizenship to Dalit Matua and Namsudra communities as her vote bank would not like it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X