• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಗಾಯ, ಮಮತಾ ಹೊಸ ಹಿಟ್ಲರ್ ಎಂದ ಸೂರ್ಯ

|
Google Oneindia Kannada News

ಕೋಲ್ಕತಾ, ಏ. 27: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಯನ್ನು ಪೊಲೀಸರು ಬಲವಂತವಾಗಿ ನಿಲ್ಲಿಸಲು ಪ್ರಯತ್ನಿಸಿದ ಘಟನೆ ನಡೆದಿದೆ. ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಹಾಗು ಬಂಗಾಳ ಬಿಜೆಪಿ ಅಧ್ಯಕ್ಷ ಸುಕಂತಾ ಮಜುಮ್ದಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಬಿಕಾಶ್ ಭವನ್ ಬಳಿ ಮೆರವಣಿಗೆ ಸಾಗುತ್ತಿರುವಂತೆಯೇ ಪೊಲೀಸರು ಜಲಫಿರಂಗಿಗಳನ್ನ ಪ್ರಯೋಗಿಸಿ ಗುಂಪನ್ನು ಚದುರಿಸಲು ಯತ್ನಿಸಿದರು. ಈ ವೇಳೆ ಕೆಲವರಿಗೆ ಗಾಯಗಳಾಗಿರುವ ವರದಿಗಳಿವೆ.

ಶಿಕ್ಷಕರ ನೇಮಕಾತಿ ಹಗರಣ ಸೇರಿದಂತೆ ಹಲವು ವಿಚಾರಗಳನ್ನ ಇಟ್ಟುಕೊಂಡು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರಕಾರದ ವಿರುದ್ಧ ಬಿಜೆಪಿ ನಿನ್ನೆ ಪ್ರತಿಭಟನಾ ರ್‍ಯಾಲಿ ಕೈಗೊಂಡಿತ್ತು. ಈ ವೇಳೆ ಪ್ರತಿಭಟನೆಯನ್ನು ನಿಲ್ಲಿಸಲು ಪೊಲೀಸರು ಜಲಫಿರಂಗಿ ಮತ್ತು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

 ದೆಹಲಿ ಸಿಎಂ ಕೇಜ್ರಿವಾಲ್‌ ನಿವಾಸದ ಮೇಲಿನ ದಾಳಿ ಪ್ರಕರಣ, ಸಂಸದ ತೇಜಸ್ವಿ ಸೂರ್ಯಗೆ ನೋಟಿಸ್‌ ದೆಹಲಿ ಸಿಎಂ ಕೇಜ್ರಿವಾಲ್‌ ನಿವಾಸದ ಮೇಲಿನ ದಾಳಿ ಪ್ರಕರಣ, ಸಂಸದ ತೇಜಸ್ವಿ ಸೂರ್ಯಗೆ ನೋಟಿಸ್‌

ಪ್ರತಿಭಟನೆಯ ನೇತೃತ್ವ ವಹಿಸಿದ್ದ ತೇಜಸ್ವಿ ಸೂರ್ಯ ರಾಜ್ಯ ಸರಕಾರ ಮತ್ತು ಪೊಲೀಸರ ವಿರುದ್ಧ ಕಿಡಿಕಾರಿದ್ದು, ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಹಿಟ್ಲರ್ ಎಂದು ಬಣ್ಣಿಸಿದ್ದಾರೆ.

