ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ರಾಜಕೀಯ ನಾಟಕ" ಶುರುವಾಯ್ತು; ಮಮತಾ ಬ್ಯಾನರ್ಜಿ ಆರೋಪಕ್ಕೆ ಬಿಜೆಪಿ ಟೀಕೆ

|
Google Oneindia Kannada News

ಕೋಲ್ಕತ್ತಾ, ಮಾರ್ಚ್ 11: ಮಾರ್ಚ್ 27ರಂದು ಆರಂಭವಾಗಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಬುಧವಾರ ನಂದಿಗ್ರಾಮ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ದಿನ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಬಿಜೆಪಿ ಹಾಗೂ ಟಿಎಂಸಿ ನಡುವೆ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿವೆ.

ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ ಆರೋಪದಲ್ಲಿ ಎರಡೂ ಪಕ್ಷಗಳು ಚುನಾವಣಾ ಆಯೋಗದ ಮೆಟ್ಟಿಲೇರಿವೆ. ಬುಧವಾರ ನಾಮಪತ್ರ ಸಲ್ಲಿಸಿ, ಬಿರುಲಿಯಾ ಬಜಾರ್‌ನಲ್ಲಿ ಮಮತಾ ಬ್ಯಾನರ್ಜಿ ಸ್ಥಳೀಯರೊಂದಿಗೆ ಮಾತುಕತೆ ನಡೆಸುವಾಗ ದುಷ್ಕರ್ಮಿಗಳು ತಳ್ಳಿದ್ದು, ಅವರ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಟಿಎಂಸಿ ಸದಸ್ಯರು ದೂರುತ್ತಿದ್ದರೆ, ಇದು ನಾಟಕ. ಚುನಾವಣೆ ಸಮೀಪಿಸುತ್ತಿರುವುದರಿಂದ ಜನರ ಕರುಣೆ ಗಿಟ್ಟಿಸಿಕೊಳ್ಳಲು ಮಮತಾ ಬ್ಯಾನರ್ಜಿ ಈ ನಾಟಕವಾಡುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. ಮುಂದೆ ಓದಿ...

 ಬಿಜೆಪಿಯಿಂದ ಮಮತಾ ವಿರುದ್ಧ ದೂರು

ಬಿಜೆಪಿಯಿಂದ ಮಮತಾ ವಿರುದ್ಧ ದೂರು

ಸಿಎಂ ಮಮತಾ ಬ್ಯಾನರ್ಜಿ, ಆಕಸ್ಮಿಕ ಘಟನೆಯೊಂದನ್ನೇ ಇಟ್ಟುಕೊಂಡು, ತಮ್ಮ ಮೇಲೆ ಬಿಜೆಪಿ ಕಡೆಯಿಂದ ದಾಳಿ ನಡೆದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಬಿಜೆಪಿ ನಿಯೋಗ ತಿಳಿಸಿದೆ. ಮಮತಾ ಬ್ಯಾನರ್ಜಿ ಆರೋಪದ ವಿರುದ್ಧ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದೆ. ಆಕಸ್ಮಿಕವಾಗಿ ನಾಲ್ಕೈದು ಮಂದಿ ಅವರನ್ನು ತಳ್ಳಿರಬಹುದು. ಅದೇ ಸಮಯಕ್ಕೆ ಅವರ ಕಾರಿನ ಬಾಗಿಲು ಮುಚ್ಚಿ ಗಾಯವಾಗಿದೆ. ಆದರೆ ಇದನ್ನೇ ಇಟ್ಟುಕೊಂಡು ಬಿಜೆಪಿ ದಾಳಿ ನಡೆಸಿರುವ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಮಮತಾ ಮೇಲೆ ಹಲ್ಲೆಯೇ ನಡೆದಿಲ್ಲ: ಪ್ರತ್ಯಕ್ಷದರ್ಶಿಗಳ ಹೇಳಿಕೆಮಮತಾ ಮೇಲೆ ಹಲ್ಲೆಯೇ ನಡೆದಿಲ್ಲ: ಪ್ರತ್ಯಕ್ಷದರ್ಶಿಗಳ ಹೇಳಿಕೆ

