• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮುದ್ರ ಆಹಾರ: ರಫ್ತು, ಪೂರೈಕೆ, ಸಂಸ್ಕರಣೆಗೆ ದ್ವೈವಾರ್ಷಿಕ ಪ್ರದರ್ಶನ

|
Google Oneindia Kannada News

ಕೊಲ್ಕತ್ತಾ ಆಗಸ್ಟ್ 13: ಕೋಲ್ಕತ್ತಾದಲ್ಲಿನ ಬಿಸ್ವಾ ಬಂಗಾಲ ಮೇಳ ಪ್ರಾಂಗಣದಲ್ಲಿ ನಡೆಯಲಿರುವ ಸಮುದ್ರಾಹಾರ ವಲಯದ ದ್ವೈವಾರ್ಷಿಕ ಪ್ರದರ್ಶನ ಕಾರ್ಯಕ್ರಮವು ಭಾರತೀಯ ರಫ್ತುದಾರರು ಮತ್ತು ದೇಶದ ಸಾಗರ ಉತ್ಪನ್ನಗಳ ಸಾಗರೋತ್ತರ ಆಮದುದಾರರ ನಡುವಿನ ಸಂವಾದ, ವ್ಯಾಪರದ ಒಪ್ಪಂದಗಳಿಗೆ ಸೂಕ್ತ ವೇದಿಕೆ ಆಗಲಿದೆ ಎಂದು ಎಂಪಿಇಡಿಎ ಅಧ್ಯಕ್ಷ ಡಾ. ಕೆ.ಎನ್.ರಾಘವನ್ ಮಾತನಾಡಿ ಹೇಳಿದರು.

ಭಾರತದ ಸಮುದ್ರಾಹಾರ ರಫ್ತುದಾರರ ಸಂಘದ (ಎಸ್‌ಇಎಐ) ಸಹಕಾರದಲ್ಲಿ ಸಮುದ್ರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು (ಎಂಪಿಇಡಿಎ) 23ನೇ ಸರಣಿಯ 'ಭಾರತ ಅಂತರರಾಷ್ಟ್ರೀಯ ಸಮುದ್ರ ಆಹಾರ ಪ್ರದರ್ಶನ ಮತ್ತು ಈ ಕ್ಷೇತ್ರದಲ್ಲಿ ಭಾರತದ ಮುಂಚೂಣಿ ಅಂಶಗಳ ಪ್ರದರ್ಶನವನ್ನು 2023ರ ಫೆಬ್ರವರಿ 15ರಿಂದ 17ರವರೆಗೆ ಮೂರು ದಿನ ಹಮ್ಮಿಕೊಂಡಿದೆ.

ಏಂಡಿ ಬಲೆಗೆ ಭರಪೂರ ಮೀನು; ತಾಜಾ ಮೀನಿಗಾಗಿ ಮುಗಿ ಬೀಳುತ್ತಿರುವ ಜನ!ಏಂಡಿ ಬಲೆಗೆ ಭರಪೂರ ಮೀನು; ತಾಜಾ ಮೀನಿಗಾಗಿ ಮುಗಿ ಬೀಳುತ್ತಿರುವ ಜನ!

ಈ ಕುರಿತು ಮಾಹಿತಿ ನೀಡಿದ ಎಂಪಿಇಡಿಎ ಅಧ್ಯಕ್ಷ ಡಾ. ಕೆ.ಎನ್.ರಾಘವನ್ ಅವರು, ಈ ಬೃಹತ್ ವೇದಿಕೆಯು ಸಮುದ್ರ ಆಹಾರ ತಯಾರಕರು ಮತ್ತು ಪೂರೈಕೆದಾರರಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತವರ ಸಂಸ್ಕರಣಾ ಯಂತ್ರೋಪಕರಣಗಳು, ಪ್ಯಾಕೇಜಿಂಗ್ ವ್ಯವಸ್ಥೆಗಳು, ಸಂಸ್ಕರಣಾ ಘಟಕಾಂಶದ ವಿತರಕರು ಮತ್ತು ಕೋಲ್ಡ್ ಚೈನ್ ಸಿಸ್ಟಮ್‌ಗಳಿಗೆ ವ್ಯಾಪಾರ ಒಪ್ಪಂದಗಳನ್ನು ಪಡೆಯಲು ಅವಕಾಶ ಕಲ್ಪಿಸುತ್ತದೆ ಎಂದು ತಿಳಿಸಿದರು.

