ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಎಂಸಿ 'ಘರ್‌ ವಾಪಾಸಿ' - ಬಿಜೆಪಿಯ ಮುಕುಲ್ ರಾಯ್‌ಗೆ ಕರೆ ಮಾಡಿದ ಮೋದಿ

|
Google Oneindia Kannada News

ಕೋಲ್ಕತ್ತಾ, ಜೂ. 03: ಬಿಜೆಪಿ ಮುಖಂಡ ಮುಕುಲ್ ರಾಯ್‌ ಪತ್ನಿ ಆಸ್ಪತ್ರೆಯಲ್ಲಿದ್ದು, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ನಿನ್ನೆ ಸಂಜೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ದೂರವಾಣಿ ಕರೆ ಮೂಲಕ ಬಿಜೆಪಿ ಮುಖಂಡ ಮುಕುಲ್ ರಾಯ್ ಜೊತೆ ಮಾತನಾಡಿದ್ದಾರೆ.

ಏತನ್ಮಧ್ಯೆ ಅಭಿಷೇಕ್ ಬ್ಯಾನರ್ಜಿ ಆಸ್ಪತ್ರೆಗೆ ಭೇಟಿ ನೀಡಿದ ಘರ್‌ ವಾಪಾಸಿ ಆತಂಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಕುಲ್ ರಾಯ್ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ದೀದಿ ಇಲ್ಲದೆ ಬದುಕಲಾಗದು - ಮತ್ತೆ ಟಿಎಂಸಿ ಸೇರ್ಪಡೆಗೆ ಬಿಜೆಪಿಯ ಸೋನಾಲಿ ಒಲವು ದೀದಿ ಇಲ್ಲದೆ ಬದುಕಲಾಗದು - ಮತ್ತೆ ಟಿಎಂಸಿ ಸೇರ್ಪಡೆಗೆ ಬಿಜೆಪಿಯ ಸೋನಾಲಿ ಒಲವು

ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್‌ನಿಂದ 2017 ರಲ್ಲಿ ಬಿಜೆಪಿಗೆ ಹೋದ ಪ್ರಮುಖ ನಾಯಕರಲ್ಲಿ ಒಬ್ಬರಾದ ಮುಕುಲ್ ರಾಯ್, ಈಗ ಬಿಜೆಪಿಯೊಳಗೆ ನಿರ್ಲಕ್ಷ್ಯಗೆ ಒಳಗಾಗಿದ್ದಾರೆ ಎಂದು ವರದಿ ತಿಳಿಸಿದೆ. ಈ ಬೆನ್ನಲ್ಲೇ ಅಭಿಷೇಕ್ ಬ್ಯಾನರ್ಜಿ ಆಸ್ಪತ್ರೆಗೆ ಭೇಟಿ ನೀಡಿರುವುದು ಚರ್ಚೆಗೆ ಕಾರಣವಾಗಿದೆ.

PM Modis call to Mukul Roy to enquire about his wifes health

ಇನ್ನು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾದ ಕೆಲವು ತೃಣಮೂಲ ಕಾಂಗ್ರೆಸ್‌ನ ಮುಖಂಡರು ರಾಜ್ಯ ಚುನಾವಣೆಗಳಲ್ಲಿ ದೀದಿಯ ಟಿಎಂಸಿ ಭರ್ಜರಿ ವಿಜಯ ಪಡೆದ ಬಳಿಕ ಪಕ್ಷಕ್ಕೆ ಮರಳುವ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

ತೃಣಮೂಲದಿಂದ ಬಿಜೆಪಿಗೆ ಸೇರಿದ ಸುವೆಂದು ಅಧಿಕಾರಿಗೆ ರಾಜ್ಯದ ಪ್ರತಿಪಕ್ಷ ನಾಯಕರನ್ನಾಗಿ ಮಾಡಿದ ಬಳಿಕ ಸುವೆಂದು ಅಧಿಕಾರಿ ತನ್ನ ಹೊಸ ನಾಯಕತ್ವದಿಂದ ಅಸಮಾಧಾನಗೊಂಡಿದ್ದಾರೆ ಎಂಬ ಊಹಾಪೋಹಗಳು ಹರಡಿದೆ. ಈ ಹಿನ್ನೆಲೆ ಸುವೆಂದು ಅಧಿಕಾರಿ ಘರ್‌ ವಾಪಾಸಿ (ಪಕ್ಷಕ್ಕೆ ಹಿಂತಿರುಗುವುದು) ಆಗಲಿದ್ದಾರೆ. ಮರಳಿ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದೆ.

PM Modis call to Mukul Roy to enquire about his wifes health

ಪ್ರಧಾನಿ ಮೋದಿ, ಮುಕುಲ್ ರಾಯ್ ಜೊತೆ ಕೆಲವು ನಿಮಿಷಗಳ ಕಾಲ ದೂರವಾಣಿ ಕರೆಯಲ್ಲಿ ಮಾತನಾಡಿದ್ದು, ಮುಕುಲ್ ರಾಯ್ ಪತ್ನಿಯ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದು ಮೂಲಗಳು ತಿಳಿಸಿವೆ.

2017 ರಲ್ಲಿ ಬಂಗಾಳದಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಸುಧಾರಿಸಲು ಬಹು ಮುಖ್ಯ ಪಾತ್ರ ವಹಿಸಿದವರು ಮುಕುಲ್ ರಾಯ್. ಎರಡು ವರ್ಷಗಳ ನಂತರ ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ, ತೃಣಮೂಲ ಕಾಂಗ್ರೆಸ್ಸಿಗೆ ಆಘಾತ ನೀಡಿದ ಬಂಗಾಳದ 42 ಸ್ಥಾನಗಳಲ್ಲಿ 18 ಸ್ಥಾನಗಳಲ್ಲಿ ಬಿಜೆಪಿಯ ಗೆಲುವಿಗೆ ಮುಕುಲ್ ರಾಯ್ ಪ್ರಭಾವವೇ ಭಾಗಶಃ ಕಾರಣ.

ರಾಜ್ಯ ಚುನಾವಣೆಗಳಲ್ಲಿ ಬಿಜೆಪಿಯ ಸವಾಲನ್ನು ಎದುರಿಸಿ ಮಮತಾ ಬ್ಯಾನರ್ಜಿ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡಾಗಿನಿಂದ, ಟಿಎಂಸಿ ತೊರೆದ ಅನೇಕರು ಮತ್ತೆ ಟಿಎಂಸಿಗೆ ಮರಳುವ ಅಭಿಲಾಶೆ ವ್ಯಕ್ತಪಡಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
PM Modi's call to Mukul Roy to enquire about his wife's health creates political buzz in Bengal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X