• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಂಗಾಳದಲ್ಲಿ ಮೋದಿ ಗೆಲುವು ಖಚಿತ; ವೈರಲ್ ಆದ ಪ್ರಶಾಂತ್ ಕಿಶೋರ್ ಆಡಿಯೋ ಕ್ಲಿಪ್

|

ನವದೆಹಲಿ, ಏಪ್ರಿಲ್ 10: ಈಚೆಗಷ್ಟೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪರ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ನಡೆಸಿದ್ದ ಆಂತರಿಕ ಸಮೀಕ್ಷೆ ಸೋರಿಕೆಯಾಗಿ ಅದರಲ್ಲಿ ನಂದಿಗ್ರಾಮದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ಎದುರು ಮಮತಾ ಸೋಲು ಅನುಭವಿಸಲಿದ್ದಾರೆ ಎಂದು ಉಲ್ಲೇಖಿಸಿದ್ದ ಚಿತ್ರ ವೈರಲ್ ಆಗಿತ್ತು. ಇದೀಗ ಅಂಥದ್ದೇ ಮತ್ತೊಂದು ಸಂಗತಿ ನಡೆದಿದೆ.

ಈ ಬಾರಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ಟಿಎಂಸಿ ಆಂತರಿಕ ಸಮೀಕ್ಷೆ ಹೇಳುತ್ತಿರುವುದಾಗಿ ಪ್ರಶಾಂತ್ ಕಿಶೋರ್ ಮಾತನಾಡಿರುವ ಆಡಿಯೋವನ್ನು ಬಿಜೆಪಿ ನಾಯಕ ಹಂಚಿಕೊಂಡಿರುವುದು ವೈರಲ್ ಆಗಿದೆ. ಶನಿವಾರ ಬಿಜೆಪಿ ನಾಯಕ ಅಮಿತ್ ಮಾಲ್ವಿಯಾ, ಪ್ರಶಾಂತ್ ಕಿಶೋರ್ ಮಾತನಾಡಿರುವ ಆಡಿಯೋ ಕ್ಲಿಪ್‌ಗಳನ್ನು ಸರಣಿ ಟ್ವೀಟ್‌ ಮಾಡಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡುತ್ತಾ, ಬಂಗಾಳ ಚುನಾವಣೆ ಫಲಿತಾಂಶದ ಕುರಿತು ಪ್ರಶಾಂತ್ ಕಿಶೋರ್ ಚರ್ಚೆ ಮಾಡಿರುವುದಾಗಿ ತಿಳಿದುಬಂದಿದೆ. ಮುಂದೆ ಓದಿ...

ನಂದಿಗ್ರಾಮದಲ್ಲಿ ಮಮತಾ ಸೋಲು ಖಚಿತ ಎಂದರೇ ಪ್ರಶಾಂತ್ ಕಿಶೋರ್?: ಆಂತರಿಕ ಸಮೀಕ್ಷೆ ಸೋರಿಕೆ?

ಪ್ರಶಾಂತ್ ಕಿಶೋರ್ ಚಾಟ್‌ನಲ್ಲಿ ಹೇಳಿದ್ದೇನು?

ಕ್ಲಬ್ ಹೌಸ್‌ನಲ್ಲಿನ ಪಬ್ಲಿಕ್ ಚಾಟ್‌ನಲ್ಲಿ ಪ್ರಶಾಂತ್ ಕಿಶೋರ್, ಟಿಎಂಸಿ ಆಂತರಿಕ ಸಮೀಕ್ಷೆ ಬಿಜೆಪಿ ಗೆಲ್ಲುತ್ತದೆ ಎಂದು ಹೇಳುತ್ತಿದೆ. ಮೋದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಮತ ಬೀಳುತ್ತದೆ. ಧ್ರುವೀಕರಣ ವಾಸ್ತವವಾಗಿದೆ. ಪರಿಶಿಷ್ಟ ಜಾತಿ (ಪಶ್ಚಿಮ ಬಂಗಾಳದ 27%) ಹಾಗೂ ಮತುವಾ ಜನಾಂಗದವರೆಲ್ಲರೂ ಬಿಜೆಪಿಗೆ ಮತ ಹಾಕುತ್ತಾರೆ ಎಂದು ಪ್ರಶಾಂತ್ ಕಿಶೋರ್ ಹೇಳಿರುವುದಾಗಿ ಅಮಿತ್ ಮಾಲ್ವಿಯಾ ಆಡಿಯೋ ಕ್ಲಿಪ್ ಒಂದನ್ನು ಟ್ವೀಟ್ ಮಾಡಿದ್ದಾರೆ.