"ಇದು ಸರ್ವಾಧಿಕಾರಿ ಸರಕಾರ. ಮಮತಾ ಬ್ಯಾನರ್ಜಿ ಹಿಟ್ಲರ್ ಆಗಿದ್ದಾರೆ. ನಮ್ಮ ಸಂವಿಧಾನದ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ. ನಾವು ಶಾಂತಿಯುತವಾಗಿ ಬಿಕಾಶ್ ಭವನ್‌ಗೆ ಪ್ರತಿಭಟನೆ ನಡೆಸಿದ್ದೆವು. ಅದು ನಮ್ಮ ಸಂವಿಧಾನಿಕ ಹಕ್ಕು. ಈ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ" ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರೂ ಆಗಿರುವ ತೇಜಸ್ವಿ ಸೂರ್ಯ ಹೇಳಿದರೆಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬಂಗಾಳದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ, ರಾಜಕೀಯ ಮೇಲಾಟ ನಡೆಯುತ್ತಿದೆ. ಇಲ್ಲಿ ಶಿಕ್ಷಕರ ನೇಮಕಾತಿಯಲ್ಲೂ ರಾಜಕೀಯ ಮತ್ತು ಸ್ವಜನಪಕ್ಷಪಾತಿತನ ನಡೆದಿದೆ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಆರೋಪಿಸಿದ್ದಾರೆ.

"ಸ್ವಾಮಿ ವಿವೇಕಾನಂದ, ರವೀಂದ್ರನಾಥ್ ಠಾಗೂರ್ ಅವರಿಗೆ ಜನ್ಮವಿತ್ತ ಈ ನಾಡು ಶಿಕ್ಷಣ ಕ್ಷೇತ್ರದಲ್ಲಿ ದೇಶಕ್ಕೇ ಮಾದರಿಯಾಗಿತ್ತು, ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿತ್ತು. ಈಗ ಈ ರಾಜ್ಯದ ಶಿಕ್ಷಣ ವ್ಯವಸ್ಥೆ ಇಂಥ ದುರ್ಗತಿಗೆ ಬಂದಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ರಾಜಕೀಯ ಮತ್ತು ಭ್ರಷ್ಟಾಚಾರ ಸೇರಿಕೊಂಡಿರುವುದರ ವಿರುದ್ಧ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸುತ್ತಿದೆ" ಎಂದು ನಿನ್ನೆ ಎಎನ್‌ಐ ಸುದ್ದಿಸಂಸ್ಥೆಗೆ ತೇಜಸ್ವಿ ಸೂರ್ಯ ಹೇಳಿದ್ದಾರೆ.

Tejasvi Surya slams Mamata Banerjee after BJP protest faced water cannons in kolkata

"ವಿಕಾಸ್ ಭವನ್‌ಗೆ ಹೋಗಿ ಘೇರಾವ್ ಮಾಡಿ ನಮ್ಮ ಹಕ್ಕನ್ನು ಕೇಳುವುದು ನಮ್ಮ ಉದ್ದೇಶವಾಗಿತ್ತು. ಆದರೆ ಇಲ್ಲಿಯ ಪೊಲೀಸರು ಟಿಎಂಸಿ ಜನರು. ಅವರು ಸಂವಿಧಾನದ ಪ್ರಕಾರ ಕೆಲಸ ಮಾಡುವುದಿಲ್ಲ. ಅವರು ಅವರ ಕೆಲಸ ಮಾಡುತ್ತಾರೆ, ನಾವು ನಮ್ಮ ಕೆಲಸ ಮಾಡುತ್ತೇವೆ" ಎಂದು ತೇಜಸ್ವಿ ಸೂರ್ಯ ಹೇಳಿ ಈ ಪ್ರತಿಭಟನೆ ಮುಂದುವರಿಸುವ ಸುಳಿವು ನೀಡಿದ್ದಾರೆ.

'ಬಂಧಿಸಿ ಎಂದರೂ ಕೇಳದೆ ಲಾಠಿ ಪ್ರಹಾರ ಮಾಡಿದರು':
ನಿನ್ನೆ ಬಿಜೆಪಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಮತ್ತೊಬ್ಬ ನಾಯಕ ಹಾಗು ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಮ್ದಾರ್ ಅವರು ಮಮತಾ ಬ್ಯಾನರ್ಜಿಯಿಂದ ಪ್ರಜಾತಂತ್ರ ವ್ಯವಸ್ಥೆಯ ಕಗ್ಗೊಲೆಯಾಗಿದೆ ಎಂದು ಸಿಡಿಗುಟ್ಟಿದ್ದಾರೆ. ಹೆಂಗಸರೆಂದೂ ನೋಡದೇ ಪೊಲೀಸರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.

"ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಕೊಂದಿದ್ದಾರೆ. ನಮ್ಮನ್ನು ಬಂಧಿಸಿ ಅಥವಾ ವಶಕ್ಕೆ ಪಡೆಯಿರಿ, ಆದರೆ ಲಾಠಿ ಪ್ರಹಾರ ಮಾಡಬೇಡಿ ಎಂದು ಪೊಲೀಸರಿಗೆ ಕೇಳಿಕೊಂಡೆವು. ಆದರೂ ನಮ್ಮ ಮಾತನ್ನು ಕೇಳಲಿಲ್ಲ. ಪುರುಷ ಪೊಲೀಸರು ನಮ್ಮ ಕಾರ್ಯಕರ್ತೆಯರ ಮೇಲೆ ದಾಳಿ ಮಾಡಿದರು. ನಮ್ಮ ನಾಲ್ವರು ಕಾರ್ಯಕರ್ತರಿಗೆ ಆಸ್ಪತ್ರೆಗೆ ಸೇರಿಸುವಷ್ಟು ಗಾಯವಾಗಿದೆ" ಎಂದು ಸುಕಾಂತ ಮಜುಮ್ದಾರ್ ಹೇಳಿದ್ದಾರೆ.

 ಹಿಂದೂ ಹಬ್ಬಗಳ ಆಚರಣೆಯನ್ನ ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಿ : ಸಂಸದೆ ಪ್ರಗ್ಯಾ ಸಿಂಗ್ ಹಿಂದೂ ಹಬ್ಬಗಳ ಆಚರಣೆಯನ್ನ ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಿ : ಸಂಸದೆ ಪ್ರಗ್ಯಾ ಸಿಂಗ್

ಮಮತಾ ಹಿಟ್ಲರ್ ಫೋಟೋಕಾಪಿ ಎಂದ ಬಂಗಾಳ ಬಿಜೆಪಿ ನಾಯಕ:
"ಮಮತಾ ಬ್ಯಾನರ್ಜಿ ಒಬ್ಬ ಫ್ಯಾಸಿಸ್ಟ್ ಆಗಿದ್ಧಾರೆ. ಹಿಟ್ಲರ್‌ನ ಫೋಟೋಕಾಪಿ ಅವರು. ಬಂಗಾಳದ ಪೊಲೀಸರಿಗೆ ಬಿಜೆಪಿಯನ್ನ ತಡೆಯುವುದು ಬಿಟ್ಟರೆ ಬೇರೆ ಕೆಲಸವೇ ಇಲ್ಲ" ಎಂದು ಪಶ್ಚಿಮ ಬಂಗಾಳ ಘಟಕದ ಬಿಜೆಪಿ ಅಧ್ಯಕ್ಷರು ಕೆಂಡಕಾರಿದ್ದಾರೆ.
ಇನ್ನು, ಬಂಗಾಳ ಮುಖ್ಯಮಂತ್ರಿಯನ್ನು ಇನ್ನಷ್ಟು ತರಾಟೆಗೆ ತೆಗೆದುಕೊಂಡ ಸುಕಾಂತ, "ರೇಪ್ ಆದ ಮಹಿಳೆ ಗರ್ಭಿಣಿಯಾಗಿದ್ದಳು, ಅನೈತಿಕ ಸಂಬಂಧ ಹೊಂದಿದ್ದರು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಒಬ್ಬ ಮಹಿಳೆಯಾಗಿ ಅವರು ಈ ಮಾತುಗಳನ್ನ ಹೇಗೆ ಆಡುತ್ತಾರೆ" ಎಂದು ಪ್ರಶ್ನೆ ಮಾಡಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Water cannon was used by West Bengal Police to disperse a protest rally of BJP workers in Kolkata. Led by Tejasvi Surya, the protest rally was carried out towards Bikash Bhawan in the city against the CM Mamata Banerjee-led WB government on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X