India
 • search
 • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾದಿ ವಿರುದ್ಧ ಹೇಳಿಕೆ: ಬಂಗಾಳದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ

|
Google Oneindia Kannada News

ಕೋಲ್ಕತ್ತಾ ಜೂನ್ 10: ಪಶ್ಚಿಮ ಬಂಗಾಳದ ಹೌರಾದ ಉಲುಬೇರಿಯಾ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ಕಚೇರಿಯನ್ನು ಪ್ರತಿಭಟನಾಕಾರರು ಧ್ವಂಸಗೊಳಿಸಿ ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಬಿಜೆಪಿ ನಾಯಕರೊಬ್ಬರು ಸುಟ್ಟ ಪಕ್ಷದ ಕಚೇರಿಯ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ, ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

"ಜನ ಅವರ ( ಮಮತಾ ಬ್ಯಾನರ್ಜಿ) ಮಾತನ್ನು ಆಲಿಸಿ ಮತ್ತು ತಪ್ಪದೆ ಅವರಿಗೆ ಮತ ಹಾಕುವುದರಿಂದ ಅವರು ಕ್ರಮಕ್ಕೆ ಮುಂದಾಗದೇ ಮೌನವಾಗಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಮಧ್ಯಾಹ್ನ ಹೌರಾ ಗ್ರಾಮಾಂತರ ಜಿಲ್ಲೆಯ ಬಿಜೆಪಿ ಕಚೇರಿಯನ್ನು ಧ್ವಂಸಗೊಳಿಸಿದ ಮತ್ತು ಬೆಂಕಿ ಹಚ್ಚಿದ ಈ ಗಲಭೆಕೋರರು ಮತ್ತು ದಂಗೆಕೋರರನ್ನು ಗುರುತಿಸಲು ಮತ್ತು ಬಂಧಿಸಲು ಸಾಧ್ಯವಾಗುತ್ತದೆ. ಆದರೂ ಅವರು ಯಾಕೆ ಮೌನವಾಗಿದ್ದಾರೆ? " ಎಂದು ಅನಿರ್ಬನ್ ಗಂಗೂಲಿ ಟ್ವೀಟ್ ಮಾಡಿದ್ದಾರೆ.

   AAP ಸಚಿವರು ಮಾಡಿದ ಕೆಲಸಕ್ಕೆ ಜನರ ಛೀಮಾರಿ | OneIndia Kannada

   ಸುವೇಂದು ಅಧಿಕಾರಿ ಆರೋಪ

   ಹಿಂಸಾಚಾರವನ್ನು ಟಿಎಂಸಿ ಪ್ರಾಯೋಜಿತ ಗೂಂಡಾಗಳು ನಡೆಸಿದ್ದಾರೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ವಿವಾದಾತ್ಮಕ ಹೇಳಿಕೆಗಳ ವಿರುದ್ಧದ ಪ್ರತಿಭಟನೆಗಳು ಇಂದು ಕಲ್ಲು ತೂರಾಟದೊಂದಿಗೆ ಹಿಂಸಾತ್ಮಕ ತಿರುವು ಪಡೆದುಕೊಂಡಿವೆ. ಹೀಗಾಗಿ ಶುಕ್ರವಾರ ಹೊವಾರ್‌ನಲ್ಲಿ ಬಿಗುವಿನ ವಾತಾವರಣ ಮನೆ ಮಾಡಿದೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಬೇಕಾಯಿತು.

   ಪ್ರತಿಭಟನಾಕಾರರ ಆಕ್ರೋಶ

   ಇದೀಗ ಅಮಾನತುಗೊಂಡಿರುವ ಇಬ್ಬರು ಬಿಜೆಪಿ ನಾಯಕರು ಪ್ರವಾದಿ ಮೊಹಮ್ಮದ್ ವಿರುದ್ಧ ಮಾಡಿದ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ ನೂರಾರು ಪ್ರತಿಭಟನಾಕಾರರು ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ವಿವಿಧ ಭಾಗಗಳಲ್ಲಿ ಶುಕ್ರವಾರ ರಸ್ತೆಗಳು ಮತ್ತು ರೈಲು ಹಳಿಗಳನ್ನು ತಡೆದರು. ಇದರಿಂದಾಗಿ ಹೌರಾ-ಖರಗ್‌ಪುರ ಮಾರ್ಗದ ಚೆಂಗೆಲ್ ನಿಲ್ದಾಣದಲ್ಲಿ ಜನರು ಪ್ರತಿಭಟನೆ ಆರಂಭಿಸಿದ್ದರಿಂದ ಆಗ್ನೇಯ ರೈಲ್ವೆಯ ಸೇವೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.