ಹೊಸ ಮಾರ್ಗಗಳು ಶೋಧನೆಗೆ ನೆರವು:

ತರಹೇವಾರಿ ಮೀನು, ಸಿಗಡಿ ಸೇರಿದಂತೆ ಸಮುದ್ರ ಆಹಾರ ಪೂರೈಕೆ, ಸಂಸ್ಕರಣೆ, ಉತ್ಪಾದನೆ ಸೇರಿದಂತೆ ವಿವಿಧ ಅಭಿವೃದ್ಧಿ ಮಾರ್ಗಗಳ ಶೋಧನೆಗೆ ಕೊಲ್ಕತ್ತಾದ ಈ ಪ್ರದರ್ಶನ ದಾರಿಯಾಗಲಿದೆ. ಜಾಗತಿಕ ಮಾರುಕಟ್ಟೆಗೆ ಅಗತ್ಯವಾದ ತಂತ್ರಜ್ಞಾನಗಳು, ಉತ್ಪನ್ನಗಳನ್ನು ಪರಿಚಯಿಸಲು ಬೇಕಾದ ವ್ಯಾಪ್ತಿಯನ್ನು ಇದು ತೆರೆದಿಡಲಿದೆ. ಸಮುದ್ರ ಆಹಾರದ ಪ್ರಾಥಮಿಕ ಉತ್ಪಾದನೆ, ಸಂಸ್ಕರಣೆ ಮತ್ತು ಸಾಗಾಣೆ, ಉತ್ಪನ್ನಗಳ ಸಂಪೂರ್ಣ ಮೌಲ್ಯಯುತ ಸರಪಳಿ ಸೇವೆ, ಉತ್ಪನ್ನಗಳ ಸುಸ್ಥಿರತೆಯಲ್ಲಿ ಭಾರತ ಬದ್ಧತೆ ಸಾಧಿಸಲಿದೆ ಎಂದು ಅವರು ಹೇಳಿದರು.

ಪ್ರದರ್ಶನದಲ್ಲಿ ವಿವಿಧ ತಾಂತ್ರಿಕ ಕಾರ್ಯಾಗಾರ:

ಈ ಕುರಿತು ಪ್ರತಿಕ್ರಿಯಿಸಿದ ಮುದ್ರಾಹಾರ ರಫ್ತುದಾರರ ಸಂಘದ (ಎಸ್‌ಇಎಐ) ರಾಷ್ಟಾಧ್ಯಕ್ಷ ಅಗದೀಶ್ ಫೊಫಾಂಡಿ ಅವರು, 7,000 ಚದರ ಮೀಟರ್‌ನಲ್ಲಿ ನಡೆಯಲಿರುವ ಈ ಪ್ರದರ್ಶನ ಕಾರ್ಯಕ್ರಮದಲ್ಲಿ 350 ಮಳಿಗೆಗೆ ಅವಕಾಶ ನೀಡಲಾಗಿದೆ. ಐಟಿ ನೆರವಿನೊಂದಿಗೆ ಸ್ವಯಂಚಾಲಿತ ಉತ್ಪನ್ನಗಳು ಪ್ರದರ್ಶನಗೊಳ್ಳಲಿವೆ. ಮೌಲ್ಯವರ್ಧನೆಗೆ ಶಕ್ತಿ ಸಾಮರ್ಥ್ಯ ವ್ಯವಸ್ಥೆಗಳ ಪ್ರದರ್ಶನ, ರಫ್ತು ಉತ್ತೇಜಿತ ಕ್ರಮ ತಿಳಿಸುವ ಕೃತಕ ಬುದ್ಧಿಮತ್ತೆ (ಎಐ) ಕುರಿತು ರಾಷ್ಟ ಹಾಗೂ ಅಂತಾರಾಷ್ಟ್ರ ಮಟ್ಟದ ತಜ್ಞರಿಂದ ತಾಂತ್ರಿಕ ಕಾರ್ಯಾಗಾರ ನಡೆಯಲಿವೆ.

Sea food Annual Exhibition for Export, Supply, Processing on 2023

ಭಾರತ ಕಳೆದ 2021-22ರ ಸಾಲಿನಲ್ಲಿ 7.76 ಬಿಲಿಯನ್ ಡಾಲರ್ ಮೌಲ್ಯದ 13,69,264 ಟನ್ ಸಮುದ್ರ ಆಹಾರ ಉತ್ಪನ್ನಗಳನ್ನು ರಫ್ತು ಮಾಡಿತ್ತು. ರಫ್ತಿನ ಮೌಲ್ಯ ಪರಿಶೀಲಿಸಿದರೆ ಇದು ಸಾರ್ವಕಾಲಿಕ ದಾಖಲೆ ಎನ್ನಲಾಗುತ್ತಿದೆ.

ಪ್ರದರ್ಶನ ಮೂಲಕ ಭವಿಷ್ಯದ ಹಲವು ಗುರು ಸಾಧಿಸುವ ಇಂಗಿತ ವ್ಯಕ್ತಪಡಿಸಿದ ಅವರು, ಸುಸ್ಥಿರ ಮೀನುಗಾರಿಕೆ ವಿಧಾನಗಳು, ಮೌಲ್ಯವರ್ಧನೆ ಮತ್ತು ವೈವಿಧ್ಯೀಕರಣದಂತ ಉತ್ಪಾದನೆ ಹಾಗೂ ರಫ್ತಿಗೆ ಅಗತ್ಯವಾದ ಮಹತ್ವಾಕಾಂಕ್ಷೆಯ ಗುರಿ ತಲಪುವ ಚಿಂತನೆಯಲ್ಲಿದ್ದೇವೆ ಎಂದು ಅವರು ಹೇಳಿದರು.

English summary
Sea food Annual Exhibition for Export, Supply, Processing on 2023.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X