ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳ ಚುನಾವಣೆ; ಬಂಗಾಳಿ ಭಾಷೆಯಲ್ಲಿ ಮೋದಿ ಮನವಿ

|
Google Oneindia Kannada News

ನವದೆಹಲಿ, ಏಪ್ರಿಲ್ 10: ಪಶ್ಚಿಮ ಬಂಗಾಳದಲ್ಲಿ ಇಂದು ನಾಲ್ಕನೇ ಹಂತದ ಚುನಾವಣೆ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕೆಂದು ಪಶ್ಚಿಮ ಬಂಗಾಳದ ಜನರಿಗೆ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

"ಇಂದು ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಚುನಾವಣೆ ಆರಂಭವಾಗಿದೆ. ದಾಖಲೆಯ ಮಟ್ಟದಲ್ಲಿ ರಾಜ್ಯದ ಜನರು ಮತದಾನ ಮಾಡಲು ಕೇಳಿಕೊಳ್ಳುತ್ತಿದ್ದೇನೆ. ಯುವಜನರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ" ಎಂದು ಬಂಗಾಳಿ ಭಾಷೆಯಲ್ಲಿ ಮೋದಿ ಟ್ವೀಟ್ ಮಾಡಿದ್ದಾರೆ.

PM Narendra Modi Appeals West Bengal People To Cast Vote In Phase 4 Election

ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಮತದಾನ ನಡೆಯಲಿದ್ದು, ಈಗಾಗಲೇ ಮೂರು ಹಂತದ ಮತದಾನ ಪೂರ್ಣಗೊಂಡಿದೆ. ಶನಿವಾರ 44 ಕ್ಷೇತ್ರಗಳಿಗೆ ನಾಲ್ಕನೇ ಹಂತದಲ್ಲಿ ಮತದಾನ ಆರಂಭಗೊಂಡಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ.

ನಂದಿಗ್ರಾಮ್ ಕ್ಷೇತ್ರದಲ್ಲಿ ದೀದಿ ಸೋಲಿನ ಬಗ್ಗೆ ಪ್ರಧಾನಿ ಭವಿಷ್ಯ
44 ಕ್ಷೇತ್ರಗಳಲ್ಲಿನ 373 ಅಭ್ಯರ್ಥಿಗಳ ಹಣೆಬರಹವನ್ನು ಐದು ಜಿಲ್ಲೆಗಳಲ್ಲಿ ನಡೆಯಲಿರುವ ಈ ಚುನಾವಣೆ ನಿರ್ಧರಿಸಲಿದೆ. ಕೂಚ್ ಬೇಹರ್, ಅಲಿಪುರದೌರ್, ಸೌತ್ 24 ಪರಗಣ, ಹೌರಾಹ್ ಹಾಗೂ ಹೂಗ್ಲಿ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದೆ.

ಒಟ್ಟು 11581022 ಮತದಾರರಿದ್ದು, 263016 ಮೊದಲ ಬಾರಿ ಮತದಾನ ಮಾಡುತ್ತಿರುವವರಾಗಿದ್ದಾರೆ. ಬ್ಯಾಲಿ 176001 ಮತದಾರರೊಂದಿಗೆ ಅತಿ ಚಿಕ್ಕ ಕ್ಷೇತ್ರ ಎನಿಸಿಕೊಂಡಿದ್ದು, 313701 ಮತದಾರರೊಂದಿಗೆ ಚುಂಚುರಾ ಅತಿ ದೊಡ್ಡ ಕ್ಷೇತ್ರ ಎಂದು ಕರೆಸಿಕೊಂಡಿದೆ. ಏಪ್ರಿಲ್ 17ರಂದು ಮುಂದಿನ ಹಂತದ ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಹೊರಬೀಳಲಿದೆ.

English summary
PM Narendra Modi appealed west bengal people to cast their vote in 4th phase of election
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X