 ಮಮತಾ ಸೇರಿದ್ದ ಆಸ್ಪತ್ರೆಗೆ ಬಿಜೆಪಿ ಮುಖಂಡರು

ಮಮತಾ ಸೇರಿದ್ದ ಆಸ್ಪತ್ರೆಗೆ ಬಿಜೆಪಿ ಮುಖಂಡರು

ಮಮತಾ ಬ್ಯಾನರ್ಜಿಯವರ ಎಡಗಾಲಿಗೆ, ಭುಜ ಹಾಗೂ ಕುತ್ತಿಗೆಗೆ ಪೆಟ್ಟಾಗಿದ್ದು ಅವರನ್ನು ಕೋಲ್ಕತ್ತಾದ ಎಸ್ಎಸ್ ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ತ್ರಿಪುರ ಹಾಗೂ ಮೇಘಾಲಯದ ಮಾಜಿ ಗವರ್ನರ್ ತತಾಗತ ರಾಯ್, ರಾಜ್ಯ ಬಿಜೆಪಿ ವಕ್ತಾರ ಸಮಿಕ್ ಭಟ್ಟಾಚಾರ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆದರೆ ಕೆಲವು ವೈದ್ಯಕೀಯ ಕಾರಣಗಳಿಂದ ಮಮತಾ ಬ್ಯಾನರ್ಜಿಯವರ ಭೇಟಿಗೆ ಅವಕಾಶ ನೀಡಲಾಗಿಲ್ಲ.

ನಿಮ್ಮ ದನಿಯಾಗಿ ದೀದಿ ಎಂದಿಗೂ ಇರುತ್ತಾರೆ; ಟಿಎಂಸಿ

ಇದೆಲ್ಲಾ ರಾಜಕೀಯ ನಾಟಕ ಎಂದು ಬಿಜೆಪಿ ಆರೋಪಿಸುತ್ತಿದ್ದಂತೆ ಟಿಎಂಸಿ ತಿರುಗೇಟು ನೀಡಿದೆ. ಮಮತಾ ಬ್ಯಾನರ್ಜಿ ಅವರ ದನಿ ಹತ್ತಿಕ್ಕುವ ಪ್ರಯತ್ನ ಇದೇ ಮೊದಲೇನಲ್ಲ ಎಂದು ಟೀಕಿಸಿದೆ. ಮಮತಾ ಬ್ಯಾನರ್ಜಿ ದನಿ ಹತ್ತಿಕ್ಕುವ ಪ್ರಯತ್ನ ಮುಂಚಿನಿಂದಲೂ ನಡೆಯುತ್ತಲೇ ಇದೆ. ಈ ಹಿಂದೆಯೂ ರೈತರ ಪರ ನಿಂತ ಕಾರಣಕ್ಕೆ ಅವರ ಮೇಲೆ ದಾಳಿ ನಡೆದಿತ್ತು. ಆದರೆ ಅವರ ಸಂಕಲ್ಪವನ್ನು ಯಾರೂ ಮುರಿಯಲು ಸಾಧ್ಯವಿಲ್ಲ. ಮಮತಾ ಬ್ಯಾನರ್ಜಿ ನಿಮ್ಮ ಗಟ್ಟಿ ದನಿಯಾಗಿ ಎಂದಿಗೂ ಇರಲಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ತೃಣಮೂಲ ಕಾಂಗ್ರೆಸ್ ಹೇಳಿಕೆ ಬಿಡುಗಡೆ ಮಾಡಿದೆ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಇರುವ ಜನ ಬೆಂಬಲ ನೋಡಿ ಈ ದಾಳಿ ನಡೆಸಲಾಗಿದೆ ಎಂದು ದೂರಿದೆ. ಚುನಾವಣಾ ಪ್ರಣಾಳಿಕೆ ಬಿಡುಗಡೆಯನ್ನು ಮುಂದೂಡಿದೆ.

ಸಿಎಂ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ: ವರದಿ ಕೋರಿದ ಚುನಾವಣಾ ಆಯೋಗಸಿಎಂ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ: ವರದಿ ಕೋರಿದ ಚುನಾವಣಾ ಆಯೋಗ

 ಪ್ರಕರಣ ದಾಖಲಿಸಿಕೊಂಡ ಪಶ್ಚಿಮ ಬಂಗಾಳ ಪೊಲೀಸರು

ಪ್ರಕರಣ ದಾಖಲಿಸಿಕೊಂಡ ಪಶ್ಚಿಮ ಬಂಗಾಳ ಪೊಲೀಸರು

ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ವರದಿ ಕೋರಿತ್ತು. ಈ ಸಂಬಂಧ ಟಿಎಂಸಿ ಮುಖಂಡ ಶೇಕ್ ಸೂಫಿಯನ್ ದೂರು ನೀಡಿದ್ದು, ಪಶ್ಚಿಮ ಬಂಗಾಳ ಪೊಲೀಸರು ಗುರುವಾರ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 341 ಹಾಗೂ 323ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದುಬಂದಿದೆ.

English summary
BJP termed West Bengal CM Mamata Banerjee allegations of attack as a "political drama" to gain sympathy ahead of the assembly polls
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X