ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲ್ಕತ್ತಾ ಪೊಲೀಸರ ಶ್ವಾನದಳಕ್ಕೆ ದುರ್ಗಾ ಪೂಜೆಯಲ್ಲಿ ವಿಶೇಷ ಸ್ಥಾನ!

|
Google Oneindia Kannada News

ಕೋಲ್ಕತ್ತಾ, ಸೆ. 26; ಕೋಲ್ಕತ್ತಾ ತುಂಬಾ ಈಗ ದುರ್ಗಾ ಪೂಜೆಯದ್ದೇ ಸದ್ದು, ಈಗ ಎಲ್ಲೆಲ್ಲೂ ದುರ್ಗಾ ದೇವಿಯ ದರ್ಶನವಾಗೋದು ವಿಶೇಷವೇ ಸರಿ. ಆದರೆ, ಈ ಬಾರಿ ಕೋಲ್ಕತ್ತಾ ಪೊಲೀಸರ ಶ್ವಾನದಳದ ನಾಲ್ವರ ತಂಡವು ರಾಜ್ಯದ ಪ್ರಥಮ ಸಾಕುಪ್ರಾಣಿ ಸ್ನೇಹಿ ದುರ್ಗಾ ಪೂಜೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದಾರೆ.

ಈ ವಿಶೇಷ ಪೆಂಡಾಲ್‌ನಲ್ಲಿ ದುರ್ಗಾ ಮಾತೆಯ ಮುಂದೆ ನಾಯಿಗಳು ಭಕ್ತಿಯಿಂದ ಕುಳಿತಿರುವ ಮೂರ್ತಿಗಳಿವೆ. ಈ ವಿಷಯದ ಹಲವಾರು ಚಿತ್ರಗಳನ್ನು ಪೊಲೀಸರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಅಕ್ಟೋಬರ್ 1 ರಿಂದ ಬೆಂಗಳೂರಿನ ಹೆಬ್ಬಾಳದಲ್ಲಿ ದುರ್ಗಾಪೂಜೆ ಮಹೋತ್ಸವ ಸಂಭ್ರಮಅಕ್ಟೋಬರ್ 1 ರಿಂದ ಬೆಂಗಳೂರಿನ ಹೆಬ್ಬಾಳದಲ್ಲಿ ದುರ್ಗಾಪೂಜೆ ಮಹೋತ್ಸವ ಸಂಭ್ರಮ

ಒಂದು ಫೋಟೋದಲ್ಲಿ, ದುರ್ಗಾ ದೇವಿಯ ಪಾದದ ಬಳಿ ಎರಡು ನಾಯಿಗಳ ಪತ್ರಿಮೆಗಳನ್ನು ನಾವು ನೋಡಬಹುದು. ಇನ್ನೊಂದು ಚಿತ್ರದಲ್ಲಿ, ನಾಲ್ಕು ವಿಶೇಷ ಮುಖ್ಯ ಅತಿಥಿಗಳಾಗಿ ಎರಡು ಲ್ಯಾಬ್ರಡಾರ್‌ಗಳು ಮತ್ತು ಎರಡು ಜರ್ಮನ್ ಶೆಫರ್ಡ್‌ಗಳು ಫೋಟೋಗೆ ಫೋಸ್ ನೀಡಿವೆ.

Kolkata Police Dogs As Chief Guests At Durga Puja Pandal

ಪೆಂಡಾಲ್‌ನಲ್ಲಿ ಒಂದು ಕಲಾಕೃತಿಯಿದ್ದು, ಇದರಲ್ಲಿ ನಾಯಿಮರಿಗಳು ರಸ್ತೆಬದಿಯಲ್ಲಿ ಅಡ್ಡಾಡುತ್ತಿರುವಾಗ ಅಸುರನೊಬ್ಬ ಬೈಕಿನಲ್ಲಿ ವೇಗವಾಗಿ ಹೋಗುತ್ತಿರುವುದನ್ನು ಚಿತ್ರಿಸಲಾಗಿದೆ.

ಪೋಲೀಸರ ಪ್ರಕಾರ, ಸಾಕುಪ್ರಾಣಿ ಸ್ನೇಹಿ ದುರ್ಗಾಪೂಜಾ ಪೆಂಡಾಲ್‌ನಲ್ಲಿ ಬಿಧಾನ್ ಸರನಿ ಅಟ್ಲಾಸ್ ಕ್ಲಬ್‌ನವರು ಮಾಡಿದ್ದಾರೆ.ಇನ್ನು, ಕೊಲ್ಕತ್ತಾ ಪೊಲೀಸ್ ಶ್ವಾನದಳ ದುರ್ಗಾ ಪೂಜೆಯಲ್ಲಿ ಭಾಗವಹಿಸಿದ್ದು ಇದೇ ಮೊದಲು.

Kolkata Police Dogs As Chief Guests At Durga Puja Pandal

"ಮಹಾಲಯದ ಸಂಜೆ ನಮ್ಮ ಶ್ವಾನದಳದ ನಾಲ್ವರು ಸದಸ್ಯರಾದ, ಲ್ಯಾಬ್ರಡಾರ್ಸ್ ಮೋಲಿ ಮತ್ತು ಕ್ಯಾಂಪೋರ್ ಮತ್ತು ಜರ್ಮನ್ ಶೆಫರ್ಡ್ಸ್ ಲಿಜಾ ಮತ್ತು ಡಿಂಕಿ ಕೋಲ್ಕತ್ತಾದ ಮೊದಲ ಸಾಕುಪ್ರಾಣಿ ಸ್ನೇಹಿ ದುರ್ಗಾ ಪೂಜೆಯ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಕಾಣಿಸಿಕೊಂಡಿದ್ದಾರೆ" ಎಂದು ಕೋಲ್ಕತ್ತಾ ಪೊಲೀಸರ ಅಧಿಕೃತ ಸಂಅಝಿಕ ಜಾಲತಾಣ ಹ್ಯಾಂಡಲ್‌ಗಳಲ್ಲಿ ಪೋಟೋಗಳನ್ನು ಹಂಚಿಕೊಳ್ಳಲಾಗಿದೆ.

ನಮ್ಮ ಶ್ವಾನದಳವು ದುರ್ಗಾ ಪೂಜೆಯಲ್ಲಿ ಭಾಗವಹಿಸಿದ್ದು ಇದೇ ಮೊದಲು ಎಂದು ಕೋಲ್ಕತ್ತಾ ಪೊಲೀಸರು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಈ ಚಿತ್ರಗಳು ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಪ್ರಶಂಸೆ ಪಡೆದಿವೆ.

English summary
Kolkata Police's dog squad team of four were the chief guests at the pet-friendly Durga Puja. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X