ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಮತಾ ಬ್ಯಾನರ್ಜಿ ಹೆಸರು ಬರೆದು ನಿವೃತ್ತ ಐಪಿಎಸ್ ಅಧಿಕಾರಿ ಆತ್ಮಹತ್ಯೆ

|
Google Oneindia Kannada News

ಕೋಲ್ಕತಾ, ಫೆಬ್ರವರಿ 23: ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದ ನಿವೃತ್ತ ಐಪಿಎಸ್ ಅಧಿಕಾರಿ, ತಮ್ಮ ಸಾವಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಕಾರಣ ಎಂದು ಡೆತ್ ನೋಟ್ ಬರೆದಿದ್ದು ಪತ್ತೆಯಾಗಿದೆ.

ಚುನಾವಣೆ ಬಂದಾಗಲೇ ಉಗ್ರರ ದಾಳಿ ನಡೆದಿದ್ದು ಹೇಗೆ?: ಮಮತಾ ಬ್ಯಾನರ್ಜಿ ಮತ್ತೆ ವಿವಾದ ಚುನಾವಣೆ ಬಂದಾಗಲೇ ಉಗ್ರರ ದಾಳಿ ನಡೆದಿದ್ದು ಹೇಗೆ?: ಮಮತಾ ಬ್ಯಾನರ್ಜಿ ಮತ್ತೆ ವಿವಾದ

1986ರ ಬ್ಯಾಚ್‌ನ ಪೊಲೀಸ್ ಅಧಿಕಾರಿಯಾಗಿದ್ದ ಗೌರವ್ ದತ್ ಅವರ ದೇಹ ಮೊಣಕೈ ಕತ್ತರಿಸಿಕೊಂಡ ಸ್ಥಿತಿಯಲ್ಲಿ ಅವರ ಮನೆಯಲ್ಲಿ ಫೆ 19ರಂದು ಪತ್ತೆಯಾಗಿತ್ತು. ಗೌರವ್ ಅವರು ಕಳೆದ ವರ್ಷವಷ್ಟೇ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದರು.

ಮೋದಿ ಸರ್ಕಾರ ಕಿತ್ತೆಸೆಯಲು ಗಾಂಧೀಜಿ ಬಳಿ ದೀದಿ ಪ್ರಾರ್ಥನೆ! ಮೋದಿ ಸರ್ಕಾರ ಕಿತ್ತೆಸೆಯಲು ಗಾಂಧೀಜಿ ಬಳಿ ದೀದಿ ಪ್ರಾರ್ಥನೆ!

'ನನ್ನ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಮೂಲಕ ಮುಖ್ಯಮಂತ್ರಿ ಅವರೇ ನನ್ನ ಸಾವಿಗೆ ನೇರ ಹೊಣೆ' ಎಂದು ಅವರು ಆತ್ಮಹತ್ಯೆ ನೋಟ್‌ನಲ್ಲಿ ಬರೆದಿದ್ದಾರೆ.

retired ips officer committed suicide accusing mamata banerjee for his death

ಮಮತಾ ಬ್ಯಾನರ್ಜಿ ಅವರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿರುವ ಅವರು, ನನ್ನ ಎರಡು ಬಾಕಿ ಪ್ರಕರಣಗಳನ್ನು ಪೂರ್ಣಗೊಳಿಸಲು ಅವರು ನಿರಾಕರಿಸಿದ್ದರು. ಒಂದು ಪ್ರಕರಣದ ಕಡತವನ್ನು ಪಶ್ಚಿಮ ಬಂಗಾಳ ಸರ್ಕಾರ ಉದ್ದೇಶಪೂರ್ವಕವಾಗಿ ಕಳೆದುಹಾಕಿತು. ಎರಡನೆಯ ಪ್ರಕರಣದಲ್ಲಿ ಭ್ರಷ್ಟಾಚಾರ ಪ್ರಕರಣವನ್ನು ಕೈಬಿಡಬಹುದಾಗಿತ್ತು. ಆದರೆ, ಡಿಜಿ ಮನವಿ ಮಾಡಿದ್ದರೂ ಮುಖ್ಯಮಂತ್ರಿ ಅದನ್ನು ನಿರಾಕರಿಸಿದ್ದರು ಎಂದು ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದ ಈಗಿನ ಮುಖ್ಯಮಂತ್ರಿ ನನಗೆ ಹತ್ತು ವರ್ಷಗಳಿಂದ ಕಿರುಕುಳ ನೀಡುತ್ತಿದ್ದಾರೆ. ಅವರ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ ಎಂಬ ಕಾರಣಕ್ಕೆ ನನ್ನನ್ನು ಹತ್ತಿಕ್ಕುವ ಎಲ್ಲ ಪ್ರಯತ್ನಗಳನ್ನೂ ನಡೆಸಿದರು ಎಂದು ಹೇಳಿದ್ದಾರೆ.

ಅಕ್ರಮ ಆಸ್ತಿ ಆರೋಪ: ರಾಬರ್ಟ್ ವಾದ್ರಾ ಬೆಂಬಲಕ್ಕೂ ಬಂದ ಮಮತಾ ಬ್ಯಾನರ್ಜಿಅಕ್ರಮ ಆಸ್ತಿ ಆರೋಪ: ರಾಬರ್ಟ್ ವಾದ್ರಾ ಬೆಂಬಲಕ್ಕೂ ಬಂದ ಮಮತಾ ಬ್ಯಾನರ್ಜಿ

ಗೌರವದಿಂದ ಬದುಕಲು ಸಾಧ್ಯವಾಗದೆ ಇದ್ದರೆ ಗೌರವಯುತವಾಗಿ ಸಾಯುವುದು ಒಳಿತು ಎಂದು ಅವರು ಹೇಳಿಕೊಂಡಿದ್ದಾರೆ.

ಗೌರವ್ ಅವರ ತಂದೆ ಗೋಪಾಲ್ ದತ್, ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರ ಭದ್ರತಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

English summary
A retired IPS officer committed suicide in West Bengal on Thursday. He accused Chief Minister Mamata Banerjee for his death in a note.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X