"ಬಂಗಾಳದಲ್ಲಿ ಮೋದಿ ಪ್ರಸಿದ್ಧಿ"

ಮಾಲ್ವಿಯಾ ಅವರು ಹಂಚಿಕೊಂಡಿರುವ ಈ ಆಡಿಯೋ ಕ್ಲಿಪ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದಲ್ಲಿ ಜನಪ್ರಿಯರಾಗಿದ್ದಾರೆ. ಇಡೀ ದೇಶದಲ್ಲಿ ಮೋದಿ ಸುತ್ತ ಆರಾಧಕರಿದ್ದಾರೆ. ಟಿಎಂಸಿಗೆ ಈ ಬಾರಿ ವಿರೋಧ ವ್ಯಕ್ತವಾಗಿದೆ. ಧ್ರುವೀಕರಣ ವಾಸ್ತವ ಎನಿಸುತ್ತಿದೆ ಎಂದು ಪ್ರಶಾಂತ್ ಹೇಳಿರುವುದಾಗಿ ತಿಳಿದುಬಂದಿದೆ. ಪರಿಶಿಷ್ಟ ಜಾತಿಯ ಮತಗಳು ಈ ಬಾರಿ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂದು ಅವರು ಹೇಳಿರುವುದಾಗಿ ತಿಳಿದುಬಂದಿದೆ.

ಬರೀ ಮಾತು ಬಿಡಿ, ಮೊದಲು ಚುನಾವಣೆ ಗೆದ್ದು ನೋಡಿ; ಬಿಜೆಪಿಗೆ ಪ್ರಶಾಂತ್ ಹೊಸ ಸವಾಲು

 ಪ್ರಶಾಂತ್ ಕಿಶೋರ್ ಪ್ರತಿಕ್ರಿಯೆ ಏನು?

ಪ್ರಶಾಂತ್ ಕಿಶೋರ್ ಪ್ರತಿಕ್ರಿಯೆ ಏನು?

ಬಿಜೆಪಿ ಮುಖಂಡರೊಬ್ಬರು ಚಾಟ್ ಹಂಚಿಕೊಂಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಶಾಂತ್ ಕಿಶೋರ್, "ನನ್ನ ಕ್ಲಬ್ ಹೌಸ್ ಚಾಟ್ ಅನ್ನು ಬಿಜೆಪಿಯವರು ಇಷ್ಟು ಗಂಭೀರವಾಗಿ ತೆಗೆದುಕೊಂಡಿರುವುದಕ್ಕೆ ಖುಷಿಯಾಗುತ್ತಿದೆ. ತಮ್ಮ ನಾಯಕರ ಮಾತನ್ನೇ ಅವರು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಹೀಗಿದ್ದಾಗ ನನ್ನ ಮಾತನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಆದರೆ ಬರೀ ಆಯ್ಕೆ ಮಾಡಿದ ಆಡಿಯೋ ಕ್ಲಿಪ್ ಅಷ್ಟನ್ನೇ ಬಿಡುಗಡೆ ಮಾಡಿದ್ದಾರೆ. ಇದರ ಸಂಪೂರ್ಣ ಮಾತುಕತೆಯನ್ನು ಬಿಡುಗಡೆ ಮಾಡಲಿ ಎಂದು ಹೇಳಿದ್ದಾರೆ.