   ಪ್ರತಿಭಟನಾಕಾರರು ಹೌರಾ-ಖರಗ್‌ಪುರ ವಿಭಾಗದ ಚೆಂಗೈಲ್, ಫುಲೇಶ್ವರ ಮತ್ತು ಸಂತ್ರಗಚಿ ನಿಲ್ದಾಣಗಳಲ್ಲಿ ಮಧ್ಯಾಹ್ನ 1.22 ರಿಂದ ರೈಲು ಹಳಿಗಳನ್ನು ತಡೆದರು ಎಂದು ಆಗ್ನೇಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿಭಟನೆಯಿಂದಾಗಿ ನಾಲ್ಕು ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಎರಡನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ಅವರು ಹೇಳಿದರು. ಗುರುವಾರವೂ ಇದೇ ರೀತಿಯ ಪ್ರತಿಭಟನೆಗಳು ನಡೆದಿದ್ದು, ಹೌರಾ ಜಿಲ್ಲೆಯ ಅಂಕುರ್ಹಾಟಿಯಲ್ಲಿ ಸುಮಾರು 11 ಗಂಟೆಗಳ ಕಾಲ ಚಳವಳಿಗಾರರು ಸಂಚಾರಕ್ಕೆ ಅಡ್ಡಿಪಡಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   ಹೌರಾದಲ್ಲಿ ಘರ್ಷಣೆ

   ಹೌರಾದಲ್ಲಿ ಜೂನ್ 13 ರ ಬೆಳಿಗ್ಗೆ 6 ರವರೆಗೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಪಶ್ಚಿಮ ಬಂಗಾಳ ಸರ್ಕಾರ ಶುಕ್ರವಾರ ಪ್ರಕಟಿಸಿದೆ.

   ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಹೇಳಿ ನೀಡಿ ಇದೀಗ ಅಮಾನತುಗೊಂಡಿರುವ ನಾಯಕ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಮಾಡಿದ ಕಾಮೆಂಟ್‌ಗಳ ವಿರುದ್ಧ ಮುಸ್ಲೀಂ ಸಮುದಾಯವು ಪ್ರತಿಭಟಿಸಿದ್ದು ಇಂದು ಹೌರಾದಲ್ಲಿ ಘರ್ಷಣೆಗಳು ಭುಗಿಲೆದ್ದಿವೆ.

   ಕೇಸರಿ ಪಕ್ಷದ ಇಬ್ಬರು ನಾಯಕರ ಬಂಧನಕ್ಕೆ ಒತ್ತಾಯ

   ಕೇಸರಿ ಪಕ್ಷದ ಇಬ್ಬರು ನಾಯಕರ ಬಂಧನಕ್ಕೆ ಒತ್ತಾಯ

   ಧುಲಾಘರ್, ಪಂಚ್ಲಾ ಮತ್ತು ಉಲುಬೇರಿಯಾದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿಗ್ಬಂಧನವನ್ನು ತೆಗೆದುಹಾಕಲು ಪ್ರಯತ್ನಿಸಿದಾಗ ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಹೇಳಿಕೆಗಳಿಗಾಗಿ ಕೇಸರಿ ಪಕ್ಷದ ಇಬ್ಬರು ನಾಯಕರನ್ನು ತಕ್ಷಣವೇ ಬಂಧಿಸಬೇಕು" ಎಂದು ಪ್ರತಿಭಟನಾಕಾರು ಒತ್ತಾಯಿಸಿದ್ದಾರೆ.

   ಧುಲಾಘರ್ ಮತ್ತು ಪಂಚಲಾದಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು, ಅಲ್ಲಿ ಪ್ರತಿಭಟನಾಕಾರರು ಪ್ರತೀಕಾರವಾಗಿ ಕಲ್ಲು ತೂರಾಟ ನಡೆಸಿದರು, ಇದರಿಂದಾಗಿ ಹತ್ತಿರದ ಕಾರುಗಳಿಗೆ ಹಾನಿಯಾಯಿತು ಎಂದು ಅಧಿಕಾರಿ ಹೇಳಿದರು.

   ಶಾಂತಿ ಕಾಪಾಡುವಂತೆ ಮನವಿ

   ಶಾಂತಿ ಕಾಪಾಡುವಂತೆ ಮನವಿ

   ಅವರು ಪಂಚ್ಲಾ ಮತ್ತು ಧುಲಾಘರ್‌ನಲ್ಲಿ ಟೈರ್‌ಗಳನ್ನು ರಸ್ತೆಯಲ್ಲಿ ಇರಿಸಿ ಬೆಂಕಿ ಹಚ್ಚು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಉಲುಬೇರಿಯಾದಲ್ಲಿ ಪೊಲೀಸ್ ಕಿಯೋಸ್ಕ್‌ಗೆ ಬೆಂಕಿ ಹಚ್ಚಿರುವುದು ಬೆಳಕಿಗೆ ಬಂದಿದೆ. ಈ ನಡುವೆ ರಾಜ್ಯಪಾಲ ಜಗದೀಪ್ ಧಂಖರ್ ಅವರು ಶಾಂತಿಗಾಗಿ ಮನವಿ ಮಾಡಿದ್ದಾರೆ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿಯಿಂದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಬಗ್ಗೆ ತುರ್ತು ನವೀಕರಣವನ್ನು ಕೋರಿದ್ದಾರೆ.

   English summary
   A Bharatiya Janata Party office in Howrah’s Uluberia area was allegedly ransacked and burned by protestors on Friday, June 10.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X