ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಫೋಟೋ ಬಳಸಿ ಪಶ್ಚಿಮ ಬಂಗಾಳದ ಹಿಂಸಾಚಾರಕ್ಕೆ ಬಣ್ಣ

|
Google Oneindia Kannada News

ನವ ದೆಹಲಿ, ಮೇ 14: ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಮಂದಿ ಗಾಯಗೊಂಡ ಹಾಗೂ ಮನೆ ಸುಡುತ್ತಿರುವ ಫೋಟೋಗಳು ವೈರಲ್‌ ಆಗಿದ್ದು, ಇವು ಬಂಗಾಳದಲ್ಲಿ ಆದ ಹಿಂಸಾಚಾರದ ಫೋಟೋಗಳು ಎಂದು ಹೇಳಲಾಗಿತ್ತು.

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ದಲಿತ ಹಿಂದೂಗಳನ್ನು ಹೇಗೆ ಥಳಿಸಲಾಯಿತು ಮತ್ತು ಅವರ ಮನೆಗಳಿಗೆ ಹೇಗೆ ಬೆಂಕಿ ಹಚ್ಚಲಾಯಿತು ಎಂದು ಸಾಮಾಜಿಕ ಮಾಧ್ಯಮದಲ್ಲಿ ಈ ಫೋಟೋಗಳನ್ನು ಅನೇಕ ಬಳಕೆದಾರರು ಹಂಚಿಕೊಂಡಿದ್ದರು.

ವಿಡಿಯೋ ಲೀಕ್‌ ಮಾಡಿ ನರೇಂದ್ರ ಮೋದಿ ಬಗ್ಗೆ ಅಪಪ್ರಚಾರವಿಡಿಯೋ ಲೀಕ್‌ ಮಾಡಿ ನರೇಂದ್ರ ಮೋದಿ ಬಗ್ಗೆ ಅಪಪ್ರಚಾರ

ಆದರೆ, ಇವು ಫೇಕ್‌ ಫೋಟೋಗಳಾಗಿವೆ. ಅಂದಹಾಗೆ, ಈ ಫೋಟೋಗಳು ಪಶ್ಚಿಮ ಬಂಗಾಳದಲ್ಲ ಬದಲಿಗೆ ಪಾಕಿಸ್ತಾನದಾಗಿವೆ.

 Passed Off As Bengal Violence These Images Are From Pakistan

ವಾಯ್ಸ್ ಆಫ್ ಪಾಕಿಸ್ತಾನ್ ಟ್ವಿಟ್ಟರ್ ಖಾತೆಯಲ್ಲಿ ''ಮೇ 11 ರಂದು ಹಿಂದೂ ಸಮುದಾಯದ ಮೇಲೆ ಮತ್ತೊಮ್ಮೆ ದಾಳಿಯಾಗಿದೆ. ಗುಲಾಬ್ ಮತ್ತು ಅವರ ಪತ್ನಿ ಪಂಜಾಬ್‌ನ ರಹೀಮಿಯಾರ್ ಖಾನ್‌ನಲ್ಲಿ ನೆರೆಹೊರೆಯ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಅವರ ಪತ್ನಿ ಸಾರ್ವಜನಿಕವಾಗಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ.'' ಎಂದು ಹೇಳಲಾಗಿತ್ತು.

ಈ ಟ್ವಿಟ್ಟರ್ ಪೋಸ್ಟ್‌ನ ಚಿತ್ರಗಳನ್ನು ಬಂಗಾಳದಲ್ಲಿ ನಡೆದ ಗಲಭೆಗಳಂತೆ ಬಳಸಲಾಗುತ್ತಿತ್ತು. ಆದರೆ, ಪಾಕಿಸ್ತಾನದಲ್ಲಿ ನಡೆದ ಈ ಘಟನೆಯನ್ನು ಹಲವಾರು ವೆಬ್‌ಸೈಟ್‌ಗಳು ವರದಿ ಮಾಡಿದ್ದವು. ವರದಿ ಪ್ರಕಾರ ಪಾಕಿಸ್ತಾನದಲ್ಲಿ ಮಕ್ಕಳು ಒಳಗೆ ಇದ್ದ 21 ಮನೆಗಳು ಸುಟ್ಟು ಹೋಗಿವೆ.

ಪಾಕಿಸ್ತಾನದ ಪಂಜಾಬ್ ಪೊಲೀಸರು ಈ ಘಟನೆ ಪಂಜಾಬ್‌ನ ರಹೀಂ ಯಾರ್ ಖಾನ್‌ನಲ್ಲಿ ನಡೆದಿದ್ದು, ಇದು ಹಿಂದೂ ಮತ್ತು ಮುಸ್ಲಿಂ ಕುಟುಂಬಗಳ ನಡುವಿನ ಭೂ ವಿವಾದ ಎಂದು ತಿಳಿಸಿದ್ದಾರೆ.

English summary
A set of images of injured people and burning houses has gone viral on the social media. passed off as bengal violence But these images are from Pakistan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X