 ಈ ಮುನ್ನವೂ ಆಂತರಿಕ ಸಮೀಕ್ಷೆ ಸೋರಿಕೆ

ಈ ಮುನ್ನವೂ ಆಂತರಿಕ ಸಮೀಕ್ಷೆ ಸೋರಿಕೆ

ಏಪ್ರಿಲ್ 1ರಂದು ಎರಡನೆಯ ಹಂತದ ಚುನಾವಣೆಯಲ್ಲಿ 30 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಹಂತದ ಚುನಾವಣೆಯಲ್ಲಿ ಬಿಜೆಪಿ 23 ಸೀಟುಗಳಲ್ಲಿ ಜಯಗಳಿಸಿದರೆ, ಟಿಎಂಸಿ ಕೇವಲ ಐದು ಸೀಟುಗಳಿಗೆ ಸೀಮಿತವಾಗಲಿದೆ. ಅಲ್ಲದೆ, ನಂದಿಗ್ರಾಮದಲ್ಲಿ ಮಮತಾ ಸೋಲು ಅನುಭವಿಸಲಿದ್ದಾರೆ ಎಂದು ಟಿಎಂಸಿ ಆಂತರಿಕ ಸಮೀಕ್ಷೆ ತಿಳಿಸಿದ್ದ ಚಿತ್ರ ಮಾರ್ಚ್ 31ರಂದು ವೈರಲ್ ಆಗಿತ್ತು. ಆದರೆ ಇದರ ಅಧಿಕೃತತೆ ಇದುವರೆಗೂ ದೃಢಪಟ್ಟಿಲ್ಲ.

 ಬಿಜೆಪಿಗೆ ಸವಾಲು ಹಾಕಿರುವ ಪ್ರಶಾಂತ್

ಬಿಜೆಪಿಗೆ ಸವಾಲು ಹಾಕಿರುವ ಪ್ರಶಾಂತ್

'ಇತರೆ ರಾಜ್ಯಗಳಿಗಿಂತ ಬಂಗಾಳದಲ್ಲಿನ ರಾಜಕೀಯ ವಿಭಿನ್ನ. ಆದರೆ ಕಳೆದ 30-35 ವರ್ಷಗಳಿಗಿಂತ ಈ ಬಾರಿಯ ಚುನಾವಣೆ ವಿಶಿಷ್ಟವಾಗಿದೆ. ಬಂಗಾಳದಲ್ಲಿ ಎಂದಿಗೂ ಆಡಳಿತಾರೂಢ ಪಕ್ಷಕ್ಕೆ ಕೇಂದ್ರದಲ್ಲಿನ ಅಡಳಿತ ಪಕ್ಷ ಸವಾಲು ಹಾಕಿದ್ದೇ ಇಲ್ಲ. ಎಡಪಕ್ಷಗಳು ಆಡಳಿತ ನಡೆಸುತ್ತಿದ್ದಾಗ ಅದಕ್ಕೆ ಕಾಂಗ್ರೆಸ್ ಸವಾಲೊಡ್ಡಿರಲಿಲ್ಲ. ಇದೇ ಮೊದಲ ಬಾರಿ ಪ್ರಾದೇಶಿಕ ಪಕ್ಷಕ್ಕೆ ರಾಷ್ಟ್ರೀಯ ಪಕ್ಷ ಸವಾಲು ಹಾಕಿದೆ. ಆದರೆ ಅದಕ್ಕೆ ಗೆಲ್ಲಲು ಸಾಧ್ಯವೇ ಇಲ್ಲ. ನೂರಂಕಿ ದಾಟಲು ಅವರು ಹೆಣಗಾಡುವುದು ಖಚಿತ. ಈ ಹೇಳಿಕೆಗೆ ನಾನು ಬದ್ಧ. ಒಂದು ವೇಳೆ ಅವರು ಅದನ್ನು ಸಾಧಿಸಿದರೆ ನಾನು ಯಾರಿಗೂ ರಾಜಕೀಯ ನೆರವು ನೀಡುವುದಿಲ್ಲ. ಈ ಕ್ಷೇತ್ರವನ್ನು ನಾನು ತ್ಯಜಿಸುತ್ತೇನೆ' ಎಂದು ಪ್ರಶಾಂತ್ ಪುನರುಚ್ಚರಿಸಿದ್ದರು.

English summary
TMC survey shows BJP winning Bengal polls, PM Modi hugely popular; Prashant Kishor's audio clip stirs row ahead of west bengal assembly election 2021,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X