ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖ್ಯಾತ ಬಾಲಿವುಡ್ ಗಾಯಕ ಕೆಕೆ ನಿಧನ: ಮೋದಿ ಸಂತಾಪ

|
Google Oneindia Kannada News

ಕೋಲ್ಕತ್ತಾ, ಜೂನ್ 1: ಕೆಕೆ ಎಂದೇ ಖ್ಯಾತರಾಗಿರುವ ಬಾಲಿವುಡ್ ಖ್ಯಾತ ಗಾಯಕ-ಸಂಗೀತ ನಿರ್ದೇಶಕ ಕೃಷ್ಣಕುಮಾರ್ ಕೋಲ್ಕತ್ತಾದಲ್ಲಿ ಕುಸಿದುಬಿದ್ದು ಮೃತಪಟಿದ್ದಾರೆ. 53 ವರ್ಷದ ಕೆಕೆ ಸಾವಿನಿಂದ ಸಂಗೀತ ಪ್ರಿಯರು, ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಕೆಕೆ ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

Recommended Video

ಸಂಗೀತ ಪ್ರಿಯರಿಗೆ ಆಘಾತ: ಖ್ಯಾತ ಗಾಯಕ KK ಇನ್ನಿಲ್ಲ;ಮೋದಿ‌ ಸಂತಾಪ | #India | OneIndia Kannada

ಕೋಲ್ಕತ್ತಾದ ನಜ್ರುಲ್ ಮಂಚಾ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಈ ವೇಳೆ ಸುಸ್ತು ಕಾಣಿಸಿಕೊಂಡಿತ್ತು, ನಂತರ ಹೋಟೆಲ್‌ಗೆ ಹಿಂದಿರುಗಿದ್ದ ಅವರು ತೀವ್ರ ಅಸ್ವಸ್ತರಾದರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಆದರೆ ಅಷ್ಟರಲ್ಲಾಗಲೇ ಖ್ಯಾತ ಗಾಯಕ ಇಹಲೋಕ ತ್ಯಜಿಸಿದ್ದರು. ಕೆಕೆ ಮೃತಪಟ್ಟಿರುವುದಾಗಿ ಸಿಎಂಆರ್‌ಐ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ.

Sidhu Moose Wala : ಭದ್ರತೆ ವಾಪಸ್ ಪಡೆದ 24 ಗಂಟೆಯಲ್ಲೇ ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆSidhu Moose Wala : ಭದ್ರತೆ ವಾಪಸ್ ಪಡೆದ 24 ಗಂಟೆಯಲ್ಲೇ ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆ

ಕೋಲ್ಕತಾದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಕೆಕೆ ತಂಡ ಮೇ.30ರಂದು ನಗರಕ್ಕೆ ಬಂದಿತ್ತು. ಸಂಗೀತ ಕಾರ್ಯಕ್ರಮದ ಕುರಿತು ಗಾಯಕ ಕೃಷ್ಣಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೆಕೆ ಸಂಗೀತ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿತ್ತು.

PM Modi and others mourn Popular Singer Krishnakumar Kunnath sudden demise

ಕೆಕೆ ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. 1990ರ ದಶಕದಲ್ಲಿ ಕೆಕೆ ಹಾಡಿದ ಹಾಡುಗಳು ಜನಪ್ರಿಯವಾಗಿದ್ದವು.

ಅವರ 1999 ರ ಮೊದಲ ಆಲ್ಬಂ 'ಪಲ್' ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿತು. 2000 ರ ದಶಕದ ಆರಂಭದಿಂದ, ಅವರು ಹಿನ್ನೆಲೆ ಗಾಯನದಲ್ಲಿ ವೃತ್ತಿಜೀವನ ಆರಂಭಿಸಿದರು. ಹಿಂದಿ ಚಿತ್ರರಂಗದಲ್ಲಿ ಹಲವು ಜನಪ್ರಿಯ ಹಾಡುಗಳನ್ನು ಕೆಕೆ ಹಾಡಿದ್ದಾರೆ.

ಕೆಕೆ ಸಾವಿನಿಂದ ಬಾಲಿವುಡ್ ಮಾತ್ರವಲ್ಲದೆ ಸಂಗೀತಪ್ರಿಯರು ಆಘಾತಕ್ಕೊಳಗಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೆಕೆ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದು, ಸಾವು ಆಘಾತ ತಂದಿದೆ ಎಂದಿದ್ದಾರೆ.

ಕೆಕೆ ಸಾವಿಗೆ ಮೋದಿ ಸಂತಾಪ

"ಕೆಕೆ ಎಂದೇ ಹೆಸರಾಗಿದ್ದ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರ ಅಕಾಲಿಕ ನಿಧನದಿಂದ ದುಃಖವಾಗಿದೆ. ಅವರ ಹಾಡುಗಳು ಎಲ್ಲಾ ವಯೋಮಾನದ ಜನರ ಮನಸೂರೆಗೊಂಡಿದ್ದವು. ಅವರ ಹಾಡುಗಳ ಮೂಲಕ ನಾವು ಅವರನ್ನು ಯಾವಾಗಲೂ ನೆನಪಿಟ್ಟುಕೊಳ್ಳುತ್ತೇವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಖಃ ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

"ಕೆಕೆ ಅವರ ದುಃಖದ ನಿಧನದ ಬಗ್ಗೆ ತಿಳಿದು ತುಂಬಾ ದುಃಖ ಮತ್ತು ಆಘಾತವಾಗಿದೆ. ಇದು ದೊಡ್ಡ ನಷ್ಟ! ಓಂ ಶಾಂತಿ" ಎಂದು ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಗಾಯಕಿ ಹರ್ಷದೀಪ್ ಕೌರ್ ಟ್ವೀಟ್ ಮಾಡಿ, "ನಮ್ಮ ಪ್ರೀತಿಯ ಕೆಕೆ ಇನ್ನಿಲ್ಲ ಎಂದು ನಂಬಲು ಸಾಧ್ಯವಿಲ್ಲ. ಇದು ನಿಜವಾಗಿಯೂ ನಿಜವಾಗಲು ಸಾಧ್ಯವಿಲ್ಲ. ಪ್ರೀತಿಯ ಧ್ವನಿ ಹೋಯಿತು. ಹೃದಯ ವಿದ್ರಾವಕ ಸುದ್ದಿ" ಎಂದಿದ್ದಾರೆ.

ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಟ ಟ್ವೀಟ್ ಮಾಡಿದ್ದು, ಕೆಕೆ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ, "ಕೋಲ್ಕತ್ತಾದಲ್ಲಿ ಪ್ರದರ್ಶನ ನೀಡುವಾಗ ಅನಾರೋಗ್ಯಕ್ಕೆ ಒಳಗಾಗಿ ಕೆಕೆ ನಿಧನರಾದ ಸುದ್ದಿ ನಿಜಕ್ಕೂ ದುರಂತ. ಇದು ಜೀವನ ಅನಿಶ್ಚಿತ ಎಂಬುದಕ್ಕೆ ಮತ್ತೊಂದು ಉದಾಹರಣೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ. ಓಂ ಶಾಂತಿ" ಎಂದಿದ್ದಾರೆ.

English summary
Popular Singer Krishnakumar Kunnath While Performing Live in Kolkata he fell ill, Was declared dead at the hospital. Here are the condolence reaction from PM Modi and others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X