ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿಗೆ ಮಮತಾ ಬ್ಯಾನರ್ಜಿಯಿಂದ ಮಹಾಮಂಗಳಾರತಿ!

|
Google Oneindia Kannada News

Recommended Video

ಸಿಎಸ್ ಪುಟ್ಟರಾಜು: ಐಟಿ ದಾಳಿ ನಿರೀಕ್ಷಿತ, ಆತಂಕವಿಲ್ಲ, ಹೋರಾಡುವೆ | Oneindia Kannada

ಕೋಲ್ಕತ್ತಾ, ಮಾರ್ಚ್ 28: ಮಹಾಘಟಬಂಧನದ ಪ್ರಧಾನಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಮತಾ ಬ್ಯಾನರ್ಜಿ ಸದಾ ಸುಳ್ಳು ಭರವಸೆ ನೀಡುತ್ತಾರೆ, ಅವರು ಪಶ್ಚಿಮ ಬಂಗಾಳವನ್ನು ತಾವೊಬ್ಬರೇ ಆಳುತ್ತಿದ್ದಾರೆ, ಅವರು ಯಾರ ಮಾತನ್ನೂ, ಸಲಹೆಯನ್ನೂ ಕೇಳುವುದಿಲ್ಲ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಹೇಳಿದ್ದರು.

'ಮಿಷನ್ ಶಕ್ತಿ' ಘೋಷಣೆ ಬಗ್ಗೆ ಮಮತಾ ಬ್ಯಾನರ್ಜಿ ಕಿಡಿಕಿಡಿ'ಮಿಷನ್ ಶಕ್ತಿ' ಘೋಷಣೆ ಬಗ್ಗೆ ಮಮತಾ ಬ್ಯಾನರ್ಜಿ ಕಿಡಿಕಿಡಿ

ಆದರೆ ಈ ಮಾತಿಗೆ ಬ್ಯಾನರ್ಜಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಬುಧವಾರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಅವರು, 'ರಾಹುಲ್ ಗಾಂಧಿ ಚಿಕ್ಕಮಕ್ಕಳ ಹಾಗೆ. ಅವರ ಮಾತಿಗೆಲ್ಲ ನಾನು ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಆದರೆ ಇಂಥ ಮಾತನ್ನು ನಾನು ನೆನಪಿನಲ್ಲಿಟ್ಟುಕೊಂಡಿರುತ್ತೇನೆ' ಎಂದು ಬ್ಯಾನರ್ಜಿ ಹೇಳಿದರು.

Rahul Gandhi is just like a kid says Mamata Banerjee

"ಆತ(ರಾಹುಲ್ ಗಾಂಧಿ) ಮನಸ್ಸಿಗೆ ಬಂದಿದ್ದೆಲ್ಲವನ್ನೂ, ತನಗನ್ನಿಸಿದ್ದೆಲ್ಲವನ್ನೂ ಹೇಳುತ್ತಾರೆ. ಅದಕ್ಕೆಲ್ಲ ಪ್ರತಿಕ್ರಿಯೆ ನೀಡುತ್ತ ಕೂರುವುದಕ್ಕಾಗುತ್ತದೆಯೇ?" ಎಂದು ಬ್ಯಾನರ್ಜಿ ಪ್ರಶ್ನಿಸಿದರು.

ಮೋದಿ ಸುಳ್ಳು ಹೇಳುತ್ತಾರೆ, ಮಮತಾ ಸುಳ್ಳು ಭರವಸೆ ಕೊಡುತ್ತಾರೆ: ರಾಹುಲ್ಮೋದಿ ಸುಳ್ಳು ಹೇಳುತ್ತಾರೆ, ಮಮತಾ ಸುಳ್ಳು ಭರವಸೆ ಕೊಡುತ್ತಾರೆ: ರಾಹುಲ್

ಚುನಾವಣೆ ಹತ್ತಿರ ಬಂದರೂ ಮಹಾಘಟಬಂಧನದ ಬಗ್ಗೆ ಯಾವುದೇ ಸುದ್ದಿ ಇಲ್ಲದಿರುವುದು, ಮಹಾಘಟಬಂಧನದ ನಾಯಕರಲ್ಲಿ ಒಗ್ಗಟ್ಟಿಲ್ಲ ಎಂಬುದರ ಸೂಚನೆ ಎನ್ನಿಸಿದ್ದು, ಈ ಲಾಭವನ್ನು ಬಿಜೆಪಿ ಪಡೆಯಬಹುದು.

English summary
"He is just a kid. What will I say about it?" West Bengal chief minister Mamata banerjee's reaction Rahul gandhi's statement against her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X